ಚಹಾ ಮಾಡಲು ಹೇಳಿದರೂ ಮೊಬೈಲ್ ಗೇಮ್ ಆಡಿದ ಮಗ - ನೊಂದ ತಾಯಿ ಆತ್ಮಹತ್ಯೆ

og:image
ಮೊಹಾಲಿ: ಮೊಹಾಲಿಯ ಡೇರಾ ಬಾಸ್ಸಿ ಪ್ರದೇಶದ ಗುಲ್ಮೋಹರ್ ನಗರದಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಒಂದು ಕಪ್ ಚಹಾದ ವಿಷಯದಲ್ಲಿ ಮನನೊಂದು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ಮಹಿಳೆ ಬುಧವಾರ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಹಿಳೆ ತನ್ನ 10 ವರ್ಷದ ಮಗ, ತನಗಾಗಿ ಚಹಾವನ್ನು ಸಿದ್ಧಪಡಿಸದ ಕಾರಣ ಮತ್ತು ಮೊಬೈಲ್ ಫೋನ್‌ನಲ್ಲಿ ಆಟ ಆಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಮಹಿಳೆಯ ಪತಿ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನಿಗೆ 10 ವರ್ಷ, ಇನ್ನೊಬ್ಬನಿಗೆ 3 ವರ್ಷ. ಮೃತ ಮಹಿಳೆ ಪಶ್ಚಿಮ ಬಂಗಾಳ ಮೂಲದವರಾಗಿದ್ದರೆ.

ಎಲೆಕ್ಟ್ರಿಷಿಯನ್ ಮತ್ತು ಅವರ ಹಿರಿಯ ಮಗ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿದ್ದಾಗ, ಮಹಿಳೆ ಮನೆಯ ಇನ್ನೊಂದು ಕೋಣೆಗೆ ಹೋಗಿ ನೇಣು ಹಾಕಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಮಹಿಳೆ ತನ್ನ ಸಹೋದರಿಯನ್ನು ಕರೆದು ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಳು. ಮಹಿಳೆಯ ಪತಿ ನೇಣು ಬಿಗಿದುಕೊಂಡಿರುವದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮೃತರು ಯಾವುದೇ ಆತ್ಮಹತ್ಯೆ ಪತ್ರವನ್ನು ಬಿಟ್ಟಿಲ್ಲ.

ಡೇರಾ ಬಾಸ್ಸಿ ಪೊಲೀಸ್ ಠಾಣೆಯ ತನಿಖಾ ಅಧಿಕಾರಿ  ಸತ್ವೀರ್ ಸಿಂಗ್ ಪ್ರಕಾರ, ಸುಮಾರು 3 ವರ್ಷಗಳ ಹಿಂದೆ ಮಹಿಳೆಯ ಸಹೋದರ ನಿಧನರಾಗಿದ್ದು ಅಂದಿನಿಂದ ಅವರು ಮಾನಸಿಕವಾಗಿ ಅಸಮಾಧಾನಗೊಂಡಿದ್ದರು ಎಂದು ಹೇಳಿದರು. "ಅವರು ಕ್ಷುಲ್ಲಕ ವಿಷಯಗಳಲ್ಲಿ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದರು ಮತ್ತು ಬುಧವಾರ ಬೆಳಿಗ್ಗೆ ಸಹ, ತನ್ನ ಮಗ ತನ್ನ ಚಹಾವನ್ನು ಮಾಡದ ಕಾರಣ ಅವಳು ಕೋಪಗೊಂಡಳು" ಎಂದು ಸಿಂಗ್ ಹೇಳಿದರು.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post