ವಿಲಕ್ಷಣ ಘಟನೆಯೊಂದರಲ್ಲಿ, ಛಾಯಗ್ರಾಹಕ ಕೇರಳದಲ್ಲಿ ಮೃತನ ಚಿತ್ರಗಳನ್ನು ಕ್ಲಿಕ್ ಮಾಡಲು ಹೋದಾಗ ಸತ್ತನೆಂದು ಭಾವಿಸಲಾದ ವ್ಯಕ್ತಿ ಬದುಕಿರುವುದನ್ನು ಗಮನಿಸಿ ಆತನ ಪ್ರಾಣ ಉಳಿಸಿದ್ದಾನೆ.
ಶಿವದಾಸನ್ ಅವರ ತಲೆಗೆ ಹೊಡೆತ ಬಿದ್ದಿದ್ದು, ಸಮಯೋಚಿತ ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ಮೃತಪಟ್ಟಿದ್ದಾರೆಂದು ಭಾವಿಸಲಾಗಿತ್ತು. ಮೃತ ವ್ಯಕ್ತಿಯ ಚಿತ್ರಗಳನ್ನು ತೆಗೆದು ಕೇಸಿನಲ್ಲಿ ಸಾಕ್ಷಕ್ಕಾಗಿ ಬಳಸಲು, ಪೊಲೀಸ್ ಛಾಯಗ್ರಾಹಕ ಟಾಮಿ ಥಾಮಸ್ ಅವರನ್ನು ಕೇರಳದ ಎರ್ನಾಕುಲಂ ಜಿಲ್ಲೆಯ ಪೊಲೀಸರು ಕರೆಸಿಕೊಂಡರು.
ಸ್ಥಳವನ್ನು ತಲುಪಿದ ನಂತರ ಮತ್ತು ಅವನ ಕಾಮೆರವನ್ನು ಜೋಡಿಸಿದ ಮೇಲೆ, ಟಾಮಿ ವಿಚಿತ್ರವಾದದ್ದನ್ನು ಅರಿತುಕೊಂಡನು - ಆ ಮನುಷ್ಯನು ಜೀವಂತವಾಗಿದ್ದನು. ದೇಹದಿಂದ ಶಬ್ದ ಹೊರಹೊಮ್ಮುವುದನ್ನು ಕೇಳಿಸಿಕೊಂಡಾಗ, ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದ ಟಾಮಿ ಬೆಚ್ಚಿಬಿದ್ದು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದರು.
ಎರಡು ದಶಕಗಳಿಂದ ಪೊಲೀಸರೊಂದಿಗೆ ಇದೇ ರೀತಿ ಶವಗಳ ಫೋಟೋಗ್ರಫಿ ಕೆಲಸ ಮಾಡುತ್ತಿರುವ ಟಾಮಿ, ಕೋಣೆಯಲ್ಲಿ ಬೆಳಕು ಕಡಿಮೆ ಇರುವುದರಿಂದ ಸ್ಪಷ್ಟವಾದ ಚಿತ್ರವನ್ನು ಪಡೆಯಲು ದೇಹಕ್ಕೆ ಹತ್ತಿರವಾಗಬೇಕಾಗಿತ್ತು ಎಂದು ಮಾಧ್ಯಮಕ್ಕೆ ತಳಿಸಿದರು. ಆದರೆ ಮನುಷ್ಯ ಉಸಿರಾಡುವುದನ್ನು ಕೇಳಿದಾಗ ಅವನು ಶೀಘ್ರವಾಗಿ ಪ್ರತಿಕ್ರಿಯಿಸಿದನು.
"ಆ ವ್ಯಕ್ತಿ ನಿಜವಾಗಿ ಜೀವಂತವಾಗಿದ್ದಾನೆ ಎಂದು ನನಗೆ ಗೊತ್ತಾದಾಗ ನನಗೆ ಭಯ ಆಯ್ತು!" ಎಂದು ಟಾಮಿ ಹೇಳಿದರು.
ಟಾಮಿ ಅವರ ಅನುಮಾನ ನಿಜವಾಗಿ ವ್ಯಕ್ತಿ ನಿಜವಾಗಿಯೂ ಜೀವಂತವಾಗಿದ್ದನು. ಪಾಲಕ್ಕಾಡ್ ನಿವಾಸಿ ಶಿವದಾಸನ್ ಅವರ ಮನೆಯಲ್ಲಿ ಸಂಬಂಧಿಯೊಬ್ಬರು ಅವರು ಮೃತಪಟ್ಟಿದ್ದಾರೆ ಎಂದು ತಿಳಿದಿದ್ದರು. ಆದರೆ ಪೊಲೀಸರು ಅವನ ಉಸಿರಾಟವನ್ನು ಕಂಡುಕೊಂಡ ನಂತರ, ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಕಳುಹಿಸಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.