ಯೋಗಿ ಆದಿತ್ಯಾನಾಥ್ ತರ ಮುಖ್ಯಮಂತ್ರಿಯಾಗಬೇಕೆಂದಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು - ಕಾರಣ ಕೇಳಿದರೆ ಬೆಚ್ಚಿಬೀಳುತ್ತಿರ!

og:image
"ಪಾಪಾ, ಇಂದು ನನ್ನ ಮೊದಲ ಪರೀಕ್ಷೆ ಮತ್ತು ನನ್ನ ವರ್ಗ ಶಿಕ್ಷಕಿ ಭಾವನ ನನ್ನನ್ನು ಬೆಳಿಗ್ಗೆ 9.15 ರ ತನಕ ಕ್ಲಾಸಿನಿಂದ ಹೊರಗಡೆ ನಿಲ್ಲಿಸಿ ಪರೀಕ್ಷೆಗೆ ಹಾಜರಾಗದಂತೆ ಮಾಡಿದ್ದಾರೆ, ನಾನು ಕ್ಲಾಸಿನಿಂದ ಹೊರಗೆ ಮೂರು ಅವಧಿಗಳ ಕಾಲ ನಿಂತಿದ್ದೇನೆ. ನಾನು ಇಂದು ನನ್ನ ಜೀವನವನ್ನು ಅಂತ್ಯಗೊಳಿಸಲಿದ್ದೇನೆ. ದಯವಿಟ್ಟು ಯಾರಿಗೂ ಇಂತಹ ತೀವ್ರ ಶಿಕ್ಷೆಯನ್ನು ನೀಡಬಾರದೆಂದು ಎಂದು ನನ್ನ ಮಾಮ್ ಗೆ ಹೇಳಿ. ಗುಡ್ ಬೈ, ಮಮ್ಮಿ, ಪಾಪಾ & ಅಕ್ಕ." ಈ ಕೊನೆಯ ಪದಗಳು ಗೋರಖ್ಪುರದ ಸೇಂಟ್ ಆಂಟನಿ ಕಾನ್ವೆಂಟ್ ಸ್ಕೂಲ್ನ 5 ನೇ ತರಗತಿಯ ವಿದ್ಯಾರ್ಥಿಯಾಗಿದ್ದ 12 ವರ್ಷದ ನವನೀತ್ ಪ್ರಕಾಶ್ ಅವರ ಆತ್ಮಹತ್ಯಾ ಪತ್ರದಲ್ಲಿ ಬರೆದುದಾಗಿದೆ.

ಪರೀಕ್ಷೆಗೆ ಹಾಜರಾಗಲು ನಿರಾಕರಿಸಿದ ನಂತರ ಮನನೊಂದು ಸೆಪ್ಟೆಂಬರ್ 15 ರಂದು, ಮನೆಗೆ ಮರಳಿದ ಪ್ರಕಾಶ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು.

"ಅವನು ಸದ್ದಿಲ್ಲದೆ ಮಹಡಿಯಲ್ಲಿರುವ ತನ್ನ ರೂಮಿಗೆ ಹೋದನು ಮತ್ತು ಸ್ವಲ್ಪ ಸಮಯದ ನಂತರ, ಕೆಳಗೆ ಬಂದು ಆಹಾರವನ್ನು ಕೇಳಿದರು. ಅವನ ತಾಯಿ ಅವನಿಗೆ ಆಹಾರವನ್ನು ಕೊಟ್ಟರು ಮತ್ತು ಸ್ವಲ್ಪ ಸಮಯದ ನಂತರ ಅವನು ತಾನು ಗ್ಲಾಸಿನಲ್ಲಿ ತಂದಿದ್ದ ನೀರನ್ನು ಕುಡಿದನು." ಎಂದು ಮ್ರತನ ತಂದೆ ರವಿಪ್ರಕಾಶ್ ಹೇಳಿದರು. ರವಿ ಪ್ರಕಾಶ್, ಬಾಪು ಇಂಟರ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿದ್ದಾರೆ.

"ಬಾಲಕ ಮಹಡಿಗೆ ಹೋದ ನಂತರ ಸ್ವಲ್ಪ ಸಮಯದ ನಂತರ  ಕೆಳಗೆ ಬರದಿದ್ದಾಗ, ಮೇಲೆ ಹೋಗಿ ನೋಡಿದಾಗ ಹುಡುಗನ ಬಾಯಲ್ಲಿ ನೊರೆ ಹೊರಬರುತ್ತಿದ್ದು ಹಾಸಿಗೆಯ ಮೇಲೆ ಬಿದ್ದಿರುವುದನ್ನು ನೋಡಿದೆವು" ಎಂದು ಅವರು ಹೇಳಿದರು.

ಬುಧವಾರ ಮಧ್ಯಾಹ್ನ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ದ ಬಳಿಕ ವೈದ್ಯರು ಆತನನ್ನು ಮ್ರತಪಟ್ಟಿದ್ದಾನೆ ಎಂದು ಫೋಷಿಸಿದರು.

ಈ ಘಟನೆಯಿಂದ ಕುಪಿತರಾದ ಕುಟುಂಬದ ಸದಸ್ಯರು ಮತ್ತು ಸಂಬಂಧಿಗಳು ಶಾಲೆಯಲ್ಲಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

"ನಾವು ಭಾವನ ಎಂಬ ಶಿಕ್ಷಕಿಯನ್ನು ಬಂಧಿಸಿರುವೆವು, ಮತ್ತು ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ" ಎಂದು ಪೊಲೀಸ್ ಅಧೀಕ್ಷಕ ವಿನಯ್ ಕುಮಾರ್ ಸಿಂಗ್ ಮಾಧ್ಯಮ ವರದಿಗಾರರಿಗೆ ತಿಳಿಸಿದರು.

"ನಾವು ದಲಿತರಾಗಿದ್ದೇವೆ ಮತ್ತು ನನ್ನ ಮಗ ತುಂಬಾ ಪ್ರತಿಭಾಶಾಲಿಯಾಗಿದ್ದನು. ಅವನಿಗೆ ಮುಖ್ಯಮಂತ್ರಿಯಾಗ ಬೇಕೆಂಬ ಕನಸ್ಸಿತ್ತು ಮತ್ತು ಅವನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಭಿಮಾನಿಯಾಗಿದ್ದನು." ನವನೀತ್ ತಾಯಿ ಸುನೀತಾ ದೇವಿ ಹೇಳಿದ್ದಾರೆ.

ನವನೀತನ ಮರಣದ ನಂತರ, ಪೋಷಕರು ಆತನ ಚೀಲವನ್ನು ಹುಡುಕಿದಾಗ ಆತ್ಮಹತ್ಯಾ ಟಿಪ್ಪಣಿಯನ್ನು ಕಂಡರು. ಕೊನೆಯ ಬಾರಿಗೆ ಆಹಾರ ಸೇವಿಸಿದಾಗ ನವನೀತ್ ನೀರು ಕುಡಿದಿದ್ದ ಗಾಜಿನಿಂದ ವಿಷದ ವಾಸನೆ ಬರುತ್ತಿತ್ತು.

"ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆತನ ಬಾಯಲ್ಲಿ ನೊರೆ ಬರುತ್ತಿದ್ದು, ಅದರಿಂದ ಆತ ಕೆಲವು ವಿಷವನ್ನು ಸೇವಿಸಿರುವುದು ದ್ರಡಪಟ್ಟಿದೆ" ಎಂದು ಸಿಂಗ್ ತಿಳಿಸಿದರು.

ಬುಧವಾರದಿಂದ ಶಾಲೆಯ ಸುತ್ತ ಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ, ಬುಧವಾರ ಮಧ್ಯಾಹ್ನದಿಂದ ಶಾಲೆಯ ಆಡಳಿತ ಮಂಡಲಿಯ ಸದಸ್ಯರು ತಲೆಮರೆಸಿದ್ದಾರೆ.

"ಭಾವನ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದು, ನವನೀತನನ್ನು ಅಲ್ಲಿ ಸೇರುವಂತೆ ಪೀಡಿಸುತ್ತಿದ್ದಳು. ಆದರೆ ಪ್ರತಿಭಾಶಾಲಿಯಾಗಿದ್ದ ಬಾಲಕ ಸೇರಿರಲಿಲ್ಲ. ಈ ಕಾರಣದಿಂದ ಪರೀಕ್ಷೆಗೆ ಹಾಜರಾಗಲು ಬಿಡದಿರುವ ಸಾಧ್ಯತೆಗಳಿವೆ" ಎಂದು ಅವರ ತಂದೆ ಹೇಳಿದ್ದಾರೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

Previous Post Next Post