ವಯಾಗ್ರ ಒವರ್ ಡೋಸ್ - ಬಾತ್ ರೂಮ್ ಅಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

og:image
ದುಬೈ: ವಯಾಗ್ರ ಓವರ್ ಡೋಸ್ ಆಗಿ ಆಫ್ರಿಕನ್ ಮನುಷ್ಯ ದುಬೈ ನ ಹೋಟೆಲ್ ಒಂದರಲ್ಲಿ ದುರ್ಮರಣ ಹೊಂದಿದ್ದಾರೆ.

ದುಬೈನಲ್ಲಿರುವ ಒಂದು ಹೋಟೆಲ್ನಲ್ಲಿ ಕ್ಯಾಮೆರೂನ್ ರಾಷ್ಟ್ರೀಯ ಕುಸಿದು ಬಿದ್ದು ಮರಣಹೊಂದಿದ್ದಾರೆ ಎಂದು ದುಬೈ ಪೊಲೀಸರಿಗೆ ಮಾಹಿತಿ ಹೋಗಿದೆ. ಅಧಿಕಾರಿಗಳು ಸ್ಪಾಟ್ ಗೆ ಧಾವಿಸಿದಾಗ, ಅವರು 52 ವರ್ಷದ ವ್ಯಕ್ತಿಯ ದೇಹ ಸ್ನಾನಗೃಹದಲ್ಲಿ ಕಂಡುಬಂದಿತ್ತು. ಮ್ರತ ವ್ಯಕ್ತಿ ವಿಸಿಟ್ ವೀಸಾದಲ್ಲಿ ದುಬೈಗೆ ಬಂದಿದ್ದರು.

ದೇಹವನ್ನು ಪರಿಶೀಲಿಸಿದ ಫೋರೆನ್ಸಿಕ್ ತಜ್ಞರು ದೇಹದ ಮೇಲೆ ಯಾವುದೇ ಅಪರಾಧದ ಹಿಂಸೆ ಅಥವಾ ರೋಗಲಕ್ಷಣಗಳ ಯಾವುದೇ ಸಾಕ್ಷ್ಯವನ್ನು ಗಮನಿಸಲಿಲ್ಲ.

ನಂತರ ತನಿಖೆ ಮಾಡಿದ ಪೋಲಿಸರಿಗೆ, ಮ್ರತ ವ್ಯಕ್ತಿಗೆ, 23 ವರ್ಷ ವಯಸ್ಸಿನ ಮಹಿಳೆ ಜೊತೆ ಸಂಬಂಧ ಇತ್ತು ಎನ್ನಲಾಗಿದೆ, ಆಕೆ ಕೂಡಾ ಕ್ಯಾಮೆರೂನ್ನಿಂದ ಬಂದಿದ್ದಳು.

ಕಳೆದ ಏಳು ತಿಂಗಳ ಕಾಲ ಅವರು ಸಂಬಂಧ ಹೊಂದಿದ್ದಾರೆಂದು ಮಹಿಳೆ ತಪ್ಪೊಪ್ಪಿಗೆ ನೀಡಿದರು ಮತ್ತು ದುಬೈಗೆ ಹಲವಾರು ಬಾರಿ ಬಂದಿದ್ದರು ಮತ್ತು ಒಟ್ಟಿಗೆ ಹೋಟೇಲ್ ನಲ್ಲಿ ಇದ್ದರು. ಈ ಸಮಯವೂ ಕೂಡಾ ಮ್ರತ ವ್ಯಕ್ತಿಯೊಂದಿಗೆ ಪ್ರಯಾಣಿಸುತ್ತಿದ್ದಳು ಮತ್ತು ಅದೇ ಕೊಠಡಿಯಲ್ಲಿ ಆತನೊಂದಿಗೆ ವಾಸವಾಗಿದ್ದಳು ಎಂದು ಅವರು ದೃಢಪಡಿಸಿದ್ದಾರೆ.

ಮಹಿಳೆಯ ಪ್ರಕಾರ, ಘಟನೆಯ ದಿನದಂದು ಅವರು ಗಂಟೆಗಳ ಕಾಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು, ಲೈಂಗಿಕ ಕ್ರಿಯೆಯ ಮೊದಲು ಆ ವ್ಯಕ್ತಿಯು ತನ್ನ ಚೀಲದಿಂದ ಕೆಲವು ಔಷಧಿಗಳನ್ನು ತೆಗೆದುಕೊಂಡಿದ್ದಾನೆ.

ಸ್ವಲ್ಪ ಸಮಯದ ನಂತರ, ಆತ ಬಾತ್ರೂಮ್ಗೆ ಹೋದಾಗ, ಅವಳು ದೊಡ್ಡ ಶಬ್ದವನ್ನು ಕೇಳಿದಳು, ಮತ್ತು ಆ ಮನುಷ್ಯನು ಕುಸಿದುಬಿದ್ದಿದ್ದ.

ಪೊಲೀಸರು ಔಷಧಿಗಳನ್ನು ವಶಪಡಿಸಿಕೊಂಡರು ಮತ್ತು ಪ್ರಯೋಗಾಲಯಕ್ಕೆ ಕರೆದೊಯ್ಯಿದರು, ಇದು ವಯಾಗ್ರ ಎಂದು ದ್ರಢಪಟ್ಟಿದ್ದು, ಅತಿಯಾದ ಮಾತ್ರೆ ಸೇವನೆಯೇ ಮನುಷ್ಯನ ಸಾವಿಗೆ ಕಾರಣ ಎಂದು ಪೂಲೀಸರು ಅಭಿಪ್ರಾಯ ಪಟ್ಟಿದ್ದಾರೆ.

English Summary: Man dies by Viagra overdoes in Dubai Hotel, Police found he had taken over dose of Viagra.
Tags : Viagra, overdoes, Man, Dies, Dubai
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post