ಹಾಸ್ಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಮೂಲಕ ಮನೆ ಮಾತಾಗಿದ್ದ ನಯನಾ ತಮ್ಮ ಫೇಸ್ ಬುಕ್ ಪುಟದಲ್ಲಿ ಅವರು ಇಂಗ್ಲಿಷ್‌ನಲ್ಲಿಯೇ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಇದನ್ನು ಪ್ರಶ್ನಿಸಿದವರನ್ನು ವ್ಯಂಗ್ಯವಾಡಿದ್ದಾರೆ. ಈ ಮೂಲಕ ನಯನ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಿನಿಮಾಗಳಲ್ಲಿ ನಟಿಯಾಗಿಯೂ ಗುರುತಿಸಿಕೊಂಡಿರುವ ಅವರು ಕನ್ನಡದ ಅಭಿಮಾನಿಯೊಬ್ಬರಿಗೆ ಕೆಟ್ಟ ಪದ ಬಳಕೆ ಮಾಡಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಬ್ಬರು 'ಫೇಮಸ್ ಆಗೋತನಕ ಕನ್ನಡ ಬೇಕು. ಆದ್ಮೇಲೆ ಇಂಗ್ಲಿಷ್' ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಮೆಂಟ್ ಹಾಕಿದ್ದರು. ಅದಕ್ಕೆ ನಯನಾ, 'ಅಪ್ಪಾ ಕನ್ನಡದ ಭಕ್ತ ಮುಚ್ಕೊಂಡ್ ನಿನ್ನ ಕೆಲಸ ನೋಡ್ಕೋ' ಎಂದು ಪ್ರತಿಕ್ರಿಯಿಸಿದ್ದರು
ನಯನಾ ಅವರ ವರ್ತನೆ ಅನೇಕರನ್ನು ಕೆರಳಿಸಿದೆ. ಬೆಳೆಯೋವಾಗ ಕನ್ನಡ ಭಾಷೆ, ಕರ್ನಾಟಕ ಬೇಕು. ಹೆಸರು ಗಳಿಸಿದ ಬಳಿಕ ಕನ್ನಡ ಬಿಟ್ಟು ಇಂಗ್ಲಿಷ್‌ಗೆ ಹೋಗುತ್ತೀರ. ಅದನ್ನು ಪ್ರಶ್ನಿಸಿದರೆ ಕೆಟ್ಟ ಪದಗಳಿಂದ ನಿಂದಿಸುತ್ತೀರಾ ಎಂದು ಅನೇಕರು ಕಿಡಿಕಾರಿದ್ದಾರೆ.
Tags:
Entertainment