ವಿಶ್ವದಲ್ಲಿ ಈಗಾಗಲೇ ನೂರಾರು ಯುವಕರನ್ನು ಬಲಿತೆಗೆದುಕೊಂಡಿರುವ ಬ್ಲೂವೇಲ್ ಎಂಬ ಡೆಡ್ಲಿ ಗೇಮ್ ಈಗ ಚಿತ್ರವಾಗಿ ಮೂಡಿಬರಲಿದೆ. ಕರಾವಳಿ ಮೂಲದ ಯುವಕರ ತಂಡವೊಂದು “ಮಾಯಾ ಕನ್ನಡಿ” ಎಂಬ ಚಿತ್ರದ ಮೂಲಕ ಕನ್ನಡಿಗರನ್ನು ಥ್ರಿಲ್ ಮಾಡಲು ತಯಾರಾಗಿದ್ದಾರೆ.

ದುಬೈ ಮೂಲದ ವಿನೋದ್ ಪೂಜಾರಿ ಪ್ರಥಮ ಭಾರಿಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಪ್ರಭು ಮುಂಡ್ಕೂರು ಜೊತೆಗೆ ಕನ್ನಡ ಚಿತ್ರರಂಗದ ಮೇರು ನಟ ಕೆ. ಎಸ್ ಶ್ರೀಧರ್ ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಪ್ರಭು ಮುಂಡ್ಕೂರು ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಚಿತ್ರಗಳು ತೆರೆ ಮೇಲೆ ಮೂಡಿಬರಲಿದೆ. ಮುಂಬಯಿ ಮೂಲದ ನಟಿ, ಈಗಾಗಲೇ ತುಳು ಚಿತ್ರರಂಗದಲ್ಲಿ ತನ್ನ ನಟನೆಯಿಂದ ಜನರ ಮನಗೆದ್ದ ಕಾಜಲ್ ಕುಂದರ್, ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ.
ಇದರ ಜೊತೆ ಅನ್ವಿತ ಸಾಗರ್, ಅನೂಪ್ ಸಾಗರ್, ಕಿರಿಕ್ ಪಾರ್ಟಿ ಖ್ಯಾತಿಯ ಅಶ್ವಿನ್, ರಂಗಿತರಂಗದ ರಫೀಕ್ ಪಾತ್ರಧಾರಿ ಕಾರ್ತಿಕ್ ರಾವ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಅಭಿಷೇಕ್ ಎಸ್. ಎನ್ ಸಂಗೀತ ನೀಡಿರುವ ಈ ಚಿತ್ರಕ್ಕೆ, ಸುಜೀತ್ ನಾಯಕ್ ಎಡಿಟಿಂಗ್ ಮಾಡಿದ್ದಾರೆ. ಮ್ಯಾಂಡಿ ಮಂಜು ಚಿತ್ರದ ಬರಹಗಾರರಾಗಿದ್ದು, ತುಳು ಚಿತ್ರ ನಿರ್ದೇಶಕ ರಂಜಿತ್ ಬಜ್ಪೆ ಚಿತ್ರದ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ.
ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಇದನ್ನು ವೀಕ್ಷಿಸಬಹುದು.ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.