"ನಿಮ್ಮನ್ನ ನೀವು ಏನ್ ಅಂದ್ಕೊಂಡಿದ್ದೀರ?" ಮೋದಿ ಖಡಕ್ ವಾರ್ನಿಂಗ್

og:image

ನವದೆಹಲಿ (ಐಎಎನ್ಎಸ್): "ಮುಂದಿನ ಲೋಕಸಭಾ ಚುನಾವಣೆಯನ್ನು ಕಡೆಗಣಿಸಬೇಡಿ" ಎಂದು ಬಿಜೆಪಿಯ ಸಂಸತ್ ಸದಸ್ಯರ ಗೈರುಹಾಜರಿಯಿಂದ ಕೋಪಗೊಂಡ ಪ್ರಧಾನಿ ನರೇಂದ್ ಮೋದಿ ಎಚ್ಚರಿಕೆ ನೀಡಿದ್ದಾರೆ. ಕಟುಮಾತುಗಳಿಂದ ಎಚ್ಚರಿಕೆ ನೀಡಿದ ಪ್ರಧಾನಿ ಸದಸ್ಯರ ನಿದ್ದೆಗೆಡಿಸಿದ್ದಾರೆ.

ಹಿಂದುಳಿದ ವರ್ಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲು ಪ್ರಮುಖ ಮಸೂದೆರಯೊಂದನ್ನು ಮಂಡಿಸಿದ್ದ ಪ್ರಧಾನಿ, ಬಿಜೆಪಿ ಶಾಸಕರ ಗೈರುಹಾಜರಿಯಿಂದ ಸಂವಿಧಾನಾತ್ಮಕ ತಿದ್ದುಪಡಿ ಮಾಡಲಾಗಲಿಲ್ಲ.ಇದರಿಂದ ಕುಪಿಕಗೊಂಡ ಮೋದಿ "ಆಪ್ ಅಪ್ನಿ ಮರ್ಜಿ ಕಿ ಕಾರ್ತೆ ರಾಹಿಯೆ, ಮುಜೆ ಜೋ ಕಾರ್ನಾ ಹೈ, 2019 ಮೇನ್ ಕರೋಂಗಾ." (ನಿಮ್ಮ ಇಚ್ಛೆಯಂತೆ ನೀವು ಮಾಡುತ್ತಿರಿ ಮತ್ತು 2019 ರಲ್ಲಿ ನಾನು ನನ್ನ ಇಚೆಯಂತೆ ವರ್ತಿಸುತ್ತೇನೆ)"ಎಂದು ಗುಡುಗಿದ್ದಾರೆ.

 "ಇಲ್ಲಿ ನೀವು ಮತ್ತು ನಾನು ಲೆಕ್ಕಕ್ಕಿಲ್ಲ (ವ್ಯಕ್ತಿಗಿಂತ ಪಕ್ಷ ಮೇಲು)" ಎಂದು ಮೋದಿ ಹೇಳಿದ್ದಾರೆ ಮತ್ತು "ನೀವು ನಿಮ್ಮ ಬಗ್ಗೆ ಏನು ಯೋಚಿಸಿ ಕೊಂಡಿದ್ದೀರಿ?" ಎಂದು ಕ್ಲಾಸ್ ತಗೊಂಡರು. ಹಿಂದುಳಿದ ವರ್ಗಗಳಿಗೆ ರಾಷ್ಟ್ರೀಯ ಕಮಿಷನ್ (ಎನ್ಸಿಬಿಸಿ) ಮಸೂದೆ ಸಂಸತ್ತಲ್ಲಿ ಅನುಮೋದನೆ ದೊರೆಯಲು ಪಕ್ಷದ ಸದಸ್ಯರ ಗೈರುಹಾಜರಿಯೇ ಕಾರಣವಾದರಿಂದ ತೀವ್ರ ಮುಜುಗರಗೊಂಡ ಪ್ರಧಾನಮಂತ್ರಿ ಕೋಪವಗೊಂಡರು. ಸಂಸತ್ತಿಗೆ 31 ಬಿಜೆಪಿ ಮತ್ತು ಎನ್.ಡಿ.ಎ ಸಂಸದರು ಗೈರುಹಾಜರಾಗಿದ್ದರು.

Tags: Modi Angry over members absence, 2019 election, Modi Warning to Members, 31 BJP and NDA MPs being absent.
Previous Post Next Post