184 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಕೋಜಿಕೋಡ್-ನಲ್ಲಿ ಅಪಘಾತ - ಸಾವಿನ ಸಂಖ್ಯೆ ಏರಿಕೆ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಶುಕ್ರವಾರ, 184 ಜನರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಕೇರಳದ ಕೋಜಿಕೋಡ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ಸ್ಕಿಡ್ ಆಗಿದೆ. ಈ ಅಫಘಾತದಲ್ಲಿ ವಿಮಾನವು ಎರಡು ಭಾಗಗಳಾಗಿ ಮುರಿದುಹೋಗಿದೆ. ದುಬೈನಿಂದ ಕೇರಳದ ಕೋಜಿಕೋಡ್ ತೆರಳಿದ್ದ ಐಎಕ್ಸ್ -1344 ವಿಮಾನವು ರಾತ್ರಿ 7.45 ರ ಸುಮಾರಿಗೆ ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇ ತಪ್ಪಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.
ವರದಿಗಳ ಪ್ರಕಾರ, ಪೈಲಟ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುಬೈ-ಕೇರಳದ ಕೋಜಿಕೋಡ್ ಏರ್ ಇಂಡಿಯಾ ಫ್ಲೈಟ್ (ಐಎಕ್ಸ್ -1344) ವಿಮಾನದಲ್ಲಿ 10 ಶಿಶುಗಳು ಮತ್ತು ಆರು ಸಿಬ್ಬಂದಿ ಸೇರಿದಂತೆ ಒಟ್ಟು 184 ಪ್ರಯಾಣಿಕರು ಇದ್ದರು, ಇಂದು ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇ ಸ್ಕಿಡ್ ಆಗಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ತಿಳಿಸಿದೆ.
Deeply pained to hear about the horrific accident of the #AirIndia plane in Kozhikode. My deepest condolences to the bereaved families and prayers for the speedy recovery of the injured. pic.twitter.com/oe1Uo42xhR
— Kunal Choudhary (@KunalChoudhary_) August 7, 2020
ಸಾರ್ವಜನಿಕವಾಗಿ ಲಭ್ಯವಾದ ಘಟನಾವಳಿಯ ಮೊದಲ ದೃಶ್ಯಗಳಲ್ಲಿ ವಿಮಾನವು ಎರಡು ತುಂಡುಗಳಾಗಿ ಒಡೆದಿದ್ದು, ಅದರ ಅವಶೇಷಗಳು ರನ್ವೇ ಮತ್ತು ಅದರಾಚೆಗೆ ಹರಡಿಕೊಂಡಿವೆ.
ಕೇರಳದ ಕೋಜಿಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 180 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇಯಿಂದ ಸ್ಕಿಡ್ ಆದ ನಂತರ ಪೈಲಟ್ ಮತ್ತು ಹದಿಮೂರು ಪ್ರಯಾಣಿಕರು ಸೇರಿ ಒಟ್ಟು ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ. ಕನಿಷ್ಠ 24 ಆಂಬುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಟೆಂಡರ್‌ಗಳನ್ನು ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ :
English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |