ಸುಶಾಂತ್ ಸಿಂಗ್ ಕೊನೆಯ ಚಿತ್ರ 'ದಿಲ್ ಬೇಚಾರ' ಚಿತ್ರದ ರಿವ್ಯೂ

Admin
og:image

ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ಒಂದೂವರೆ ತಿಂಗಳ ನಂತರ, ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಏಕಕಾಲದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ದೇಶದ ಮತ್ತು ವಿದೇಶದಲ್ಲಿ ಬಿಡುಗಡೆಯಾಗಿದೆ.  

ಸಾವು ಮತ್ತು ಪ್ರೀತಿಯ ನಡುವೆ ಸುತ್ತವ ಕತೆ ಇರುವ ದಿಲ್ ಬೆಚಾರದಲ್ಲಿ ಸುಶಾಂತ್ ಜೀವನದ ಪಾಠ ಕಲಿಸುತ್ತಾರೆ. ಮ್ಯಾನಿಯಾಗಿ ಚಿತ್ರದಲ್ಲಿ ಸುಶಾಂತ್ ನಟಿಸಿದ್ದು, ದಿವ್ಯಾಂಗರಾಗಿದ್ದರೂ   ಜೀವನವನ್ನು ಮುಕ್ತವಾಗಿ ಬದುಕುವ ಯುವಕನ ಪಾತ್ರವಾಗಿದೆ. ಥೈರಾಯ್ಡ್ ಕ್ಯಾನ್ಸರ್ ರೋಗದಿಂದ ಬಳಲುವ ಬಂಗಾಳಿ ಹುಡುಗಿ ಕೀಜಿ ಬಸು ಮತ್ತು ಮ್ಯಾನಿ ಪರಸ್ಪರ ಭೇಟಿಯಾಗುತ್ತಾರೆ. ಯಾವಾಗಲೂ ಆಮ್ಲಜನಕದ ಸಿಲಿಂಡರ್‌ನೊಂದಿಗೆ ಬಾಳುವ ಕೀಜಿ, ಜೀವನದಲ್ಲಿ ಯಾವಾಗಲೂ ಅತೃಪ್ತಿ ಹೊಂದಿರುತ್ತಾಳೆ. ಅತೃಪ್ತಿಯ ಬದುಕು ಬಾಳುತ್ತಿರುಚ ಕೀಜಿ, ಯಾವಾಗಲೂ ಸಂತೋಷದಿಂದ ಇರುವ ಮ್ಯಾನಿಯನ್ನು ಭೇಟಿಯಾದಾಗ, ಅವರ ಜೀವನವು ಬದಲಾಗುತ್ತದೆ. 

ಕೀಜಿ ಮತ್ತು ಮನ್ನಿ ಇಬ್ಬರೂ ಸಾವಿಗೆ ಹತ್ತಿರವಿರುತ್ತಾರೆ. ಕೀಜಿಯ ಪ್ರತಿಯೊಂದು ಕನಸನ್ನು ಈಡೇರಿಸಲು ಮ್ಯಾನಿ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಾನೆ, ಆದರೆ ಕೊನೆಯಲ್ಲಿ, ಅವನು ಸ್ವತಃ ಸಾಯುವ ಅಂಚಿಗೆ ಬಂದಾಗ ಕೀಜಿಗೆ ಜೀವನದಲ್ಲಿ ಖುಷಿಯಾಗಿರವ ಮಂತ್ರ ಹೇಳಿಕೊಡುತ್ತಾನೆ. 

ಈ ಚಿತ್ರವು ಪ್ರಸಿದ್ಧ ಕಾದಂಬರಿಕಾರ ಜಾನ್ ಗ್ರೀನ್ ಅವರ 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್' ಪುಸ್ತಕವನ್ನು ಆಧರಿಸಿದೆ. ಇದೇ ಕಾದಂಬರಿ ಆಧಾರದ ಮೇಲೆ ಎರಡು ವರ್ಷಗಳ ಹಿಂದೆ ಇಂಗ್ಲಿಷ್ ಚಲನಚಿತ್ರವನ್ನು ಸಹ ಮಾಡಲಾಗಿದೆ. ಅಮೆರಿಕದಲ್ಲಿ ನಡೆಯುವ ಕಥೆಯನ್ನು ಇಲ್ಲಿ ಜಮ್ಶೆಡ್ಪುರವಾಗಿ ಮಾರ್ಪಟ್ಟಿಸಲಾಗಿದೆ. 

ಚಿತ್ರದ ಪ್ರಮುಖ ಆಕರ್ಷಣೆ ಸುಶಾಂತ್ ಮತ್ತು ಸಂಜನಾ ಅವರ ಜೋಡಿ. ಕೀಜಿ ಬಸು ಪಾತ್ರವನ್ನು ಸಂಜನಾ ಸುಂದರವಾಗಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಮುದ್ದಾದ ಕ್ಷಣಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಚಿಚೋರೆ ಮತ್ತು ಧೋನಿ ನಂತರ ಸುಶಾಂತ್ ಮತ್ತೊಂದು ಉತ್ತಮ ಪ್ರದರ್ಶನ ನೀಡಿದ್ದಾರೆ. ಉಡಾನ್ ಚಿತ್ರದ ನಂತರ, ಜಮ್ಶೆಡ್ಪುರದ ಸ್ಥಳಗಳು ಚಿತ್ರದಲ್ಲಿ ಬಹಳ ಚೆನ್ನಾಗಿ ಚಿತ್ರಿತವಾಗಿದೆ. 

ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರವಾಗಿರುವುದರಿಂದ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದ ಕಾರಣ ಹೆಚ್ಚಿನ ಜನರು ಚಿತ್ರವನ್ನು ಡಿಸ್ನಿ-ಹಾಟ್ ಸ್ಟಾರ್ ಮೂಲಕ ನೋಡ ಬಹುದಾಗಿದೆ. ಚಿತ್ರ ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆಯಾಗಿರುವುದರಿಂದ ಹೆಚ್ಚಿನ ಜನರು  ನೋಡಲು ಸಾಧ್ಯವಾಗುತ್ತದೆ.  ಚಿತ್ರದಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತವು ಸುಮಧುರವಾಗಿದ್ದು ಕಥೆಗೆ ಸರಿಹೊಂದುತ್ತದೆ .

ಸುಶಾಂತ್ ಮತ್ತು ಸಂಜನಾ ಅವರಲ್ಲದೆ, ಬಂಗಾಳಿ ನಟರಾದ ಸ್ವಸ್ತಿಕ್ ಮುಖರ್ಜಿ, ಶಶ್ವತಾ, ಸಾಹಿಲ್ ವೇದ್ ಕೂಡ ತಮ್ಮ ಪಾತ್ರಗಳನ್ನು ಸುಂದರವಾಗಿ ನಿರ್ವಹಿಸಿದ್ದಾರೆ. ಸೈಫ್ ಅಲಿ ಖಾನ್ ಪಾತ್ರ ಈ ಚಿತ್ರದಲ್ಲಿ ವಿಶೇಷವಾಗಿದೆ. ಕಾಸ್ಟಿಂಗ್ ನಿರ್ದೇಶಕರಾಗಿ ಪ್ರಸಿದ್ಧರಾದ ಮುಖೇಶ್ ಛಾಬ್ರಾ ಅವರು ಚಿತ್ರದಲ್ಲಿ ಪಾತ್ರಗಳ ಭಾವನೆಗಳನ್ನು ಪ್ರಸ್ತುತಪಡಿಸಲು  ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆಯಾಗಿ, ಸುಶಾಂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಸ್ಮರಣೀಯವಾಗಲಿದೆ.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

#buttons=(Accept !) #days=(20)

Our website uses cookies to enhance your experience. Learn More
Accept !