ಶ್ರೀದೇವಿ ಆತ್ಮಕ್ಕೆ ಶಾಂತಿ ಕೋರಿದಕ್ಕೆ, ಮುಸ್ಲಿಮೇತರರ ಮರಣವನ್ನು ಮುಸ್ಲಿಮರು ದುಃಖಿಸಬಾರದು ಎಂದ ಗಾಯಕಿ!!

og:image
ಅರಬ್ ಗಾಯಕಿ, ಅಹ್ಲಾಮ್ ಅಲ್ ಶಂಶಿ, ಟ್ವಿಟ್ಟರ್ನಲ್ಲಿ ಒಂದು ಟ್ವೀಟ್ ಮಾಡಿ ವಿವಾದಕ್ಕೆ ಒಳಗಾಗಿದ್ದಾರೆ. ಇತರ ಧರ್ಮಗಳಿಗೆ ಸೇರಿದ ಮೃತ ಜನರ ಆತ್ಮಗಳಿಗೆ ಶಾಂತಿ ಸಿಗಲೆಂದು ಮುಸ್ಲಿಮರು ಪ್ರಾರ್ಥನೆ ಮಾಡಬಾರದೆಂದು ಅವರು ಟ್ವಿಟ್ಟರ್ ಮೂಲಕ ತಮ್ಮ ಅಸಹಿಷ್ಣುತೆ ತೋರ್ಪಡಿಸಿದ್ದಾರೆ.

ಅರಬ್ ಪ್ರಸಿದ್ಧ ಕಾದಂಬರಿಕಾರ ಮತ್ತು ಬರಹಗಾರ ಅಬ್ದುಲ್ಲಾ ಅಲ್ - ನಿಮಿ, ಕಳೆದ ವಾರ ದುಬೈನಲ್ಲಿ ನಿಧನರಾದ ಭಾರತೀಯ ನಟಿ ದಿವಂಗತ ಶ್ರೀದೇವಿ ಕಪೂರ್ ಅವರಿಗೆ ಗೌರವ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಕೆಳಗಿನಂತೆ ಟ್ವೀಟ್ ಮಾಡಿದ್ದರು. "ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಿನಿಮಾ ಗಮನಾರ್ಹ ಬೆಳವಣಿಗೆಗಳನ್ನು ಮಾಡಿದೆ ... ಆದರೆ ನಾನು ಕರೀನಾ ಕಪೂರ್ಗಿಂತ ಶ್ರೀದೇವಿ ಅವರ ಯುಗವನ್ನು ಹೆಚ್ಚು ಮೆಚ್ಚುತ್ತೇನೆ. ಬಹುಶಃ ಅವರ ತಲೆಮಾರಿನವರು ಭಾರತೀಯ ಸಂಸ್ಕೃತಿಯನ್ನು ಹೆಚ್ಚು ಪ್ರಾಮಾಣಿಕವಾಗಿ ಪ್ರತಿಬಿಂಬಿಸುವ ಕಾರಣದಿಂದಾಗಿ ದೇವರು ತನ್ನ ಪ್ರಾಣಕ್ಕೆ ಕರುಣೆಯನ್ನು ನೀಡಲಿ."

ಇದಕ್ಕೆ ಪ್ರತಿಕ್ರಿಯಿಸಿದ ಗಾಯಕಿ, ಶ್ರೀದೇವಿಗೆ ಪ್ರಾರ್ಥನೆ ಸಲ್ಲಿಸುವುದು ಹರಾಮ್ (ಇಸ್ಲಾಂನಲ್ಲಿ ಸ್ವೀಕಾರಾರ್ಹವಲ್ಲ) ಎಂದು ಹೇಳಿದ್ದಾಳೆ, ಏಕೆಂದರೆ ಅವಳು ಬೌದ್ಧ ಧರ್ಮದವಳಾಗಿದ್ದು, ಇಸ್ಲಾಂ ಪ್ರಕಾರ ಮುಸ್ಲಿಮೇತರಿಗೆ ಮುಸ್ಲಿಮರು ಶಾಂತಿ ಕೋರುವುದು ತಪ್ಪೆಂದು ವಾದಿಸಿದ್ದರು.

ಅವರ ಟ್ವೀಟ್ ಈ ರೀತಿ ಇತ್ತು, "ದೇವರು ಆಕೆಯ ಆತ್ಮದ ಮೇಲೆ ಕರುಣೆಯನ್ನು ತೋರಿಸಬೇಕೆಂದು ನೀವು ಕೇಳುತ್ತೀರಾ! ದೇವರು ನಿಮ್ಮನ್ನು ಕ್ಷಮಿಸಲಿ, ಅವಳು ಬೌದ್ಧ ಧರ್ಮದವಳಾಗಿದ್ದಾಳೆ ಮತ್ತು ದೇವರು ಅವಳ ಮೇಲೆ ಕರುಣೆಯನ್ನು ಹೊಂದುವನು ಎಂದು ನೀವು ನಿಜವಾಗಿಯೂ ಭಾವಿಸುತ್ತೀರಾ?"

ಆದರೆ ಶ್ರೀದೇವಿ ಹಿಂದೂ ಧರ್ಮಾದ ಅನುಯಾಯಿಯಾಗಿದ್ದು, ಗಾಯಕಿ ಅಹ್ಲಾಮ್ ಅಲ್ ಶಂಶಿ ಶ್ರೀದೇವಿಯನ್ನು ಭೌದ್ದ ಧರ್ಮದ ಅನುಯಾಯಿ ಎಂದು ತಪ್ಪಾಗಿ ತಿಳಿದಿದ್ದರು.

ಅಷ್ಟೇ ಅಲ್ಲದೆ ಗಾಯಕಿ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಬೇರೆ ಧರ್ಮದ ಅನುಯಾಯಿಗಳಿಗೆ ಶಾಂತಿ ಕೋರುವುದು ತಪ್ಪೆಂದು ಹೊರಡಿಸಿದ್ದ ಫತ್ವಾವನ್ನು ಟ್ವೀಟ್ ಮಾಡಿದ್ದಳು.

ಆದರೆ ಗಾಯಕಿ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಕೆಲವರು ಟ್ವೀಟ್ ಮಾಡಿ ಗಾಯಕಿಗೆ ಸರಿಯಾಗಿ ಮಂಗಳಾರತಿ ಮಾಡಿದರು.

ಅಬ್ದುಲ್ಲಾ ಅಲ್ - ನಿಮಿ, ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿ, "ಒಂದು ವೇಳೆ ನಿನ್ನ ಗೆಳತಿಯರು ಇಸ್ಲಾಂ ಧರ್ಮವನ್ನು ಹೊರತು ಪಡಿಸಿದ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದಾರೆ ಅವರ ಆತ್ಮಗಳಿಗೂ ಪ್ರಾರ್ಥನೆ ಮಾಡುವುದಿಲ್ಲವೇ ? " ಎಂದು ಕಿಡಿಕಾರಿದರು.

ಆದರೆ ಇದರಿಂದ ವಿಚಲಿತರಾಗದೆ ಗಾಯಕಿ, "ನಾನು ಖಂಡಿತವಾಗಿಯೂ ಪ್ರಾರ್ಥನೆ ಮಾಡುವುದಿಲ್ಲ, ಅವರಿಗೆ ಅವರ ಧಾರ್ಮ ಹೇಗೆ ದೊಡ್ಡದೋ ಹಾಗೆ ನನಗೆ ನನ್ನ ಧರ್ಮ ಕೂಡ ದೊಡ್ಡದೇ,ಒಂದು ವೇಳೆ ಬೇರೆ ಧರ್ಮದ ಅನುಯಾಯಿಗಳಿಗೆ ಪ್ರಾರ್ಥನೆ ಮಾಡಬಹುದೆಂದು ಫತ್ವಾವನ್ನು ಹೊರಡಿಸಿದರೆ ಆಮೇಲೆ ಬೇಕಿದ್ದರೆ ನಾನು ಪ್ರಾರ್ಥಿಸುತ್ತೇನೆ"

ಇದಕ್ಕೆ ಸರಿಯಾದ ಪ್ರತ್ಯುತ್ತರ ನೀಡಿದ ಕಾದಂಬರಿಕಾರ, " "ನಾನು ಈ ಬಗ್ಗೆ ಫತ್ವಾ ಇದೆಯಾ ಇಲ್ಲವ ಎಂದು ಯೋಚಿಸೋಲ್ಲ, ಈ ಜಗತ್ತನ್ನು ಬಿಡುವ ಪ್ರತಿಯೊಬ್ಬ ಶಾಂತಿಯುತ ಮನುಷ್ಯನಿಗೂ, ವಿಶೇಷವಾಗಿ ಜನರನ್ನು ಸಂತೋಷಪಡಿಸುವಲ್ಲಿ ಪಾತ್ರವಹಿಸಿ ರುವಂತಹ ಶ್ರೀದೇವಿಯಂತವರಿಗೆ ಆತ್ಮಕ್ಕೆ ಶಾಂತಿ ಕೋರುವುದನ್ನು ತಡೆಯಲು ಸಾಧ್ಯವಿಲ್ಲ" ಎಂದಿದ್ದಾರೆ.

ಟ್ವಿಟ್ಟರ್-ನಲ್ಲಿ ಕಾದಂಬರಿಕಾರನಿಗೆ ಒಳ್ಳೆಯ ಬೆಂಬಲ ಸಿಕ್ಕಿದು, ಗಾಯಕಿಯನ್ನು ಹಿಗ್ಗಾ ಮುಗ್ಗ ತರಾಟೆ ಮಾಡಿದ್ದಾರೆ.


ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: Ahlam said Muslims shouldn't grieve the death of non-Muslims, backlash followed । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post