ದುಡ್ಡು ಕೊಟ್ಟು ಹಸುಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ ಅಮೇರಿಕನ್ನರು - ಯಾಕೆ ಗೊತ್ತಾ??

og:image

ದುಡ್ಡು ಕೊಟ್ಟು ಹಸುಗಳನ್ನ ಅಪ್ಪಿಕೊಳ್ಳುತ್ತಿದ್ದಾರೆ ಅಮೇರಿಕನ್ನರು. ಕರೋನಾ ವೈರಸ್‌ನ ಎರಡನೇ ಅಲೆಯಿಂದಾಗಿ ದೇಶದ ಮತ್ತು ಪ್ರಪಂಚದ ಸ್ಥಿತಿ ಅಯೋಮಯವಾಗಿದೆ. ಜನರು ನಿರಂತರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನರು ಈ ಆತಂಕ ಮತ್ತು ಖಿನ್ನತೆಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಹೋರಾಡುತ್ತಿದ್ದರೂ, ಅಮೆರಿಕದಲ್ಲಿ ಇದಕ್ಕಾಗಿ ವಿಶಿಷ್ಟ ತಂತ್ರಗಳನ್ನು ರೂಪಿಸಲಾಗಿದೆ. ನೀವು ನಂಬ್ತಿರೊ ಇಲ್ವೊ, ಇಲ್ಲಿ ಮಾನಸಿಕ ಶಾಂತಿ ಪಡೆಯಲು ಹಸುವನ್ನು ತಬ್ಬಿಕೊಳ್ಳಲಾಗುತ್ತಿದೆ! ಹೌದು ಭಾರತದಲ್ಲಿ ಇದು ಸಾಮಾನ್ಯವಾದರೂ ಅಮೇರಿಕದಲ್ಲಿ ಇದು ಜನಪ್ರಿಯವಾಗುತ್ತಿದೆ.ಇನ್ನೂ ಅಚ್ಚರಿ ಸಂಗತಿಯೆಂದರೆ, ಕರೋನಾ ಯುಗದಲ್ಲಿ ಅಮೆರಿಕದಲ್ಲಿ ಹಸುವನ್ನು ಅಪ್ಪಿಕೊಳ್ಳಲು ಜನರು ಹಣವನ್ನು ಕೂಡ ಪಾವತಿಸುತ್ತಿದ್ದಾರೆ! ಕಾಂಗ್ರೆಸ್ ಮುಖಂಡ ಮಿಲಿಂದ್ ಡಿಯೋರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಸಿಎನ್ಬಿಸಿ ವಿಡಿಯೋವೊಂದರಲ್ಲಿ ಯುಎಸ್ನಲ್ಲಿ ಜನರು ಹಸುವನ್ನು ತಬ್ಬಿಕೊಳ್ಳಲು ಒಂದು ಗಂಟೆಗೆ $ 200 ವರೆಗೆ ಪಾವತಿಸುತ್ತಿದ್ದಾರೆ! 

ಭಾರತದಲ್ಲಿ 3000 ವರ್ಷಗಳಿಂದ ಹಸುಗಳನ್ನು ಪೂಜಿಸಲಾಗುತ್ತಿದೆ, ಮನೆಯ ಸದಸ್ಯರಂತೆ ನೋಡಿಕೊಳ್ಳಲಾಗುತ್ತಿದೆ, ಚಿಕ್ಕಮಕ್ಕಳಿಂದ ಹಿಡಿದು ವೃದ್ದರವರೆಗೆ ಎಲ್ಲರೂ ಹಸುಗಳ ಮೈದಡವಿ ಆಲಂಗಿಸುವುದು ಸಾಮಾನ್ಯ. ಆದರೆ ಅಮೆರಿಕೆಯಂಥ ಮುಂದುವರೆದ ದೇಶದಲ್ಲಿ ತೀರ ಇದು ಅಪರೂಪದ ಬೆಳವಣಿಗೆ. 

ಇನ್ನು ಈ ವಿಡಿಯೋದಲ್ಲಿ ಅಮೇರಿಕನ್ನರು ಹಸುಗಳನ್ನ ಅಪ್ಪಿಕೊಂಡು ಸಮಯ ಕಳೆಯುವುದನ್ನ ನೋಡಬಹುದು. 

 
Previous Post Next Post