ಮೋದಿಯವರಿಗೆ 20 ವರ್ಷದಿಂದ ರಾಖಿಕಟ್ಟುತ್ತಿರುವ ಮಹಿಳೆಯಾರು???

Admin
og:image
ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿಗೆ 20 ವರ್ಷಗಳಿಂದ 'ರಾಖಿಯನ್ನು' ಕಟ್ಟಿರುವುದಾಗಿ ಪಾಕಿಸ್ತಾನದ ಮಹಿಳೆಯೊಬ್ಬರು  ಹೇಳಿದ್ದಾರೆ.

"ನಾನು ಕಳೆದ 22-23 ವರ್ಷಗಳಿಂದ ನರೇಂದ್ರ ಭಾಯಿಗೆ 'ರಾಖಿಯನ್ನು' ಕಟ್ಟುತ್ತಿದ್ದೇನೆ, ಈ ಬಾರಿಯೂ ರಾಖಿ ಕಟ್ಟಲು ಉತ್ಸುಕಳಾಗಿದ್ದೇನೆ" ಎಂದು ಖಮರ್ ಮೊಹ್ಸಿನ್ ಶೇಖ್ ಎಎನ್ಐಗೆ ತಿಳಿಸಿದ್ದಾರೆ.

ಶೇಖ್ ಅವರು ಪಾಕಿಸ್ತಾನದವರಾಗಿದ್ದು, ಮದುವೆಯಾದ ನಂತರ ಭಾರತಕ್ಕೆ ನೆಲೆಸಲು ಬಂದಿದ್ದಾರೆ.
"ಮೋದಿ  ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಉದ್ಯೋಗಿಯಾಗಿದ್ದಾಗ ಪ್ರಧಾನಿಗೆ ಶೇಖ್ ಅವರು ತಮ್ಮ ಮೊದಲ 'ರಾಖಿಯನ್ನು' ಕಟ್ಟಿದರು.  "ಮೋದಿಯವರು ತಮ್ಮ ಶ್ರಮ ಮತ್ತು ದೂರದ್ರಷ್ಟಿಯಿಂದ ಪ್ರಧಾನಿಯಾಗಿದ್ದಾರೆ, ಈಗ ಅವರು ಬ್ಯುಸಿಯಾಗಿರುತ್ತಾರೆ ಎಂದು ತಿಳಿದು ರಾಖಿಕಟ್ಟಲು ಆಗುವಿದಿಲ್ಲ ಎಂದು ತಿಳಿದಿದ್ದೆ, ಆದರೆ ಖುದ್ದು ಪ್ರಧಾನಿ ಕಾಲ್ ಮಾಡಿ ರಾಖಿ ಕಟ್ಟಲು ಆಮಂತ್ರಿಸಿದರಿಂದ ರಾಖಿ ಕಟ್ಟಲು ತಯಾರಾಗಿದ್ದೇನೆ" ಎಂದು ಫುಲ್ಲ್ ಖುಶಿಯಾಗಿರುವ ಶೇಖ್ ತಿಳಿಸಿದರು.

Tags

#buttons=(Accept !) #days=(20)

Our website uses cookies to enhance your experience. Learn More
Accept !