ಮದುವೆಯಾಗದೇ ಇದ್ದರೂ ಒಂದೇ ಮನೆಯಲ್ಲಿ ವಾಸ - ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಬೆಂಗಳೂರು: ಇದೊಂದು ವಿಚಿತ್ರ ಪ್ರೇಮಕಥೆ. ಪ್ರೇಮಿಗಳಿಬ್ಬರೂ ಮದುವೆಯಾಗದೆ ಇದ್ದರೂ ಜೊತೆಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದು, ಕೊನೆಗೆ ಈ ಪ್ರೇಮ ಕಥೆ ದೋಸ ತವಾದಿಂದ ತಲೆ ಮೇಲೆ ಹೊಡೆದು ಕೊಲೆಯಲ್ಲಿ ಅಂತ್ಯವಾಗುತ್ತದೆ.
ತಿಂಗಳಿನಿಂದ ಜೊತೆಯಲ್ಲೇ ವಾಸಿಸುತ್ತಿದ್ದರೂ ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನ ತರೀಕೆರೆ ಮೂಲದ ಇಪ್ಪತ್ತೈದು ವಯಸ್ಸಿನ ನಯನ ಎಂಬ ಯುವತಿ ಮತ್ತು ಪಾವಗಡ ಮೂಲದ ಕ್ಯಾಬ್ ಚಾಲಕ ತಿಪ್ಪೇಸ್ವಾಮಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಲಿವ್ ಇನ್ ಟುಗೆದರ್ ರಿಲೇಷನ್ ನಲ್ಲಿ ದ್ದರು.
ಆದರೆ, ಇತ್ತೀಚೆಗೆ ನಯನಾ, ಬೇರೆ ಯುವಕನೊಂದಿಗೆ ಚಾಟ್ ಕಾಲ್ ಎಂದು ಸಮಯಕಳೆಯುತ್ತಿದ್ದುದನ್ನ ಕಂಡ ತಿಪ್ಪೇಸ್ವಾಮಿ ಕೋಪಗೊಂಡು ಅವಳನ್ನು ಪ್ರಶ್ನಿಸಿದ್ದಾನೆ.ಆಗ ತಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ನಯನಾ ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಿಪ್ಪೇಸ್ವಾಮಿ ಚಾಕುವಿನಿಂದ ನಯನಾ ಮೇಲೆ ಹಲ್ಲೆ ಮಾಡಿದ್ದಾನೆ.
ಇದರಿಂದ ಕುಪಿತಗೊಂಡ ನಯನಾ ಕೂಡಾ ತವಾದಿಂದ ತಿಪ್ಪೇಸ್ವಾಮಿ ಮೇಲೆ ಹಲ್ಲೆ ಮಾಡಿದ್ದು, ಕೊನೆಗೆ ಆರೋಪಿ ನಯನಾಳ ಕೈಯಿಂದ ತವಾ ಕಿತ್ತುಕೊಂಡು, ಅದೇ ತವಾದಿಂದ ಅವಳ ತಲೆಗೆ ಹೊಡೆದು ಕೊಂದಿದ್ದಾನೆ.
ಹತ್ಯೆ ಬಳಿಕ ತಿಪ್ಪೆಸ್ವಾಮಿ ಮಾರತಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಬಗ್ಗೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |