ಚೀನಾಗೆ ಪವರ್ ಫುಲ್ ಶಾಕ್ ನೀಡಿದ ನರೇಂದ್ರ ಮೋದಿ - ಕರೆಂಟ್ ಬಿಸಿನೆಸ್ ಬಂದ್..!!

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image
ಹೊಸದಿಲ್ಲಿ: ಭಾರತ ತನ್ನ ವಿದ್ಯುತ್ ಪ್ರಸರಣ ವಲಯಕ್ಕೆ ಪ್ರವೇಶಿಸುವ ಉದ್ಯಮಗಳಿಗೆ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ವಿದ್ಯುತ್ ಮತ್ತು ಟೆಲಿಕಾಂ ಸಾಧನಗಳ ಮೇಲೆ ಮಾಲ್ವೇರ್-ಗಾಗಿ (ವೈರಸ್) ಕಠಿಣ ತಪಾಸಣೆ ನಡೆಸುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮವು, ಭಾರತದ ಸಂವೇದನಾಶೀಲ ವಲಯಗಳಾದ ವಿದ್ಯುತ್ ಮತ್ತು ಟೆಲಿಫೋನ್ ಉದ್ಯಮಗಳಲ್ಲಿ ಚೀನಾದ ಬೆಳವಣಿಗೆಯನ್ನು ಪರಿಶೀಲಿಸುವ ಗುರಿ ಹೊಂದಿದೆ ಎನ್ನಲಾಗಿದೆ.
ಹರ್ಬಿನ್ ಎಲೆಕ್ಟ್ರಿಕ್, ಡಾಂಗ್ಫ್ಯಾಂಗ್ ಎಲೆಕ್ಟ್ರಾನಿಕ್ಸ್, ಶಾಂಘೈ ಎಲೆಕ್ಟ್ರಿಕ್ ಮತ್ತು ಸಿಫಂಗ್ ಆಟೊಮೇಷನ್ ಮೊದಲಾದ ಚೈನೀಸ್ ಸಂಸ್ಥೆಗಳು ಭಾರತದಲ್ಲಿನ 18 ನಗರಗಳಲ್ಲಿ ವಿದ್ಯುಚ್ಛಕ್ತಿ ವಿತರಣಾ ಜಾಲಗಳನ್ನು ನಿರ್ವಹಿಸುತ್ತಿದೆ.

ವಿದ್ಯುತ್ ಕ್ಷೇತ್ರಗಳಲ್ಲಿ ಚೀನೀ ಪಾಲ್ಗೊಳ್ಳುವಿಕೆಯ ವಿರುದ್ಧ ಸ್ಥಳೀಯ ಸಂಸ್ಥೆಗಳು ದೀರ್ಘಾವಧಿಯಿಂದ ಲಾಬಿ ಮಾಡುತ್ತಿವೆ, ಚೀನಾದ ಪಾಲ್ಗೊಳ್ಳುವಿಕೆಯಿಂದ ಸುರಕ್ಷತಾ ಕಾಳಜಿಯನ್ನು ಹೆಚ್ಚಿಸುತ್ತದೆ, ಅಷ್ಟೇ ಅಲ್ಲದೇ ಚೀನೀ ಮಾರುಕಟ್ಟೆಗಳಿಗೆ ಭಾರತದ ಪ್ರವೇಶವಕ್ಕೆ ಚೀನಾ ಒಪ್ಪಿಗೆ ನೀಡುತ್ತಿಲ್ಲ.
ಮೂರು ದಶಕಗಳ ನಂತರ, ಭಾರತ ಮತ್ತು ಚೀನಾ ತಮ್ಮ ಅತ್ಯಂತ ಗಂಭೀರವಾದ ಮಿಲಿಟರಿ ಮುಖಾಮುಖಿಯ ಬಳಿಕ, ಚೀನೀಯರ ವ್ಯಾಪಾರವನ್ನು ನಿರ್ಬಂಧಿಸುವ ಪ್ರಧಾನಿ ನರೇಂದ್ರ ಮೋದಿಯ ಪ್ರಯತ್ನವು ಹೆಚ್ಚು ಬೆಂಬಲವನ್ನು ಗಳಿಸುತ್ತಿದೆ, ಅಷ್ಟೇ ಅಲ್ಲದೆ ಸೈಬರ್ ದಾಳಿಯ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರ ಪ್ರಕಾರ, ಭಾರತದಲ್ಲಿ ಹೂಡಿಕೆ ಮಾಡಲು ಬಯಸುವ ಕಂಪನಿಗಳು ಕನಿಷ್ಠ 10 ವರ್ಷಗಳಿಂದ ಭಾರತದಲ್ಲೇ ಕಾರ್ಯನಿರ್ವಹಿಸುತ್ತಿರಬೇಕು, ಭಾರತೀಯ ಅಧಿಕಾರಿಗಳನ್ನು ಉನ್ನತ ಕಾರ್ಯನಿರ್ವಾಹಕ ಹುದ್ದೆಗೆ ನೇಮಿಸಬೇಕು ಎಂದು ಮತ್ತು ನಿರ್ಧಿಷ್ಟ ಕಾಲ ಭಾರತದಲ್ಲಿ ನೆಲೆಸಿದ್ದ ವಿದೇಶಿಯರನ್ನು ಮಾತ್ರ ಉದ್ಯೋಗಕ್ಕೆ ಸೇರಿಸಬೇಕು ಎಂಬ ನಿಯಮಗಳು ಹೊಸ ಕಾನೂನಿನಲ್ಲಿ ಇರಬಹುದು ಎಂದಿದ್ದಾರೆ.

English Summary: India tightens the rules to enter Power and Telecom sector of India. It is targeted to tackle China.
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News