ಮಸೀದಿಯ ಜೊತೆ ಮಂದಿರವೂ ಕ್ಲೀನ್ - ಮುಸ್ಲಿಮರನ್ನು ಹೊಗಳಿದ ಮೋದಿ

og:image
ಪ್ರಧಾನಿ ನರೇಂದ್ರ ಮೋದಿ ಭಾನುವಾರ, ಮುಸ್ಲಿಮರ ಸಂಘಟನೆ ಜಮಾತ್-ಉಲೇಮಾ ಇ-ಹಿಂದ್ ನ ಸ್ವಯಂಸೇವಕರು ಇತ್ತೀಚೆಗೆ ಗುಜರಾತ್ನಲ್ಲಿ 22 ದೇವಾಲಯಗಳನ್ನು ಮತ್ತು ಎರಡು ಮಸೀದಿಗಳನ್ನು ಸ್ವಚ್ಛಗೊಳಿಸಿದ್ದನ್ನು ಉಲ್ಲೇಖಿಸಿ, "ಉತ್ತಮ" ಮತ್ತು "ಸ್ಪೂರ್ತಿದಾಯಕ" ಮಾದರಿಯನ್ನು ನೀಡಿದೆ ಎಂದು ಹೇಳಿದ್ದಾರೆ.

"ಭಾರತದಲ್ಲಿ ವೈವಿಧ್ಯತೆಗಳು ತಿನಿಸುಗಳು, ಜೀವನಶೈಲಿ ಮತ್ತು ಉಡುಪಿಗೆ ಮಾತ್ರ ಸೀಮಿತವಾಗಿಲ್ಲ, ಜೀವನದ ಪ್ರತಿಯೊಂದು ನಡವಳಿಕೆಯಲ್ಲೂ ಕಾಣಬಹುದಾಗಿದೆ" ಎಂದರು.

"ಇತ್ತೀಚೆಗೆ ಗುಜರಾತ್ ನಲ್ಲಿ ವಿನಾಶಕಾರಿ ಪ್ರವಾಹಗಳನ್ನು ಕಂಡಿತು. ಅನೇಕ ಜನರು ತಮ್ಮ ಪ್ರಾಣ ಕಳೆದುಕೊಂಡರು. ನೆರೆಯ ನೀರು ಕುಗ್ಗಿದಾಗ, ಎಲ್ಲೆಡೆಯೂ ಕೊಳೆ, ಕಸ ಸೇರಿತ್ತು. ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಧನರಾದಲ್ಲಿ 22 ಮಂದಿ ದೇವಾಲಯಗಳು ಮತ್ತು ಎರಡು ಮಸೀದಿಗಳಲ್ಲಿ ಕಸ ಕಡ್ಡಿ ಸೇರಿತ್ತು, ಅದನ್ನು ಹಂತ ಹಂತದಲ್ಲಿ ಸ್ವಚ್ಛಗೊಳಿಸಿದ ಜಮಾತ್-ಉಲೇಮ ಇ ಹಿಂದ್ ಸ್ವಯಂಸೇವಕರನ್ನು 'ಮಾನ್ ಕಿ ಬಾತ್' ನಲ್ಲಿ ಮೋದಿಯವರು ಹೊಗಳಿದರು.

ಜಮಾಯತ್ ಸ್ವಯಂಸೇವಕರು ಒಟ್ಟಾಗಿ ಬಂದು ಎಲ್ಲರನ್ನೂ ಒಟ್ಟುಗೂಡಿಸಿದರು, ಇದರ ಜೊತೆಗೆ ಐಕ್ಯತೆಯ ಉತ್ತ ಮತ್ತು ಸ್ಪೂರ್ತಿದಾಯಕ ಉದಾಹರಣೆ ನೀಡಿದರು. ಶುಚಿತ್ವಕ್ಕೆ ಪ್ರಯತ್ನವು ಎಲ್ಲರಲ್ಲೂ ಇದ್ದರೆ, ಖಂಡಿತವಾಗಿ ನಮ್ಮ ದೇಶವನ್ನು ಹೆಚ್ಚಿನ ಎತ್ತರಕ್ಕೆ ತೆಗೆದುಕೊಳ್ಳುತ್ತದೆ " ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post