'ಅಫೇರ್' ಇದೆ ಎಂದು ಡೌಟ್ - ಮಂಗಳೂರಿನಲ್ಲಿ ಗಂಡನಿಂದ ಹೆಂಡತಿಯ ಕೊಲೆ

og:image

ಮಂಗಳೂರು, ಆಗಸ್ಟ್ 19: ಇಲ್ಲಿನ ಕೊಟ್ಟಾರ ಚೌಕಿಯಲ್ಲಿ ಶುಕ್ರವಾರ ರಾತ್ರಿ ಗಂಡನಿಂದಲೇ ಹೆಂಡತಿಯ ಕೊಲೆ ನಡೆದಿದೆ.

ಕೊಟ್ಟಾರ ಚೌಕಿಯಲ್ಲಿರುವ ಜೆ ಬಿ ಲೋಬೋ ರಸ್ತೆಯ ನಿವಾಸಿ ಬ್ಲಾಸಮ್ ಲೋಬೊ (31), ತನ್ನ ಪತಿ ವಿಲಿಯಂ ಲೋಬೋ (35) ರ ಕೈಯಲ್ಲಿ ಶುಕ್ರವಾರ ರಾತ್ರಿ ಬರ್ಬರವಾಗಿ ಹತ್ಯೆಗೊಳಗಾಗಿದ್ದಾರೆ.

ಘಟನೆಯು 9 ರಿಂದ 10 ರ ನಡುವೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಲಿಯಂ ಲೋಬೊ (35) ಅವರನ್ನು ಕೊಲೆ ಮಾಡಿರುವ ಆಪಾದನೆ ಮೇಲೆ ಪೋಲಿಸರು ಬಂಧಿಸಿದ್ದಾರೆ. ಆದಾಗ್ಯೂ, ಸಾವನ್ನಪ್ಪಿದ ಮಹಿಳೆಯ ಸಂಬಂಧಿಕರು ಮತ್ತು ನೆರೆಯವರು ಅನೈತಿಕ ಸಂಬಂಧದ ಆಪಾದನೆಯನ್ನು ನಿರಾಕರಿಸಿದರು. ಮೂಲತ್ಃ ಮಡಿಕೇರಿಯ ಸಿದ್ದಾಪುರದ ನಿವಾಸಿಗಳಾದ ವಿಲಿಯಂ ಮತ್ತು ಬ್ಲಾಸಮ್ ಇಲ್ಲಿ ಕೊಟ್ಟಾರ ಚೌಕಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ವಿಲಿಯಂ ಊಬರ್ ನ ಚಾಲಕರಾಗಿದ್ದನು, ಬ್ಲಾಸಮ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ದಂಪತಿಗೆ ನಾಲ್ಕು ವರ್ಷ ವಯಸ್ಸಿನ ಮಗ ಇದ್ದು, ಆ ಮಗು ಈಗ ಅನಾಥವಾಗಿದೆ.

"ಬ್ಲಾಸಮ್ ಒಂದು ಒಳ್ಳೆಯ ಗುಣ ನಡತೆ ಹೊಂದಿರುವ ಮಹಿಳೆ ಮತ್ತು ಅವಳು ಅಕ್ರಮ ಸಂಬಂಧದ ಹೊಂದಿರುವ ಯಾವುದೇ ಚಿಹ್ನೆಗಳು ಇರಲಿಲ್ಲ.ಅವರು ಕೆಲಸಕ್ಕೆ ಹೋದಾಗ, ಅವಳು ತನ್ನ ಮಗನನ್ನು ಬೇಬಿ ಕೇರ್ ನಲ್ಲಿ ಬಿಡುತ್ತಿದ್ದಳು" ಎಂದು ಒಬ್ಬ ನೆರೆ ಹೇಳಿದರು.

ಇದನ್ನೂ ಓದಿ ಃ ಚಂದದ ಮಹಿಳೆಯರನ್ನು ಸಪ್ಲೈ ಮಾಡುತ್ತೇವೆಂದು ಮೋಸ ಮಾಡಿದ ಯುವಕರ ಬಂಧನ

English Summary: A lady was killed by her husband, he doubted on her that she is having affair. But later family said she is a good character woman.

NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post