"ಈಶ ಸುಚಿ" ಯವರ ಕನ್ನಡ ಹಾಡುಗಳ ಹೊಸರೂಪ "ಶೇಪ್ ಆಫ್ ಯು"

og:image
ಈಶ ಸುಚಿ - ಅಂದರೆ ಜನರಿಗೆ ಅಷ್ಟೊಂದು ಪರಿಚಯ ಇರದು. ಅದಕ್ಕೆ ಕಾರಣ ಕನ್ನಡದಲ್ಲಿ ಪ್ರತಿಭಾವಂತ ಗಾಯಕ।ಗಾಯಕಿಯರಿಗೆ ಅವಕಾಶ ನೀಡುವಲ್ಲಿ ಕನ್ನಡದ ಸಂಗೀತ ನಿರ್ದೇಶಕರ ಮಡಿವಂತಿಕೆ. ಅದೇನೆ ಇರಲಿ, ಈಶ ಈಗಾಗಲೇ ತುಳುವಿನಲ್ಲಿ "ದಂಡ್" ಎಂಬ ಚಿತ್ರಕ್ಕೆ ಹಾಡಿದ್ದಾರೆ.

ಈಗ  ಸುಚಿ, ಈಗಾಗಲೇ ವಿಶ್ವದಲ್ಲಿ ಎಲ್ಲರಾ ಬಾಯಲ್ಲಿ ಗುನುಗುಡುತ್ತಿರುವ "ಶೇಪ್ ಆಫ್ ಯು" ಎಂಬ ಹಾಡಿನ ಮೂಲಕ ಕನ್ನಡದ ೫೦ ಹಾಡನ್ನು ಮಿಡ್ಲೇ ತರ ಹಾಡಿ ಯೂಟ್ಯೂಬ್ ನಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ತುಂಬಾ ಪ್ರಸಿದ್ಧಿಯಾಗಿದ್ದು, ತುಂಬಾ ಅಭಿಮಾನಿಗಳು ಈಶ ಕನ್ನಡ ಚಿತ್ರಗಳಲ್ಲಿ ಹಾಡಬೇಕೆಂದು ಇಚ್ಚಿಸಿದ್ದಾರೆ.
Previous Post Next Post