ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ರಿಯಾ ಚಕ್ರವರ್ತಿ ವಿರುದ್ಧ 'ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಂದೊಡ್ದುವುದು' ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಿಯಾ, ಸುಶಾಂತ್ ಅವರಿಂದ ಹಣವನ್ನು ತೆಗೆದುಕೊಂಡಿದ್ದಾಳೆ ಎಂದು ಸುಶಾಂತ್ ತಂದೆ ಆರೋಪಿಸಿದ್ದಾರೆ. ಸುಶಾಂತ್ ಅವರ ಆತ್ಮಹತ್ಯೆಯ ಹಿಂದಿನ ಕಾರಣ ಆಕೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ರಿಯಾ ಮತ್ತು ಸುಶಾಂತ್ ಅವರು, ಜೂನ್ 14, 2020 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದರು. ಸುಶಾಂತ್ ಅವರ ತಂದೆ ಮುಂಬೈ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಅವರನ್ನು ಜೂನ್‌ನಲ್ಲಿ ಮುಂಬೈ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆ ಸಮಯದಲ್ಲಿ ಅವರು ಯಾರ ವಿರುದ್ಧವೂ ಇಲ್ಲ ಎಂದು ಹೇಳಿದರು. ಈ ಪ್ರಕರಣದಲ್ಲಿ ಮುಂಬೈನ ಬಾಂದ್ರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮುಂಬೈನಲ್ಲಿ ರಿಯಾಳನ್ನು ಪೊಲೀಸರು ಪ್ರಶ್ನಿಸಿದಾಗ, ಸುಶಾಂತ್ ಅವರು ಯಶ್ ರಾಜ್ ಫಿಲಂ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿದ್ದರು ಮತ್ತು ತನಗೂ ಅದೇ ರೀತಿ ಮಾಡಲು ಸಶಾಂತ್ ಕೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದರು. ಇಲ್ಲಿಯವರೆಗೆ ಪೊಲೀಸರು 40 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಮಧ್ಯಪ್ರವೇಶಿಸಿ ಆದೇಶ ನೀಡುವಂತೆ ರಿಯಾ ಇತ್ತೀಚೆಗೆ ಗೃಹ ಸಚಿವ ಅಮಿತ್ ಷಾಗೆ ಮನವಿ ಮಾಡಿದ್ದರು.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.
ಇದನ್ನೂ ಓದಿ :
English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.