ಭುವನೇಶ್ವರ: ಒಡಿಶಾ ಮೂಲದ ನಟಿ ಅಪ್ಸರಾ ರಾಣಿ ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ್ ವರ್ಮಾರವರ ಮುಂದಿನ ಚಿತ್ರ "ಥ್ರಿಲ್ಲರ್"ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ವರ್ಮಾ ನಟಿಯನ್ನು ಪರಿಚಯಿಸಿದ ಬೆನ್ನಲ್ಲೇ ನಟಿಯ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಲಕ್ಷ ಗಡಿ ದಾಟಿದೆ.
ಇಂದು ಟ್ವಿಟ್ಟರ್ ಮೂಲಕ ಅಪ್ಸರಾ ರಾಣಿಯನ್ನು ಪರಿಚಯಿಸಿರುವ ವರ್ಮಾ, ಅಪ್ಸರಾ ತಮ್ಮ ಮುಂದಿನ ಚಿತ್ರ ಥ್ರಿಲ್ಲರ್ ಚಿತ್ರದ ನಾಯಕಿಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ. ವರ್ಮಾ ಈಗಾಗಲೇ ಕ್ಲೈಮ್ಯಾಕ್ಸ್ ಮತ್ತು ನೇಕೆಡ್ ಎಂಬ ಚಿತ್ರಗಳ ಯಶಸ್ಸಿನ ನಂತರ 'ಥ್ರಿಲ್ಲರ್' ಚಿತ್ರವನ್ನು ಕೈಗೆತ್ತಿದ್ದು, ಕೊರೊನಾ ಲಾಕ್ಡೌನ್ ನಡುವೆ ಚಿತ್ರ ಮಾಡಿ ಬಿಡುಗಡೆಮಾಡುತ್ತಿದ್ದಾರೆ.
ಅಪ್ಸರಾ ರಾಣಿ ಒಡಿಶಾದವರಾಗಿದ್ದು, ಡೆಹ್ರಾಡೂನ್‌ನ ಬೆಟ್ಟಗಳಲ್ಲಿ ಹುಟ್ಟಿ ಬೆಳೆದ ಮತ್ತು ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಅತ್ಯುತ್ತಮ ನರ್ತಕಿ ಮತ್ತು ಇನ್ನೂ ಉತ್ತಮ ನಟರಾಗಿದ್ದಾರೆ ಎಂದು ಅವರು ಹೇಳಿದರು.
Tags:
Entertainment