ತಾಜ್ ಮಹಲ್ ಒಂದು ಶಿವಾಲಯವೇ ? ಸ್ಪಷ್ಟೀಕರಿಸಿ - ಕೇಂದ್ರ ಮಾಹಿತಿ ಆಯೋಗ

og:image
ನವದೆಹಲಿ ಃ ತಾಜ್ ಮಹಲ್ ಒಂದು ಸಮಾಧಿಯೇ ಅಥವಾ ದೇವಸ್ಥಾನವೇ ಎಂದು ಸ್ಪಷ್ಟೀಕರಿಸಿ ಎಂದು ಕೇಂದ್ರ ಮಾಹಿತಿ ಆಯೋಗ, ಕೇಂದ್ರ ಸರ್ಕಾರಕ್ಕೆ ತಾಕೀತುಮಾಡಿದೆ.

ತಾಜ್ ಮಹಲ್ ಶಜ್ಹಾನ್ ನಿರ್ಮಿಸಿದ ಸಮಾಧಿಯಾಗಿದೆಯೇ ಅಥವಾ ರಜಪೂತ ಅರಸರು ಮೊಘಲ್ ಚಕ್ರವರ್ತಿಗೆ ಕೊಡುಗೆಯಾಗಿ ನೀಡಿದ ಶಿವ ದೇವಸ್ಥಾನವೇ ಎಂಬ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರೀಯ ಮಾಹಿತಿ ಆಯೋಗವು ಕೇಂದ್ರ ಸಂಸ್ಕೃತಿಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.


"ಸಚಿವಾಲಯವು ವಿವಾದಕ್ಕೆ ಅಂತ್ಯಗೊಳ್ಳಬೇಕು ಮತ್ತು ತಾಜ್ ಮಹಲ್ಗೆ ಸಂಬಂಧಿಸಿದ ಎಲ್ಲಾ ಅನುಮಾನಗಳನ್ನು ತಳ್ಳಿಹಾಕಬೇಕು"  ಎಂದು ಸಿಐಸಿ ಕಮಿಷನರ್ ಶ್ರೀಧರ್ ಆಚಾರ್ಯುಲು ಹೇಳಿದ್ದಾರೆ.

"ತಾಜ್ ಮಹಲ್ ತಾಜ್ ಮಹಲ್ ಅಲ್ಲ ಮತ್ತು ಇದು ತೇಜೋ ಮಹಾಲಯ ಎಂದು ಅನೇಕ ಜನರು ಹೇಳಿದ್ದಾರೆ: ಇದು ಷಹಜಹಾನ್ರಿಂದ ನಿರ್ಮಿಸಲ್ಪಟ್ಟಿಲ್ಲ, ರಾಜಾ ಮಾನ್ ಸಿಂಗ್ರಿಂದ ಉಡುಗೊರೆಯಾಗಿ ನೀಡಲ್ಪಟ್ಟಿದೆ ಎಂದು ಊಹಾಪೋಹಗಳಿವೆ, ಆದ್ದರಿಂದ ಎಎಸ್ಐ ವರದಿಗಳ ಪ್ರಕಾರ ಸತ್ಯಗಳನ್ನು ಸಾಕ್ಷ್ಯಾಧಾರಗಳಿಂದ ನೀಡಿ" ಎಂದು ಅವರು ಕೇಳಿದರು.
Previous Post Next Post