Movies

9 ವರ್ಷಗಳ ನಂತರ ‘ಡಾಕ್ಟ್ರಾ ಭಟ್ರಾ’ ಎಂದ ವಿಜಯ್ ಕುಮಾರ್ ಕೊಡಿಯಾಲ್ಬೈಲ್

vijay kumar kodialbail

2016ರಲ್ಲಿ ಬಂದ ಜನಪ್ರಿಯ ಹಾಸ್ಯಚಿತ್ರ ‘ಮದಿಮೆ’ ಬಳಿಕ ಕೊಡಿಯಾಲ್‌ಬೈಲ್ ನಿರ್ದೇಶನದಿಂದ ದೂರ ಉಳಿದಿದ್ದರು. ಈಗ ಸುಮಾರು ಒಂಬತ್ತು ವರ್ಷಗಳ ನಂತರ ಅವರು ಮತ್ತೊಮ್ಮೆ ನಿರ್ದೇಶಕನ ಸೀಟಿನಲ್ಲಿ ಕೂರುವುದರ ಮೂಲಕ ತುಳು ಸಿನಿರಸಿಕರಲ್ಲಿ ನಿರೀಕ್ಷೆ ಹುಟ್ಟಿಸಿದ್ದಾರೆ.

‘ಡಾಕ್ಟ್ರಾ ಭಟ್ರಾ’ – ಹೊಸ ಕಥಾನಕದ ನಿರೀಕ್ಷೆ

ಈ ಚಿತ್ರಕ್ಕೆ ಸಂಬಂಧಿಸಿದಂತೆ ಕರಾವಳಿಯ ಚಿತ್ರರಂಗದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಕದ್ರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ತುಳು ರಂಗದ ಪ್ರಮುಖ ಕಲಾವಿದರು ದೇವದಾಸ್ ಕಾಪಿಕಾಡ್ ಹಾಗೂ ನವೀನ್ ಡಿ. ಪಡೀಲ್ ಹಾಜರಿದ್ದು, ನಿರ್ದೇಶಕರಿಗೆ ಶುಭ ಹಾರೈಸಿದರು.

ಯಶಸ್ಸಿನ ಹಾದಿಯಲ್ಲಿರುವ ನಿರ್ದೇಶಕ

ಕೊಡಿಯಾಲ್‌ಬೈಲ್ ಹೆಸರು ಹೇಳಿದರೆ ‘ಒರಿಯರ್ದೊರಿ ಅಸಲ್’ (2011) ನೆನಪಿಗೆ ಬರುತ್ತದೆ. ಈ ಚಿತ್ರ ತುಳು ಚಿತ್ರರಂಗದ ಬಾಕ್ಸ್ ಆಫೀಸ್ ಹಿಟ್‌ಗಳಲ್ಲಿ ಒಂದು. ಬಳಿಕ ‘ಪತ್ತನಾಜೆ ’ (2017) ಹಾಗೂ ‘ಪತ್ತೀಸ್ ಗ್ಯಾಂಗ್’ (2018) ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ನಾಟಕ ರಂಗದಲ್ಲೂ ಅವರ ‘ಶಿವದೂತೆ ಗುಳಿಗ’ ನಾಟಕವು 555ನೇ ಪ್ರದರ್ಶನವನ್ನು ಪೂರೈಸಿ ದಾಖಲೆ ನಿರ್ಮಿಸಿದೆ.

ಹಾಸ್ಯದಾಚೆಗೆ ಹೊಸ ಪ್ರಯೋಗ

ಕೊಡಿಯಾಲ್‌ಬೈಲ್ ಇತ್ತೀಚಿನ ಸಂದರ್ಭಗಳಲ್ಲಿ ಮಾತನಾಡಿ, ತುಳು ಪ್ರೇಕ್ಷಕರು ಹಾಸ್ಯದಾಚೆಗಿನ ಹೊಸ ಕಥೆಗಳನ್ನು ಸ್ವೀಕರಿಸಲು ಸಿದ್ದರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಡಾಕ್ಟ್ರಾ ಭಟ್ರಾ’ ಮೂಲಕ ಅವರು ಹಾಸ್ಯದ ಜೊತೆಗೆ ವಿಭಿನ್ನ ವಿಷಯಗಳನ್ನು ಒಟ್ಟುಗೂಡಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಸಂಸ್ಕೃತಿಕ ನೆಲೆಯೊಂದಿಗೆ ಆರಂಭ

ಕದ್ರಿ ದೇವಸ್ಥಾನದಲ್ಲಿ ಚಿತ್ರಾರಂಭ ಮಾಡಿರುವುದು ಕೇವಲ ಸಂಪ್ರದಾಯದ ಸಂಕೇತವಲ್ಲ, ತುಳು ಸಂಸ್ಕೃತಿಯ ಆಳವಾದ ನಂಟನ್ನೂ ತೋರಿಸುತ್ತದೆ. ಇದು ಪ್ರೇಕ್ಷಕರ ಹೃದಯದಲ್ಲಿ ಇನ್ನಷ್ಟು ಭರವಸೆ ಮೂಡಿಸಿದೆ.‘ಡಾಕ್ಟ್ರಾ ಭಟ್ರಾ’ ಕೇವಲ ಮತ್ತೊಂದು ಚಿತ್ರವಲ್ಲ, ತುಳು ಚಿತ್ರರಂಗದ ಪ್ರಭಾವಿ ಕಥೆಗಾರ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ಕಮ್ಬ್ಯಾಕ್ಸ. ಸಮಾಜ ಹಾಗೂ ಸಂಸ್ಕೃತಿಯನ್ನು ಮುಟ್ಟುವ ಕಥೆಗಳನ್ನು ಹೇಳುವಲ್ಲಿ ಯಶಸ್ವಿಯಾಗಿರುವ ಅವರು, ಈ ಬಾರಿ ಪ್ರೇಕ್ಷಕರಿಗೆ ಏನು ಹೊಸದೇನು ನೀಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿಸಿದೆ.

NIharika Shetty

About Author

Nera News is a global digital news platform providing breaking updates on UAE, India, world events, and in-depth movie reviews.

Our Company

[contact-form-7 id="2533" title="Newsletter"]
Nera News @2023. All Rights Reserved.