
ಬೆಂಗಳೂರುಃ ಕನ್ನಡದ ಸುಪರ್ ಸ್ಟಾರ್, ರಿಯಲ್ ಸ್ಟಾರ್ ಉಪೇಂದ್ರ ರಾಜಿಕೀಯ ಪ್ರವೇಶ ಬಹುತೇಕ ಖಚಿತವಾಗಿದೆ. ನಾಳೆ ಮಧ್ಯಾಹ್ನ ಪತ್ರಿಕಾ ಘೋಷ್ಟಿ ಕರೆದಿರುವ ಉಪೇಂದ್ರ ಖಚಿತವಾಗಿ ಇದರ ಬಗ್ಗೆ ವಿವರಣೆ ನೀಡಲಿದ್ದಾರೆ.
ಉಪೇಂದ್ರ ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ತಮ್ಮ ಅಭಿಮಾನವನ್ನು ಟ್ವಿಟ್ಟರ್ ಮೂಲಕ ಬಹಿರಂಗವಾಹಿ ಪ್ರಕಟಿಸುತ್ತಿದ್ದು, ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಮನೆಗೆ ಐಟಿ ಧಾಳಿಯಾದಗ ಐಟಿ ಧಾಳಿಯನ್ನು ವೀಡಿಯೋ ಮಾಡಿ ತೋರಿಸಿದರೆ ಜನರಿಗೆ ನಿಜ ಗೊತ್ತಾಗುತ್ತೆ ಎಂದಿದ್ದು, ಸಹಜವಾಗಿ ಎಲ್ಲರಲ್ಲೂ ಉಪೇಂದ್ರ ಬಿಜೆಪಿ ಸೇರುವ ಬಗ್ಗೆ ನಿರೀಕ್ಷೆ ಇದೆ. ಒಂದು ವೇಳೆ ಇದು ನಿಜವಾದರೆ ಕರ್ನಾಟಕದ ರಾಜಕೀಯ ಚಿತ್ರಣ ಬದಲಾಗಬಹುದು. ಇಲ್ಲಿಯವರೆ ಆಂತರಿಕ ಜಗಳಗಳಿಂದ ಮತ್ತು ದೂರಾಲಾಚನೆಯ ಕೊರತೆಯಿಂದ ನಲುಗುತ್ತಿದ್ದ ರಾಜ್ಯ ಬಿಜೆಪಿಗೆ ಉಪೇಂದ್ರ ಎಂಟ್ರಿ ಒಂದು ವರದಾನವಾಗಲಿದೆ.
ಅಷ್ಟೇ ಅಲ್ಲದೆ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದು, ಆ ಸಭೆಯಲ್ಲಿ ಭಾಗವಹಿಸಲು ಉಪೇಂದ್ರ ಅವರಿಗೆ ಆಹ್ವಾನ ನೀಡುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆಯಂತೆ.
ಈಗಾಗಲೇ ಉಪೇಂದ್ರ ರಾಜಕೀಯ ಪ್ರವೇಶದ ಸುಧ್ಧಿ ರಾಜಕೀಯ ನಾಯಕರಲ್ಲಿ ಸಂಚಲನ ಮೂಡಿಸಿದ್ದು, ಬಿಜೆಪಿ ಮುಖಂಡ ಸುರೇಶ್ ಕುಮಾರ್, ನಿರ್ದೇಶಕ ಮತ್ತು ಮಾಜಿ ರಾಜಕಾರಣಿ ಟಿ.ಎನ್. ಸೀತಾರಾಮ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ನಟ, ಕಾಂಗ್ರೆಸ್ ಮುಖಂಡ ಬಿ.ಸಿ. ಪಾಟೀಲ್ ಇವರೆಲ್ಲಾ ಉಪೇಂದ್ರ ನಿರ್ಧಾರ ಸರಿಯಾಗಿದೆ ಎಂದು ರಾಜಕೀಯ ಎಂಟ್ರಿಗೆ ವೆಲ್ಕಮ್ ಹೇಳಿದ್ದಾರೆ.
Tags:
Karnataka