"5 ಸ್ಟಾರ್ ಹೋಟೆಲ್ ಉಪಯೋಗಿಸುವುದನ್ನು ಸಹಿಸಲ್ಲ" ಸಚಿವರಿಗೆ ಮೋದಿ ಖಡಕ್ ವಾರ್ನಿಂಗ್ !!!

og:image
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತನ್ನ ಸಚಿವರಿಗೆ, ಪಂಚತಾರಾ ಹೊಟೇಲ್ಗಳಲ್ಲಿ ಉಳಿದುಕೊಳ್ಳುವುದು ಸಾರ್ವಜನಿಕ ವಲಯದ ಯಾವುದೇ ಸೌಲಭ್ಯ ಉಪಯೋಗಿಸುವುದರ ವಿರುದ್ಧ ಎಚ್ಚರಿಸಿದ್ದಾರೆ. ಸರ್ಕಾರಿ ಕಾರು ಉಪಯೋಗಿಸುವುದರ ಬಗ್ಗೆಯೂ ಕಟು ಎಚ್ಚರಿಕೆ ನೀಡಿದ್ದು, ಸಚಿವರ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಮೋದಿ ಯೋಜನೆಯಾಗಿದೆ.

ಬುಧವಾರ ಕ್ಯಾಬಿನೆಟ್ ಸಭೆಯ ಬಳಿಕ ಮೋದಿ ಅವರು ಮಂತ್ರಿಗಳಿಗೆ ಎಕ್ಷ್ಟ್ರಾ ಕ್ಲಾಸ್ ತೆಗೆದುಕೊಂಡರು. ಸರ್ಕಾರದ ಒದಗಿಸುವ ಸೌಕರ್ಯಗಳಿಗೆ ಬದಲಾಗಿ ಪಂಚತಾರಾ ಹೋಟೆಲುಗಳಲ್ಲಿ ಉಳಿಯಲು ಕೆಲವು ಮಂತ್ರಿಗಳ ಇತ್ತೀಚಿನ ಪ್ರವೃತ್ತಿಯ ಬಗ್ಗೆ ಆತ ಅತೃಪ್ತಿ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಅಧಿಕೃತ ಕರ್ತವ್ಯದ ಸಂದರ್ಭದಲ್ಲಿ ಸರ್ಕಾರಿ ವಸತಿ ಸೌಕರ್ಯಗಳಿನ್ನು ಉಪಯೋಗಿಸಬೇಕು ಮತ್ತು ಪಂಚತಾರಾ ಹೋಟೆಲುಗಳಲ್ಲಿ ಉಳಿದುಕೊಳ್ಳುವ "ಪ್ರಲೋಭನೆಗೆ" ಒಳಗಾಗಬಾರದೆಂದು ಸಚಿವರಿಗೆ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರು ತಮ್ಮ ಸಚಿವರಿಗೆ ತಮ್ಮ ಸಚಿವಾಲಯಗಳ ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳಿಂದ ವಾಹನಗಳನ್ನು ಬಳಸುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಸರ್ಕಾರಿ ಸೌಲಭ್ಯದ ಯಾವುದೇ ದುರುಪಯೋಗ ಸಹಿಸುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ.

ಪ್ರಧಾನಮಂತ್ರಿಯು ಭ್ರಷ್ಟಾಚಾರಕ್ಕೆ ಅವರ 'ಶೂನ್ಯ ಸಹಿಷ್ಣುತೆ' ಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಗಳಿಗೆ ಎರಡು ವರ್ಷಗಳಿವೆ, ಪ್ರಧಾನಮಂತ್ರಿಯ "ಹಗರಣ ಮುಕ್ತ" ಇಮೇಜ್ ಕಾಪಾಡಿಕೊಳ್ಳಲು ಎಲ್ಲಾ ಸಚಿವರು ಉತ್ಸುಕರಾಗಬೇಕು ಎಂದು ಹೇಳಿದರು.

English Summary:
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post