ಮಹಾ ಮೋಸ : ಕೇರಳಕ್ಕೆ 700 ಕೋಟಿ ಸಹಾಯ ಇಲ್ಲ, ಭಾರತೀಯರ ಸ್ವಾಭಿಮಾನದ ಜೊತೆ ಚೆಲ್ಲಾಟ!

og:image
ಕೇರಳದಲ್ಲಿ ಇತ್ತೀಚಿಗೆ ಬಂದ ಮಹಾ ಮಳೆಗೆ ಕೇರಳ ಅಕ್ಷರಹ ನಾಶವಾಗಿತ್ತು. ಭಾರತೀಯರೆಲ್ಲರೂ ಕೇರಳದಲ್ಲಿ ಆದ ಹಾನಿಗೆ ಮಿಡಿದು, ಅದು ತಮಗೆ ಆದ ಹಾನಿ ಎಂದೇ ತಿಳಿದು ಮರುಗಿದರು. ಅಷ್ಟೇ ಅಲ್ಲದೆ ತಮ್ಮ ಕೈಯ್ಯಲ್ಲಿ ಎಷ್ಟು ಸಾಧ್ಯನೋ ಅಷ್ಟು ಪರಿಹಾರ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಎಲ್ಲಾ ಕೆಲಸ ಬದಿಗಿಟ್ಟು ಕೇರಳ ಪ್ರವಾಸ ಮಾಡಿ ಪರಿಹಾರದ ಕ್ರಮ ಕೈಕೊಂಡಿದ್ದರು. ಅಷ್ಟೇ ಅಲ್ಲದಯೇ ಭಾರತದ ಸೇನೆ ಯಾ ಜೊತೆ ಅರ್. ಎಸ್ ಎಸ್ ನ ಅಂಗ ಸಂಸ್ಥೆ ಸೇವಾ ಭಾರತಿ ಹಗಳಿರು ಕೇರಳದಲ್ಲಿ ಪರಿಹಾರ ಕ್ರಮದಲ್ಲಿ ತೊಡಗಿತ್ತು.

ಇವೆಲ್ಲದರ ಮದ್ಯೆ ಕೇರಳದ ಮುಖ್ಯಮಂತ್ರಿ "ಕೇರಳ ದಲ್ಲಿ ಉಂಟಾದ ನೆರೆಗೆ ಅರಬ್ ಸರ್ಕಾರ 700 ಕೋಟಿ ಸಹಾಯ ಘೋಷಿಸಿದೆ" ಎಂದು ಟ್ವೀಟ್ ಮಾಡಿದರು. ಕೂಡಲೇ ಹಳವಾರು ಮಾಧ್ಯಮಗಳು ವಿದೇಶದಿಂದ ಯಾವುದೇ ಆರ್ಥಿಕ ನೆರವು ಪಡೆಯಲು ಸಾಧ್ಯವಿಲ್ಲ ಎಂದು ವರದಿ ಮಾಡಿದ್ದವು. ಅದಕ್ಕೆ ನರೇಂದ್ರ ಮೋದಿ ಕಾರಣವೆಂಬತ್ತೆ ಕೆಲವು ಸೋಶಿಯಲ್ ಮೀಡಿಯಾ ಬುದ್ಧಿವಂತರು ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದರು.

ಆದರೆ ಈಗ ಎಲ್ಲಾ ಉಲ್ಟಾ ಆಗಿದೆ. ಅಸಲಿಗೆ ಯುಎಇ ಕೇರಳಕ್ಕೆ ಯಾವುದೇ ಪರಿಹಾರ ಘೋಷಿಸಿರಲಿಲ್ಲ. ಯುಎಇಯ ರಾಯಭಾರಿ ಅಹ್ಮದ್ ಅಲ್ಬನ್ನಾ ಅವರು ಗುರುವಾರ "ಇದುವರೆಗೂ ಯುಎಇಯಿಂದ ಯಾವುದೇ ನಿರ್ದಿಷ್ಟ ಮೊತ್ತದ ಹಣಕಾಸಿನ ನೆರವಿನ  ಅಧಿಕೃತ ಘೋಷಣೆ ಮಾಡಿಲ್ಲ "  ಹೇಳಿದ್ದಾರೆ.

ಕೇರಳದ ಜಲ ಪ್ರಳಯ ತುಂಬಾ ಕಳವಳಕಾರಿಯಾಗಿದೆ ನಿಜ, ಆದರೆ ಭಾರತ ತುಂಬಾ ಸ್ವಾಭಿಮಾನಿ ದೇಶ. ಹಾಗಿರುವಾಗ, ಹೀಗೆ ವಿದೇಶಿಯರ ಮುಂದೆ ನಗೆ ಪಾಟಲು ಆಗುವುದು ಎಷ್ಟು ಸರಿ ಎಂದು ಭಾರತೀಯರು ಮರುಗುತ್ತಿದ್ದಾರೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post