ನವದೆಹಲಿ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಗೃಹ ಸಚಿವಾಲಯ ಇತ್ತೀಚೆಗೆ ರಾಹುಲ್ ಪೌರತ್ವ ಸ್ಥಿತಿಯನ್ನು ಪ್ರಶ್ನಿಸಿರುವ ದೂರಿಗೆ ಸಂಭಂಧಿಸಿದಂತೆ, ತನ್ನ "ನೈಜ್ಯ ವಿಷಯ" ಎರಡು ದಿನಗಳೊಳಗೆ ಸ್ಪಷ್ಟನೆ ಸಲ್ಲಿಸುವಂತೆ ಗಾಂಧಿಯವರಿಗೆ ಸೂಚನೆ ನೀಡಿದೆ.
ಗೃಹ ಸಚಿವಾಲಯ ಮತ್ತು ಇ.ಸಿ.ಗೆ ಮುಂಚಿತವಾಗಿ ಪ್ರಾಥಮಿಕ ಸಾಕ್ಷ್ಯಾಧಾರ ಸಲ್ಲಿಸಿರುವುದರಿಂದ, ಗಾಂಧಿಯವರು ನಡೆಯುತ್ತಿರುವ ಲೋಕಸಭೆ ಚುನಾವಣೆಗಳಲ್ಲಿ ಉತ್ತರ ಪ್ರದೇಶದ ಅಮೇಥಿಗೆ ಮತ್ತು ಕೇರಳದ ವಯನಾಡ್ನಲ್ಲಿರುವ ಸಂಸತ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಅರ್ಜಿದಾರರು- ಜೈ ಭಗವಾನ್ ಗೋಯಲ್ ಮತ್ತು ಸಿಪಿ ತ್ಯಾಗಿ ಆರೋಪಿಸಿದ್ದಾರೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.