'ಕಸಬ್' ಇದ್ದಿದ್ದ ಜೈಲಿಗೆ ವಿಜಯ್ ಮಲ್ಯ - ಮೋದಿ ಸರ್ಕಾರದ ಶ್ರಮಕ್ಕೆ ಫಲ?

og:image

ಮುಂಬಯಿ: ನಗರದ ಆರ್ಥರ್ ರಸ್ತೆ ಜೈಲಿನಲ್ಲಿರುವ ವ್ಯವಸ್ಥೆ ಮತ್ತು ಭದ್ರತಾ ಪರಿಸ್ಥಿತಿಗಳ ಬಗ್ಗೆ ಲಂಡನ್ ನ್ಯಾಯಾಲಯಕ್ಕೆ ಕೇಂದ್ರ ಸರಕಾರ ವರದಿ ಸಲ್ಲಿಸಿದೆ. ಹಣದ-ಲಾಂಡರಿಂಗ್ ಪ್ರಕರಣದಲ್ಲಿ  ಆರೋಪಿಸಯಾಗಿರುವ ಮದ್ಯ ದೊರೆ, ವಿಜಯ್ ಮಲ್ಯ (61), ಭಾರತದಿಂದ ಪರಾರಿಯಾಗಿದ್ದು ಯುಕೆ ಯಲ್ಲಿ ನೆಲೆಸಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಮೋದಿ ಸರ್ಕಾರದ ಶ್ರಮಕ್ಕೆ ಶೀಘ್ರ ಫಲದೊರೆಯುವ ಸಾಧ್ಯತೆ ಇದೆ.

ಮಲ್ಯರನ್ನು ಆರ್ಥರ್ ರೋಡ್ ಜೈಲಿಗೆ ಕರೆತಂದಾಗ,  ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್ ರನ್ನು ಕೂಡಿಹಾಕಿದ್ದ ಬರ್ರಾಕ್ 12 ನಲ್ಲಿ ಇರಿಸಲಾಗುವುದು.

 ರೇಸ್ಕೋರ್ಸ್ ಬಳಿಯಿರುವ ಆರ್ಥರ್ ರೋಡ್ ಜೈಲಿನಲ್ಲಿ ಮಲ್ಯ ಸುರಕ್ಷತೆ ಮತ್ತು ಭದ್ರತೆಗಾಗಿ ಎಲ್ಲ ಕ್ರಮಗಳನ್ನು ಮಾಡಲಾಗಿದೆ ಎಂದು ಸರಕಾರ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಈ ವರದಿಯನ್ನು ಜೈಲು ಇಲಾಖೆಯು ವಿವರವಾಗಿ ಸಿದ್ಧಪಡಿಸಿದೆ ಮತ್ತು ಸರಕಾರಕ್ಕೆ ಹಸ್ತಾಂತರಿಸಿದೆ. ಸಿಬಿಐ ಮೂಲಕ ಅದನ್ನು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಇದು ಮಲ್ಯ ಹಸ್ತಾಂತರದ ಪ್ರಕರಣವನ್ನು ಶೀಘ್ರವಾಗಿ ನಡೆಯಲು ಸಹಾಯಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಮಲ್ಯ, ಬ್ಯಾಂಕ್ ಸಾಲದಿಂದ ಪಡೆದ ಹಣವನ್ನು ಕಾನೂನುಬಾಹಿರವಾಗಿ ವಿದೇಶಕ್ಕೆ ರವಾನಿಸಲಾಗಿದೆ ಎಂದು ವಿವರಿಸಿದ್ದಾರೆ. 

ಮೋದಿ ಸರ್ಕಾರ್ ನ ಸಾಧನೆ

ಭಾರತ ಮತ್ತು ಯುಕೆ, 1992 ರಲ್ಲಿ, ಅರೋಪಿಗಳನ್ನು ಪರಸ್ಪರ ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು, ಆದರೆ ಇಲ್ಲಿಯವರೆಗೆ, ಈ ಒಪ್ಪಂದವನ್ನು ಭಾರತ ಸರಿಯಾಗಿ ಬಳಸಿಕೊಂಡಿಲ್ಲ.  ಕಳೆದ ಅಕ್ಟೋಬರ್ನಲ್ಲಿ 2002 ರ ಗಲಭೆಗಳ ಅರೋಪಿ ಸಮೀರ್ಭಾಯಿ ವಿನುಭಾಯ್ ಪಟೇಲ್ ಅವರನ್ನು ಈ ಒಪ್ಪಂದದ ಅನ್ವಯ ಭಾರತಕ್ಕೆ ಕಳುಹಿಸಲಾಗಿದೆ.  ಒಂದು ವೇಳೆ ಮಲ್ಯರನ್ನು ದೇಶಕ್ಕೆ ವಾಪಸ್ ಕರೆಸಿಕೊಂಡರೆ, ಅದು ಮೋದಿ ಸರ್ಕಾರದ ಸಾಧನೆಯಾಗಲಿದ್ದು, ಬಡ ಅರೋಪಿಗಳನ್ನು ಮಾತ್ರ ಶಿಕ್ಷಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಅರೋಪಿಸುತ್ತಿರುವ ವಿರೋಧಿಗಳ ಬಾಯಿ ಮುಚ್ಚಿಸಲಿದೆ.
Tags : Modi, Indian, Govt, Malya, Case, UK, Jail, Mumbai, 
Previous Post Next Post