ಫ್ರೆಂಚ್ ಬಿರಿಯಾನಿ ಚಿತ್ರದ ವಿಮರ್ಶೆ! ಚಿತ್ರಪ್ರೇಮಿಗಳಿಗೆ ಏನನಿಸಿತು?- ಓದಿ

og:image

ಪುನೀತ್ ರಾಜ್ಕುಮಾರ್ ನಿರ್ಮಾಣದ ಚಿತ್ರ "ಫ್ರೆಂಚ್ ಬಿರಿಯಾನಿ' ಇದೀಗ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ವಿಮರ್ಶೆ ಹೇಗಿದೆ. ಚಿತ್ರಪ್ರೇಮಿಗಳಿಗೆ ಏನನಿಸಿತು? ಎಂದು ಇಲ್ಲಿ ಬರೆದಿದ್ದೇವೆ ಓದಿ. 

ನೀವು ಚಿತ್ರದ ಟ್ರೇಲರ್ ಇನ್ನೂ ನೋಡಿಲ್ಲ ಎಂದರೆ ಈಗಲೇ ನೋಡಲೇ ಬೇಕು. ಯಾಕಂದರೆ ಟ್ರೇಲರ್ ಚಿತ್ರದ ವಿಸಿಟಿಂಗ್ ಕಾರ್ಡ್ ಅಂತಾರೆ. ಫ್ರೆಂಚ್ ಬಿರಿಯಾನಿ ಚಿತ್ರದ ವಿಸಿಟಿಂಗ್ ಕಾರ್ಡ್ ನೋಡಿದ್ರೆ ಚಿತ್ರ ಎಷ್ಟು ಚೆನ್ನಾಗಿ ಇರುತ್ತದೆ ಎಂದು ನಿಮಗೆ ಅರಿವಾಗುತ್ತದೆ. ಇಲ್ಲಿದೆ ನೋಡಿ ಟ್ರೇಲರ್

ಚಿತ್ರ ಬಿಡುಗಡೆಯಾದಂತೆ ಎಲ್ಲರೂ ಚಿತ್ರ ನೋಡಿ ತಮ್ಮ ಅಭಿಪ್ರಾಯ ಹಂಚಲು ಪ್ರಾರಂಬಿಸಿದ್ದಾರೆ. ಕೆಲವರಿಗೆ ಡ್ಯಾನಿಸ್ ಸೇಟ್ ಕಾಮೆಡಿ ಇಷ್ತವಾದರೆ, ಇನ್ನೂ ಕೆಲವರಿಗೆ 'ಶಿವಾಜಿನಗರ ಕನ್ನಡ' ಕಷ್ಟ ಎಂದೆನಿಸಿತು. ಹಲಾವರು ಮಂದಿ ಚಿತ್ರ ನೋಡಿ ಉರ್ದು ಚಿತ್ರತರ ಇದೆ ಎಂದು ಬರೆದಿದ್ದಾರೆ. 

ಹಲವರಿಗೆ ಅಮೇಜಾನ್ ಪ್ರೈಮ್ ನಲ್ಲಿ ಬಿರಿಯಾನಿನೇ ಸಿಗಲಿಲ್ಲ. ಇದಕ್ಕೆ ಕಾರಣ ಬಿರಿಯಾನಿ ಸ್ಪೆಲ್ಲಿಂಗ್. ಹಲವಾರು ಮಂದಿ "Biryani" ಎಂದು ಸರ್ಚ್ ಮಾಡಿದ್ದು, ನಿಜವಾದ ಸ್ಪೆಲ್ಲಿಂಗ್ "Biriyani" ಆಗಿರುವುದೇ ಇಷ್ಟೆಲ್ಲಾ ಆವಾಂತರಕ್ಕೆ ಕಾರಣ. 

ಡ್ಯಾನಿಸ್ ಸೇಟ್ ತಮ್ಮ ಉರ್ದು ಮಿಶ್ರಿತ ಕನ್ನಡದಿಂದ ಮನಸೆಳೆಯುತ್ತಾರೆ, ಆದರೆ ಕೆಲವು ಅಗತ್ಯವಿಲ್ಲದ ದೃಶ್ಯಗಳಿಂದ ಸ್ವಲ್ಪ ಬೋರ್ ಹೊಡೆಸುತ್ತೆ ಅಂತ ಬರೆದಿದ್ದಾರೆ. ಹಾಸ್ಯ ದೃಶ್ಯಗಳು ಮಜ ನೀಡುತ್ತವೆ ಎಂದು ಬರೆದಿದ್ದಾರೆ. ಮೊದಲಾರ್ದದಲ್ಲಿ ಸಂಗೀತ ಅತ್ತುತ್ತಮವಾಗಿದೆ ಎಂದಿದ್ದಾರೆ. 

ಉತ್ತಮ ಎಡಿಟಿಂಗ್ ಮತ್ತು ಕಣ್ಮನ ಸೆಳೆಯುವ ಕ್ಯಾಮೆರಾ ಕೈಚಲಕದಲ್ಲಿ ಬೆಂಗಳೂರು ಅತ್ತುತ್ತಮವಾಗಿ ಕಾಣಿಸುತ್ತದೆ.  ಡ್ಯಾನಿಸ್ ಸೇಟ್ ಅವರ ಮಜಭರಿತ ಡೈಲಾಗ್ ಗಳೂ ಇಲ್ಲೂ ಮನಸಳೆಯುತ್ತದೆ. 

ದಿಶಾ ಮದನ್ ಉತ್ತಮವಾಗಿ ನಟಿಸಿದ್ದರೆ, ಸಾಲ್ ಯುಸುಫ್ ಅಬಿನಯ ಮನದಲ್ಲಿ ಉಳಿಯುತ್ತದೆ. ಚಿತ್ರವನ್ನು ನೋಡಿ ಒಪ್ಪಿಕೊಂಡವರು ಉತ್ತಮ ಸಂಗೀತ, ನಟನೆ ಮತ್ತು ಕಾಮೆಡಿ ಟೈಮಿಂಗ್ಗಾಗಿ ಇಷ್ಟ ಪಟ್ಟರು. 

ಪುನೀತ್ ರಾಜ್ಕುಮಾರ್ ಗೆ ಧನ್ಯವಾದ 

ಹೌದು. ಚಿತ್ರ ನೋಡಿ ಮುಗಿಸಿದ ಕೆಲವರು ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಏಕೆಂದರೆ 'ಫ್ರೆಂಚ್ ಬಿರಿಯಾನಿ' ಉತ್ತಮ ಚಿತ್ರವಾಗಿದ್ದು, ಇದನ್ನು ಕನ್ನಡದಲ್ಲಿ ನಿರ್ಮಿಸಿದ್ದಾಕ್ಕಾಗಿ ಪುನೀತ್ ಆವರಿಗೆ ನೆಟ್ಟಿಗರು ಥ್ಯಾಂಕ್ಸ್ ಎಂದರು. 

ಇನ್ನೂ ಹಲವಾರು ಕನ್ನಡ ಚಿತ್ರಗಲೂ ಅಮೇಜಾನ್ ಪ್ರೈಮ್ ಮತ್ತು ಉನ್ನುಳಿದ ಆಪ್ ಮೂಲಕ ಬರಲಿದ್ದು, ಅದರಲ್ಲಿ ಪ್ರಭು ಮುಂಡ್ಕೂರು ಅಭಿನಯದ 'ಮಾಯಾ ಕನ್ನಡಿ' ಪ್ರಮುಖವಾಗಿದೆ. ಬ್ಲೂವೇಲ್ ಗೇಮ್ ಆಧಾರಿತ ಈ ಚಿತ್ರ ಈಗಾಗಲೇ ಕುತೂಹಲ ಉಂಟು ಮಾಡಿದೆ. ಚಿತ್ರದ ಟ್ರೇಲರ್ ಇಲ್ಲಿ ನೋಡಿ
'ಮಾಯಾ ಕನ್ನಡಿ' ಚಿತ್ರಕ್ಕೆ ಉತ್ತಮ ವಿಮರ್ಶೆ ಬಂದಿದ್ದು, ಎಲ್ಲರಲ್ಲೂ ಕುತೂಹಲ ಉಂಟು ಮಾಡಿದೆ. ಇಲ್ಲಿದೆ 'ಮಾಯಾಕನ್ನಡಿ' ಚಿತ್ರದ ವಿಮರ್ಶೆ. 
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post