ದುಬೈ, ಜು. 30: ಸಂಧ್ಯಾ ಕ್ರಿಯೇಷನ್ಸ್ ಲಾಂಛನದಲ್ಲಿ ಶೋಧನ್ ಪ್ರಸಾದ್ ನಿರ್ಮಾಣದ ಎರಡನೇ ಸೂಪರ್ ಹಿಟ್ ಸಾಹಸಮಯ ಚಿತ್ರ 'ಧಂಡ್' ಇದೇ ಆಗಸ್ಟ್ 3 ರಂದು 4 ಗಂಟೆಗೆ ದುಬೈಯಲ್ಲಿ ಮರು ಪ್ರದರ್ಶನ ಕಾಣಲಿದೆ. ಸಾರ್ವಜನಿಕ ಬೇಡಿಕೆ ಕಾರಣದಿಂದ, ಸಂಧ್ಯಾ ಕ್ರಿಯೇಷನ್ಸ್ ದುಬೈನಲ್ಲಿ ಮತ್ತೊಂದು ಷೋ ನಡೆಸುವ ಸಾಹಸಕ್ಕೆ ಇಳಿದಿದ್ದು, ಈಗಾಗಲೇ ಟಿಕೆಟ್ ಭರದಿಂದ ಮಾರಾಟವಾಗುತ್ತಿದೆ.
"ದಂಡ್", ರಂಜಿತ್ ಬಜ್ಪೆ ನಿರ್ದೇಶನದ ಎರಡನೇ ಚಿತ್ರವಾಗಿದ್ದು ಇದರ ಮೊದಲು ನಿರೆಲ್ ಚಿತ್ರ ಕೂಡಾ ಜನಮನ್ನಣೆಗಳಿಸಿತ್ತು. ಈಗಾಗಲೇ ರಂಜಿತ್ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದು, ಈ ವರ್ಷದ ಕೊನೆಯೊಳಗೆ ಕನ್ನಡ ಚಿತ್ರ ಹೊರತರುವ ಯೋಚನೆಯಲ್ಲಿದ್ದಾರೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. "ದಂಡ್", ರಂಜಿತ್ ಬಜ್ಪೆ ನಿರ್ದೇಶನದ ಎರಡನೇ ಚಿತ್ರವಾಗಿದ್ದು ಇದರ ಮೊದಲು ನಿರೆಲ್ ಚಿತ್ರ ಕೂಡಾ ಜನಮನ್ನಣೆಗಳಿಸಿತ್ತು. ಈಗಾಗಲೇ ರಂಜಿತ್ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದು, ಈ ವರ್ಷದ ಕೊನೆಯೊಳಗೆ ಕನ್ನಡ ಚಿತ್ರ ಹೊರತರುವ ಯೋಚನೆಯಲ್ಲಿದ್ದಾರೆ.
ರಂಜಿತ್ ಬಜ್ಪೆ - Ranjith Bajpe
ದಂಡ್ ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ನಾಯಕನಾಗಿ ನಟಿಸಿದ್ದರೆ. ಅನೂಪ್ ಸಾಗರ್ ಮೊದಲ ಬಾರಿಗೆ ನೆಗೆಟಿವ್ ರೋಲ್ ಮಾಡಿದ್ದಾರೆ. ಚಿತ್ರ ನಿರ್ಮಾಣ ಮಾತ್ರವಲ್ಲದೇ ನಟನೆಯ ಮೂಲಕವೂ ಶೋಧನ್ ಪ್ರಸಾದ್ ಮಿಂಚಿದ್ದು, ದೀಪಕ ಪಾಲಡ್ಕ ಚಿತ್ರದಲ್ಲಿ ನಟಿಸಿದ್ದಾರೆ. ಬಲೇ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ಎಲ್ಲರನ್ನು ಸೆಳೆದಿದ್ದರು.
ದಂಡ್ ಚಿತ್ರದ ಫೋಟೋ
ದಂಡ್ ಚಿತ್ರದ ಟಿಕೆಟ್ ಗಳು ಬಹುತೇಕ ಮಾರಾಟವಾಗಿದ್ದು, ನಿಮ್ಮ ಸೀಟ್ ಕಾದಿರಿಸಲು ಈ ಕೂಡಲೇ 0525569786 & 0551548621 ಕರೆ ಮಾಡಿ.