"ಮದುವೆ ಸುದ್ದಿ ಶುದ್ಧ ಸುಳ್ಳು" ಫೇಕ್ ನ್ಯೂಸ್ ಬಗ್ಗೆ "ಗಟ್ಟಿಮೇಳ" ಅನ್ವಿತಾ ಸಾಗರ್ ಖಡಕ್ ವಾರ್ನಿಂಗ್
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಇತ್ತೀಚೆಗೆ ಹಲವಾರು ವೆಬ್ ನ್ಯೂಸ್ ಮಾಧ್ಯಮಗಳು ಗಟ್ಟಿಮೇಳ ಖ್ಯಾತಿಯ ಅನ್ವಿತಾ ಸಾಗರ್ ಮದುವೆಯಾಗುವ ವಿಷಯದ ಬಗ್ಗೆ ನ್ಯೂಸ್ ಬಿತ್ತರಿಸುತ್ತಿದ್ದು, ಇದರ ಬಗ್ಗೆ ಅನ್ವಿತಾ ಸಾಗರ್ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕುವ ಮೂಲಕ ಖಡಕ್ ವಾರ್ನಿಂಗ್ ನೀಡಿದ್ದಾರೆ.
"ಹಲವಾರು ದಿನಗಳಿಂದ ಕೆಲವು ಪೇಜ್-ಗಳು ನನ್ನ ಮದುವೆಯ ಬಗ್ಗೆ ಪೋಸ್ಟ್ ಮಾಡುತ್ತಿದ್ದು ನನ್ನ ಗಮನಕ್ಕೆ ಬಂದಿದೆ. ನಾನು ಈ ಬಗ್ಗೆ ಎಂದೂ ಎಲ್ಲೂ ಹೇಳಿಕೊಂಡಿಲ್ಲ..ನನ್ನ ಬಳಿ ಕೇಳದೇ ನನ್ನ ಮದುವೆ ಬಗ್ಗೆ ಬರೆಯುತ್ತಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳುವೆ" ಎಂದು ಬರೆದು ಕೊಂಡಿದ್ದಾರೆ.
ನಿಮ್ಮ ಪತ್ರಿಕೆ ಮತ್ತು ಪೇಜ್ನ ಟಿಆರ್ಪಿ ಗೋಸ್ಕರ ನನ್ನ ಮತ್ತು ನನ್ನ ಸೀರಿಯಲ್ ಹೆಸರನ್ನು ಕೆಡಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನನ್ನ ಮದುವೆ ಬಗ್ಗೆ ಹರಡಿರುವ ಎಲ್ಲಾ ವರದಿಗಳು ಶುಧ್ದ ಸುಳ್ಳು ಎಂದು ಬರೆದುಕೊಂಡಿದ್ದಾರೆ.
ಗಟ್ಟಿಮೇಳ ಧಾರಾವಾಹಿಯ ಮೂಲಕ ಕನ್ನಡ ನಾಡಿನಾದ್ಯಾಂತ ಮನೆಮಾತಾಗಿರುವ ಅನ್ವಿತಾ ಸಾಗರ್, ಹಲವಾರು ಕನ್ನಡ ಮತ್ತು ತುಳು ಚಿತ್ರಗಳಲ್ಲೂ ನಟಿಸಿದ್ದಾರೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |