"ನಾನು ನನ್ನ ದೇಶಕ್ಕೆ ಹಿಂದಿರುವಾಗ ನಾನು ನನ್ನ ಹೇಳಿಕೆಯನ್ನು ಬದಲಿಸುವುದಿಲ್ಲ, ಪಾಕಿಸ್ತಾನ ಸೇನೆಯ ಅಧಿಕಾರಿಗಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ" ಎಂದು ಅಭಿನಂದನ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾದ ವೀಡಿಯೋವನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದೆ.
ಜಿನಿವಾ ಒಪ್ಪಂದದ ಪ್ರಕಾರ, ಪಾಕಿಸ್ತಾನವು ಭಾರತದ ಯಾವುದೇ ಯೋಧ ಸೆರೆಸಿಕ್ಕರೆ, ಯಾವುದೇ ದೈಹಿಕ ಹಲ್ಲೆ ಮಾಡುವಂತಿಲ್ಲ. ಒಂದು ವೇಳೆ ದೈಹಿಕವಾಗಿ ಹಿಂಸಿಸಿದರೆ, ಭಾರತ ಧಾಳಿಮಾಡುವ ಸಂಭವವಿರುವುದರಿಂದ, ಪಾಕಿಸ್ತಾನ ಕೂಡಲೇ ವೀಡಿಯೋ ಬಿಡುಗಡೆ ಮಾಡಿದ್ದು, ಅಭಿನಂದನ್ ಯಾವಗ ಭಾರತಕ್ಕೆ ಮರಳಿ ಬರುತ್ತಾರೆ ಎಂದು ಭಾರತೀಯರು ಕಾತುರದಿಂದ ಕಾಯುತ್ತಿದ್ದಾರೆ.

