ಇಂದಿರಾ ಕ್ಯಾಂಟೀನ್ ಗೆ ಇಡ್ಲಿ, ರೈಸ್ ಎಲ್ಲಿಂದ ಬರುತ್ತದೆ? ಇಲ್ಲಿದೆ ಉತ್ತರ

og:image

ಬೆಂಗಳೂರು: ಪೂರ್ವ ಬೆಂಗಳೂರಿನ ಕೊನೆನಾ ಅಗ್ರಹಾರದಲ್ಲಿರುವ ಓಲ್ಡ್ ಏರ್ಪೋರ್ಟ್ ರೋಡ್ನಲ್ಲಿನ ಮೊದಲ ಇಂದಿರಾ ಕ್ಯಾಂಟೀನ್ ನ ಕೇಂದ್ರೀಕೃತ ಅಡಿಗೆ ಮನೆಯಲ್ಲಿ, ಅರ್ಧ ಘಂಟೆಯಲ್ಲಿ 900 ಕೆಜಿ ಅಕ್ಕಿ, 20 ನಿಮಿಷಗಳಲ್ಲಿ 1,440 ಇಡ್ಲಿಗಳು ಮತ್ತು 300 ಲೀಟರ್ ಸಾಂಬಾರ್ ಒಂದೇ ಬಾರಿಗೆ ಬೇಯಿಸಲ್ಪಡುತ್ತದೆ. 

ಈ ಆಡುಗೆ ಮನೆಯಲ್ಲಿ ಬೇಯಿಸಿದ ಆಹಾರಗಳು,  101 ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಸರಬರಾಜು ಮಾಡುತ್ತದೆ. ಬುಧವಾರದಿಂದ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಎಲ್ಲರಿಗೂ ಕಡಿಮೆ ಬೆಲೆಗೆ ಆಹಾರ ನೀಡುತ್ತಾ ಇದೆ.

ಬಿಬಿಎಂಪಿ ಬೆಂಗಳೂರಿನ ಎರಡು ಕ್ಯಾಟರಿಂಗ್ ಸಂಸ್ಥೆಗಳಿಗೆ 27 ಕೇಂದ್ರೀಕೃತ ಅಡಿಗೆಮನೆಗಳನ್ನು ನಡೆಸಲು ಗುತ್ತಿಗೆನೀಡಿದೆ. ಓಲ್ಡ್ ಏರ್ಪೋರ್ಟ್ ರೋಡ್ನಲ್ಲಿನ ಅಡುಗೆಮನೆಯಲ್ಲಿ 22 ಕಾರ್ಮಿಕರನ್ನು ಕೆಲಸಮಾಡುತ್ತಿದ್ದಾರೆ. ಪ್ರತೀ ಊಟಕ್ಕೆ, ಬಿಬಿಎಂಪಿ ಯಿಂದ 32 ರೂ. ಮತ್ತು ಗ್ರಾಹಕರಿಂದ 25 ರೂ. ಕ್ಯಾಟರಿಂಗ್ ಸಂಸ್ಥೆಗಳಿಗೆ ಸೇರುತ್ತದೆ. "ಇಡಿಲಿ, ಸುಜಿ ಮತ್ತು ಅಕ್ಕಿಯನ್ನು ಬೇಯಿಸಲು ಕಿಚನ್ ಸ್ಟೀಮ್ ತಂತ್ರಜ್ಞಾನವನ್ನು ಬಳಸುತ್ತದೆ" ಎಂದು ಇಂದಿರಾ ಕ್ಯಾಂಟೀನ್ಸ್ನ ಉಸ್ತುವಾರಿ ಹೊಂದಿರುವ ಬಿಬಿಎಂಪಿ ವಿಶೇಷ ಅಧಿಕಾರಿ ಮನೋಜ್ ರಾಜನ್ ಹೇಳುತ್ತಾರೆ. 

ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಬುಧವಾರ ಮಧ್ಯಾಹ್ನ ಅಡುಗೆಮನೆಗೆ ಭೇಟಿ ನೀಡಿದರು ಮತ್ತು ಶುದ್ಧ, ತಾಜಾ ಮತ್ತು ಆರೋಗ್ಯಕರ ಆಹಾರವನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಸರ್ಕಾರದ ಕ್ರಮವನ್ನು ಪ್ರಶಂಸಿಸಿದರು. ಆಡುಗೆ ಮನೆಯಲ್ಲಿ ಕೈಗವಸುಗಳು, ಕ್ಯಾಪ್ಗಳು ಮತ್ತು ಅಪ್ರೋನ್ಗಳನ್ನು ಧರಿಸುತ್ತಿದ್ದ ಸಿಬ್ಬಂದಿಗಳು ಭೋಜನಕ್ಕೆ, ಇಂದಿರಾ ಕ್ಯಾಂಟೀನ್ ಗೆ ಸರಬರಾಜು ಮಾಡಲು ವಾಂಗೀ ಭಾತನ್ನು ಸಿದ್ಧಪಡಿಸುತ್ತಿದ್ದರು. ಅಡುಗೆ, ಮೊಸರು, ತರಕಾರಿಗಳು ಮತ್ತು ಇತರ ಸರಕುಗಳನ್ನು ಶೇಖರಿಸಲು ತಂಪಾದ ಶೇಖರಣಾ ಘಟಕವಿದೆ. 

ರಾಜ್ಯ ಸರ್ಕಾರವು, 61 ಲಕ್ಷ ರೂಪಾಯಿಯಂತೆ ಪ್ರತೀ 27 ಕೇಂದ್ರೀಕೃತ ಅಡಿಗೆಮನೆಗಳಿಗಾಗಿ ಖರ್ಚುಮಾಡಿದೆ. 

English Summary: Karnataka govt Indira Canteen Cheap food, less price, Rahul Gandhi inaugurated
Tags : Cheap Food, Karnataka Govt, Idlis,
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post