ರೇಪ್ ಆರೋಪಿಯನ್ನು ಬಚಾವ್ ಮಾಡಿದ ಸಿ.ಸಿ.ಟಿ.ವಿ ವಿಡಿಯೋ!

og:image
ಲಾಸ್ ಎಂಜಲೀಸ್ ಃ19 ವರ್ಷದ ಯುವತಿಯನ್ನು ರೇಪ್ ಮಾಡಿದ್ದಾನೆಂದು ಆರೋಪಿ ಸ್ಥಾನದ್ದಲ್ಲಿದ್ದ ಆರೋಪಿ, ಕೊನೆಗೂ ಸಿ.ಸಿ.ಟಿ.ವಿ ಫೋಟೇಜ್ ಸಹಾಯದಿಂದ ಧೋಷ ಮುಕ್ತನಾದ ರೋಚಕ ಕಥೆಯಿದು.

ಅರ್ಮಾನ್ ಪ್ರೇಮ್ ಜಿ, ತನ್ನ ಸಹಪಾಠಿಯನ್ನು ರೇಪ್ ಮಾಡಿದ್ದಾನೆಂದು ಅರೋಪಿಸಲಾಗಿತ್ತು. 20 ವರ್ಷದ ಅರ್ಮಾನ್ ಮತ್ತು ರೇಪ್ ಸಂತ್ರಸ್ಥೆ, ಲಾಸ್ ಎಂಜಲೀಸ್ ನ "ಬ್ರಾಂಡಿಟೋಸ್ ಟಾಕೋ ಆಂಡ್ ಟೆಕಿಲಾ" ಎಂಬ ರೆಸ್ಟೋರೆಂಟ್ ನಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ತಾವು ವಾಸವಾಗಿದ್ದ ವಿಧ್ಯಾರ್ಥಿ ಶಿಬಿರಕ್ಕೆ ಹೋದಾಗ, ಕುಡಿತದ ಅಮಲಿನಲ್ಲಿದ್ದ ತನ್ನ ಮೇಲೆ ಅರ್ಮಾನ್ ರೇಪ್ ಮಾಡಿದ್ದಾನೆ ಎಂದು ಸಂತ್ರಸ್ಥೆ ಅರೋಪಿಸಿದ್ದಳು.

ಆದರೆ, ಅರ್ಮಾನ್ ಲಕ್ ಚೆನ್ನಾಗಿತ್ತು, ರೆಸ್ಟೋರೆಂಟ್ ನ ಸಿ.ಸಿ.ಟಿ.ವಿ ಪರಿಸೀಲಿಸಿದಾಗ, ರೇಪ್ ಎಂದು ಅರೋಪಿಸಿರುವ ಹುಡುಗಿಯೇ, ಹುಡುಗನ ಮೈ ಮೇಲೆ ಬಿದ್ದು, ಸನ್ನೆ ಮುಖಾಂತರ ಪ್ರಚೋದಿಸಿ, ಅರ್ಮಾನ್ ನನ್ನು ಕರೆದೆಕೊಂಡು ಹೋಗುವ ದೃಶ್ಯ ದಾಖಲಾಗಿದ್ದು, ಹುಡುಗನನ್ನು ಧೋಷಮುಕ್ತನಾಗಿಸಲಾಗಿದೆ.

ಲಾಸ್ ಏಂಜಲೀಸ್ ಸುಪೀರಿಯರ್ ಕೋರ್ಟ್ ನ್ಯಾಯಾಧೀಶರು ವೀಡಿಯೋವನ್ನು ವೀಕ್ಷಿಸಿದ ನಂತರ ಈ ಪ್ರಕರಣವನ್ನು ತಳ್ಳಿಹಾಕಿದರು.
Previous Post Next Post