ಸುಶಾಂತ್ ಸಿಂಗ್ ರಾಜ್ಪೂತ್ ನಿಗೂಡ ರೀತಿಯಲ್ಲಿ 'ಆತ್ಮಹತ್ಯೆ' ಮಾಡಿ ಪ್ರಾಣ ಕಳೆದುಕೊಂಡು ತಿಂಗಳುಗಳೇ ಕಳೆದರೂ, ಅವರ ಅಭಿಮಾನಿಗಳಲ್ಲಿ ಇನ್ನೂ ದುಃಖ ಕೊನೆಗೊಂಡಿಲ್ಲ. ತಮ್ಮ ನೆಚ್ಚಿನ ನಟನಿಗೆ ತಮ್ಮ ಪ್ರೀತಿ ಪೂರ್ವಕವಾಗಿ ಶ್ರದ್ದಾಂಜಲಿ ಸಲ್ಲಿಸುತ್ತಲೇ ಇದ್ದಾರೆ.
ಸುಶಾಂತ್ ಅವರದ್ದು ಆತ್ಮಹತ್ಯೆ ಎಂದು ಪೊಲೀಸರು ಹೇಳಿಕೊಂಡಿದ್ದರೂ, ಅಭಿಮಾನಿಗಳು ಅದನ್ನು ಇನ್ನೂ ಒಪ್ಪಲಾರರು. ಟ್ವಿಟ್ಟರ್ ಮೂಲಕ ಈಗಾಗಲೇ ಹಲವಾರು ಭಾರಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು, ಗೃಹಮಂತ್ರಿ ಅಮಿತ್ ಶಾಹ್ರನ್ನು ಈ ಕೇಸನ್ನು ಸಿಬಿಐಗೆ ಸಲ್ಲಿಸುವಂತೆ ಹಲವಾರು ಭಾರಿ ಬೇಡಿಕೆ ಸಲ್ಲಿಸಿದ್ದರು.
ಇವತ್ತು, ಟ್ವಿಟ್ಟರ್ನಲ್ಲಿ ವಿಶಿಷ್ಟವಾದ ಅಭಿಯಾನವನ್ನು ಆಯೋಜಿಸಿದ್ದ ಸುಶಾಂತ್ ಅಭಿಮಾನಿಗಳು, #Candle4SSR ಹ್ಯಾಸ್ ಟ್ಯಾಗ್ ಅನ್ನು ಟ್ರೆಂಡ್ ಮಾಡಿ ದಾಖಲೆಯ ಹತ್ತು ಲಕ್ಷ ಗಡಿದಾಟಿದ್ದಾರೆ. ಇದು ಸುಶಾಂತ್ ಅವರ ಅಭಿಮಾನಿಗಳು ಅವರಿಗೆ ನ್ಯಾಯ ಸಿಗಲ್ಲೆಂದು ಮಾಡಿರುವ ಅಭಿಯಾನವಾಗಿದ್ದು, ಸರ್ಕಾರಕ್ಕೆ ಖಡಕ್ ಸಂದೇಶ ಕಳುಹಿಸಿದ್ದಾರೆ.
ಈ ಅಭಿಯಾನದ ಸೃಷ್ಟಿಕರ್ತರಾದ ಇಷ್ಕರನ್ ಸಿಂಗ್ ಭಂಡಾರಿ ಟ್ವೀ ಟ್ ಮಾಡಿದ್ದು, "ವಿಶ್ವದ ಮೊಟ್ಟಮೊದಲ ಡಿಜಿಟಲ್ ಪ್ರತಿಭಟನೆ ಇದಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನ್ಯಾಯ ದೊರಕಿಸಲು ಸಿಬಿಐ ತನಿಖೆಗೆ ಒತ್ತಾಯಿಸಲು #Candle4SSR ಟ್ರೆಂಡ್ ಮಾಡಲು ನಾವೆಲ್ಲರೂ ನಿರ್ಧರಿಸಿದ್ದೇವೆ, ನಿನ್ನೆ ನನ್ನ ಯುಟ್ಯೂಬ್ ಲೈವ್ ಸಮಯದಲ್ಲಿ ಕೇವಲ 4 ಗಂಟೆಗಳಲ್ಲಿ 1 ಮಿಲಿಯನ್ (10 ಲಕ್ಷ) ಟ್ವೀಟ್ಗಳನ್ನು ದಾಟಿದೆ!" ಎಂದು ಹೇಳಿದ್ದಾರೆ.
The first ever Digital Protest in World - #Candles4SSR
— Ishkaran Singh Bhandari (@ishkarnBHANDARI) July 22, 2020
for CBI investigation to get Justice for Sushant Singh Rajput!
Decided by all of us, during my Youtube Live yesterday has just crossed 1 million (10 lakh) tweets!
In just 4 hours!
सत्यमेव जयते 🙏
ಇನ್ನಾದರೂ ಸರ್ಕಾರ ಈ ಕೇಸ್ ಅನ್ನು ಸಿಬಿಐಗೆ ಸಲ್ಲಿಸುತ್ತದೆಯೋ ಅಥವಾ ಯಾವುದೇ ಬದಲಾವಣೆ ಇರದೆ ಹೀಗಿರುವ ತನಿಖೆಯನ್ನೇ ನಂಬಿ ಕೂರುವುದೋ ನೋಡಬೇಕಿದೆ.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.
ಇದನ್ನೂ ಓದಿ :
English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.