ಭಾರತ ನಾಶಮಾಡಿದ ಬಾಲಕೋಟ್ ಟ್ರೈನಿಂಗ್ ಕ್ಯಾಂಪ್ ಹೇಗಿತ್ತು? ಇಲ್ಲಿ ಓದಿ.

og:image
ಮೂಲಗಳ ಪ್ರಕಾರ, ಜೈಶ್ -ಇ-ಮೊಹಮ್ಮದ್ನ ಬಾಲಾಕೋಟ್ ತರಬೇತಿ ಶಿಬಿರಕ್ಕೆ ಒಂದು ಮಸೀದಿಯನ್ನು ತಡೆಗೋಡೆಯ ತರ ಬಳಸಲಾಗುತ್ತಿತ್ತು. ಭಾರತೀಯ ವಾಯುಪಡೆಯಿಂದ (IAF) ಧಾಳಿಯಾದ ಒಂದು ದಿನದ ನಂತರ ಗುಫ್ತಚರ ಮೂಲಗಳು ಈ ಮಾಹಿತಿ ನೀಡಿದೆ. 6 ಎಕರೆ ವಿಸ್ತೀರ್ಣದಲ್ಲಿ ಶಿಬಿರದ ವಿವಿಧ ಸೌಲಭ್ಯಗಳು ಹರಡಿವೆ ಮತ್ತು 600 ಕ್ಕಿಂತಲೂ ಹೆಚ್ಚಿನ ಜನರಿಗೆ ವಸತಿ ಅವಕಾಶ ಕಲ್ಪಿಸುವ 5-6 ಕಟ್ಟಡಗಳನ್ನು ಒಳಗೊಂಡಿದೆ.

ಗುಪ್ತಚರ ವರದಿಗಳ ಪ್ರಕಾರ ಐ ಸಿ 814 ಹೈಜಾಕಿಂಗ್ ಮತ್ತು 2002 ರ ಗೋಧ್ರಾ ದಂಗೆಗಳಲ್ಲಿ ಪ್ರಚಾರ ವೀಡಿಯೊಗಳನ್ನು ಪ್ರದರ್ಶಿಸಿ ಉಗ್ರರನ್ನು ಪ್ರಚೋದಿಸಲು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತರಬೇತಿಯ ನಂತರ, ಉಗ್ರಗಾಮಿಗಳನ್ನು ನಾಲ್ಕು ಮಾರ್ಗಗಳ ಮೂಲಕ  ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುತ್ತಿತ್ತು,  ಉಗ್ರರನ್ನು ಬಾಲಕೋಟ್-ಕೆಲ್-ದುಧ್ನಿಯಲ್, ಕೆಲ್-ಕಾಯಿಂಥಾವಾಲಿ, ಕೆಲ್-ಲೋಲಾಬ್ ಜಿಲ್ಲೆ ಮತ್ತು ಕೆಲ್-ಕಚಾಮ ಕ್ರಾಪ್ರಾರ ಮಾರ್ಗಗಳ ಮೂಲಕ ಭಾರತಕ್ಕೆ ಕಳುಹಿಸಿ ಉಗ್ರ ಚಟುವಟಿಕೆ ಮಾಡಿಸಲಾಗಿತ್ತು. .

ಗುಪ್ತಚರ ಇಲಾಖಾ ವರದಿಗಳ ಪ್ರಕಾರ, ದೌಮ್-ಎ-ಖಾಸ್ ಎಂದು ಕರೆಯಲ್ಪಡುವ ಮೂರು-ತಿಂಗಳ ಕೋರ್ಸ್, ದಾಮ್-ಅಲ್-ರಾದ್ ಎಂಬ ಮುಂದುವರಿದ ಸಶಸ್ತ್ರ ತರಬೇತಿ ಕೋರ್ಸ್ ಮತ್ತು "ರಿಫ್ರೆಶ್ ತರಬೇತಿ ಕಾರ್ಯಕ್ರಮ" ಗಳನ್ನು ಈ ತರಭೇತಿ ಶಿಬಿರಗಳಲ್ಲಿ ನಡೆಸಲಾಗುತ್ತಿತ್ತು.

"ಎಕೆ 47, ಮೆಷೀನ್ ಗನ್, ಎಲ್ಎಂಜಿ, ರಾಕೆಟ್ ಲಾಂಚರ್, ಬ್ಯಾರೆಲ್ ಗ್ರೆನೇಡ್ ಲಾಂಚರ್ ಮತ್ತು ಗ್ರೆನೇಡ್ನಂತಹ ಶಸ್ತ್ರಾಸ್ತ್ರಗಳನ್ನು ನಿಭಾಯಿಸುವಲ್ಲಿ ತರೆಬೇತಿ ನೀಡುತ್ತಿದ್ದಾರೆ ಎನ್ನಲಾಗಿದೆ. ಮೂಲಭೂತ ತರಬೇತಿಯಲ್ಲದೆ, ಜಿಪಿಎಸ್ ಮತ್ತು ಮ್ಯಾಪ್  ಬಳಸಿಕೊಂಡು ಅರಣ್ಯಗಳಲ್ಲಿ ಬದುಕುಳಿಯು ಟ್ರೈನಿಂಗ್, ಆತ್ಮಾಹುತಿ ಧಾಳಿಗೂ ಅವರು ತರಬೇತಿ ನೀಡುತ್ತಿದ್ದಾರೆ ಎಂದು ಗುಪ್ತಚರ ವರದಿ ತಿಳಿಸಿದೆ. ಜೆಎಂ ಆರಂಭದ ಮೊದಲು ಶಿಬಿರವನ್ನು ಹಿಜ್ಬುಲ್ ಮುಜಾಹಿದೀನ್ ಬಳಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು.

ಬುಧವಾರ ಬೆಳಿಗ್ಗೆ 3 ಗಂಟೆಗೆ ಉಗ್ರಗಾಮಿಗಳು ಖುರಾನ್ ಪಠಣದೊಂದಿಗೆ ವ್ಯಾಯಾಮ ಆರಂಭಿಸಿ ನಂತರ ವಿವಿಧ ತರಬೇತಿಗಳನ್ನು ಪಡೆಯುತ್ತಾರೆ ಎಂದು ಗುಪ್ತಚರ ವರದಿ ತಿಳಿಸಿದೆ. ನಂತರ, ಸಾಕ್ಷಗಳನ್ನು ಮರೆಮಾಚಲು ಮತ್ತು ತಪ್ಪಿಸಿಕೊಳ್ಳಲು  ಶಸ್ತ್ರಾಸ್ತ್ರ ತರಬೇತಿ ಮತ್ತು ಪಾಠಗಳನ್ನು ನೀಡಲಾಗುತ್ತಿತ್ತು. ವರ್ಷಕ್ಕೆ ಈ ಶಿಬಿರದಲ್ಲಿ ತರಬೇತಿ ಪಡೆಯುವ ಉಗ್ರಗಾಮಿಗಳ ಸಂಖ್ಯೆ 200-300  ಎಂದು ಅಂದಾಜಿಸಲಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post