"ಹೀರೋ ಅಲ್ಲ ವಿಲನ್" 60 ಮಕ್ಕಳ ಸಾವಿಗೆ ಕಾರಣನಾದನೇ ಡಾ ಖಾನ್ ???

og:image
ಬಿಆರ್ಡಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಹಲವಾರು ಮಕ್ಕಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ, "ಮಕ್ಕಳ ಜೀವ ಉಳಿಸಿದ ಹೀರೋ" ಎಂದು ಹೇಳಲಾದ ಗೋರಖ್ಪುರ್ ವೈದ್ಯರಾದ ಡಾ ಕಾಫಿಲ್ ಖಾನ್ ರನ್ನು ಭಾನುವಾರ ಪೀಡಿಯಾಟ್ರಿಕ್ಸ್ ಇಲಾಖೆಯ ನೋಡಲ್ ಅಧಿಕಾರಿ ಹುದ್ದೆಯಿಂದ ತೆಗೆದುಹಾಕಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಖಾನ್, "ಇದು ನನ್ನ ವಿರುದ್ಧ ಅಭಿಯಾನವಾಗಿದೆ, ನಾನು ಮಕ್ಕಳಿಗೆ ಸಹಾಯ ಮಾಡಲು ಮಾತ್ರ ಪ್ರಯತ್ನಿಸುತ್ತಿದ್ದೆ."

ಕಾರಣ ಏನು???
ಹಿಂದೂಸ್ಥಾನ್ ಟೈಮ್ಸ್ ವರದಿಯ ಪ್ರಕಾರ, ಖಾನ್ ಅವರ ವಜಾಗೊಳಿಸುವ ಕಾರಣಗಳು 'ಕರ್ತವ್ಯದ ನಿರ್ಲಕ್ಷ್ಯ' ಮತ್ತು 'ಖಾಸಗಿ ಅಭ್ಯಾಸವನ್ನು ಕೈಗೊಳ್ಳುವುದು'. ಸರಕಾರಿ ವೈದ್ಯನಾಗಿದ್ದ ಖಾನ್, ಖಾಸಗಿಯಾಗಿ ಆಸ್ಪತ್ರೆ ನಡೆಸುತ್ತಿರುವುದು ಅಪರಾಧ. ಸರ್ಕಾರಿ ವೈದ್ಯರಿಗೆ ಈ ಅವಕಾಶ ಇರುವುದಿಲ್ಲ.

ಆರೋಪ ಏನು??
ಬಿಆರ್ಡಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೂಲಗಳ ಪ್ರಕಾರ, ಖಾನ್ ತನ್ನನ್ನೇ ತಾನು ಹೀರೋ ಎಂದು ಬಿಂಬಿಸಿದ್ದಾನೆ. ಡಾ. ಖಾನ್ ತನ್ನ ಹೆಂಡತಿಯ ಒಡೆತನದಲ್ಲಿರುವ ಗೋರಖ್ಪುರದಲ್ಲಿರುವ ಮೆಡಿಸ್ಪ್ರಿಂಗ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಎಂಬ 50-ಹಾಸಿಗೆಯ ಮಕ್ಕಳ ಆಸ್ಪತ್ರೆ ಯಲ್ಲಿ ಅವರು ಖಾಸಗಿ ಸೇವೆ ಸಹ ನಡೆಸುತ್ತಿದ್ದಾರೆ.

10 ಆಗಸ್ಟ್ನಲ್ಲಿ ಆಸ್ಪತ್ರೆಯಲ್ಲಿ 52 ಸಿಲಿಂಡರುಗಳಾಗಿದ್ದರೂ, ಮೂರು ಸಿಲಿಂಡರ್ಗಳನ್ನು ತಾನು ಸರಭರಾಜು ಮಾಡಿದೆ ಎನ್ನುವ  ಖಾನ್ ಅವರ ಕ್ರಮವನ್ನು ನಿರ್ದೇಶಕ ಜನರಲ್, ವೈದ್ಯಕೀಯ ಶಿಕ್ಷಣದ (ಗೋರಖ್ಪುರ್) ಕೆಕೆ ಗುಪ್ತಾ ಪ್ರಶ್ನಿಸಿದ್ದಾರೆ. ಇದಲ್ಲದೆ, ಅವರು ಡಾ. ಖಾನ್ ರನ್ನು ಎಲ್ಲಾ ಮಾಧ್ಯಮಗಳು ಮಾತ್ರ ಹೀರೋ ಮಾಡಿವೆ, ಆಸ್ಪತ್ರೆಯು ಅವರನ್ನು ನಾಯಕನಂತೆ ಎಲ್ಲೂ ಉಲ್ಲೇಖಿಸಲಿಲ್ಲ ಎಂದು ಹೇಳಿದರು.

ಹೀರೋ ಅಲ್ಲ ವಿಲನ್
ಅಷ್ಟೇ ಅಲ್ಲದೆ, ಹಿಂದೂಸ್ಥಾನ್ ಟೈಮ್ಸ್ ವರದಿ ಪ್ರಕಾರ ಖಾನ್ ಮತ್ತು ವೈದ್ಯಕೀಯ ಕಾಲೇಜಿನ ಮಾಜಿ ಪ್ರಧಾನ ಡಾ. ಆರ್.ಕೆ. ಮಿಶ್ರಾ ಅವರು ಆಸ್ಪತ್ರೆಗೆ ನಿರಂತರ ಆಮ್ಲಜನಕದ ಸಿಲಿಂಡರ್ಗಳನ್ನು ಪೂರೈಸುವ ಉಸ್ತುವಾರಿ ವಹಿಸಿದ್ದರು. ಆದರಿಂದ ಅವರ ಕರ್ತವ್ಯ ಲೋಪದಿಂದಾಗಿ ಮಕ್ಕಳ ಸಾವು ಉಂಟಾಗಿತ್ತು. ಆಸ್ಪತ್ರೆಯ ಸಿಲಿಂಡರ್ ಗಳನ್ನು ತನ್ನ ಖಾಸಾಗಿ ಆಸ್ಪತ್ರೆಗೆ ಸಾಗಿಸಿರುವ ಬಗ್ಗೆ ಸಹ ದೂರು ಬಂದಿದೆ.

ಮಾಧ್ಯಮಗಳಿಗೆ  ಹೀರೊ ಹೇಗಾದ?
CNN-News18 ಪ್ರಕಾರ, "ಆಗಸ್ಟ್ 10 ರ ರಾತ್ರಿ ಬಿಆರ್ಡಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಕ ಸರಬರಾಜು ತೀರಾ ಕಡಿಮೆಯಾದಾಗ, ಖಾನ್ ಅವರು ಆಕ್ಸಿಜನ್ ಸಿಲಿಂಡರ್ಗಳನ್ನು ಖರೀದಿಸಲು ತಮ್ಮ ಪಾಕೆಟ್ನಿಂದ ಆಮ್ಲಜನಕ ಸರಬರಾಜುದಾರನಿಗೆ 10,000 ರೂ. ಹಣವನ್ನು ಪಾವತಿಸಿದ್ದು, ಮಕ್ಕಳನ್ನು ರಕ್ಷಿಸಿದ್ದಾರೆ. ಇದು ಫೇಸ್ ಬುಕ್ ಮುಂತಾದ ಕಡೆ ಶೇರ್ ಆಗಿ, ಡಾ. ಖಾನ್ ನನ್ನು ಎಲ್ಲರೂ ಹೀರೋ ಎಂದು ಕೊಂಡಾಡಿದರು.

ಬರ್ಕಾ ದತ್ ಒಂದು ಹೆಜ್ಜೆ ಮುಂದೆ ಹೋಗಿ, ಖಾನ್ ರನ್ನು ದೇಶಭಕ್ತ ಎಂದು ಹೊಗಳಿದ್ದರು.

ಹೀರೋನ ಅಸಲಿ ಮುಖ - ಹಿಂದಿನ ಕೇಸ್
2009 ರಲ್ಲಿ ವೈದ್ಯಕೀಯ ನೋಂದಣಿಗಾಗಿ ನ್ಯಾಷನಲ್ ಬೋರ್ಡ್ ಎಕ್ಸಾಮ್ನಲ್ಲಿ ಬೇರೆಯೆ ವ್ಯಕ್ತಿಯಾಗಿ ನಟಿಸಿದರಂತೆ, ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆದು ಖಾನ್ ಸಿಕ್ಕಿಹಾಕಿಕೊಂಡಿದ್ದ.
ಇದಕ್ಕೆ ಪ್ರತಿಕ್ರಿಯಿಸಿರುವ ಖಾನ್, ನನ್ನ ಹಳೆಯ ಕೇಸ್ ಗಳನ್ನು ಯಾಕೆ ಈಗ ಪ್ರಸ್ತಾಪಿಸುತ್ತಿರುವರೋ ನನಗೆ ಅರ್ಥ ಆಗುತ್ತಿಲ್ಲ ಎಂದಿದ್ದಾರೆ. ಖಾನ್ ಸಾಹೇಬರೇ, ಪುಕ್ಕಟೆಯಾಗಿ ಹೀರೋ ಆದಾಗ ಖುಶಿ ಅನುಭವಿಸಿದ ನೀವು, ನಿಮ್ಮ ಮೇಲಿನ ನಿಜ ಕೇಸ್ ಬಗ್ಗೆ ಯಾಕೆ ಕೋಪಮಾಡ್ಕೋತ್ತೀರ ಎಂದು ಟ್ವಿಟ್ಟರ್ ನಲ್ಲಿ ಜನರು ಕೇಳುತ್ತಿದ್ದಾರೆ.

ಶೇರ್ ಮಾಡಿ ಜನರಿಗೆ ತಿಳಿಸಿ
ಭಾರತದಲ್ಲಿ ಕಾನೂನಿಗೆ ಒಂದು ಮೂಲಮಂತ್ರವಿದೆ, "ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ ತಪ್ಪಲ್ಲ, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು" ಅದೇ ರೀತಿ ಸಾಮಾಜಿಕವಾಗಿಯೂ ಒಂದು ಕಾನೂನನ್ನು ನಾಗರಿಕರಾದ ನಾವು ಅಳವಡಿಸಬೇಕಾಗಿದೆ, ಅದು ಏನೆಂದರೆ, "ಓಬ್ಬ ಹೀರೋನನ್ನು ನೂರು ಜನ ವಿಲನ್ ಅಂದರೂ ಪರವಾಗಿಲ್ಲ, ಆದರೆ ಒಬ್ಬ ವಿಲನ್ ಅನ್ನು ಒಬ್ಬರೂ ಕೂಡಾ ಹೀರೋ ಎಂದು ಬಣ್ಣಿಸಬಾರದು." ಏಕೆಂದರೆ, ಭಾರತದಂತ ದೇಶದಲ್ಲಿ ಕೊಲೆಗಡುಕರು, ಟೆರರಿಸ್ಟ್ ಗಳು ಕೆಲವರಿಗೆ ಹೀರೋ, ಅದು ದಕ್ಷಿಣದ ವೀರಪ್ಪನ್ ಆಗಿರಬಹುದು ಅಥವಾ ಉತ್ತರದಲ್ಲಿ ಸಿಕ್ಕಿಹಾಕಿಕೊಂಡಿರುವ ಭಯೋತ್ಪಾಧಕರಾಗಿರಬಹುದು. ಇಂತಹ ಆಚರಣೆಗಳಿಂದ ದೇಶದಲ್ಲಿ ಅಶಾಂತಿ, ಅನ್ಯಾಯ ತಲೆ ಎತ್ತುತ್ತದೆ. ಈಗಲೇ ಈ ನ್ಯೂಸ್ ಅನ್ನು ಶೇರ್ ಮಾಡಿ ಮತ್ತು ಜನರಿಗೆ ನಕಲಿ ಹೀರೋ ನ ಅಸಲಿ ವಿಲನ್ ಮುಖ ತೋರಿಸಿ. ಫೇಸ್ ಬುಕ್ ಮತ್ತು ವಾಟ್ಸಾಪ್ ಮೂಲಕ ಶೇರ್ ಮಾಡಲು ಕೆಳಗಡೆ ಇರುವ ಸಿಂಬಲ್ ಅನ್ನು ಪ್ರೆಸ್ ಮಾಡಿ.
Tags : Hero, Villain, Dr Kafeel Khan, Kids Die, Hospital, Up, 
Previous Post Next Post