ಬಿಬಿಎಂಪಿ ಬೆಡ್ ಹಗರಣದ ಅರೋಪಿಗೆ ಕಾಂಗ್ರೆಸ್ ಸಂಪರ್ಕ?
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ಬೆಡ್ ಬ್ಲಾಕಿಂಗ್ ದಂಧೆಯನ್ನು ಬಟಾಬಯಲು ಮಾಡಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ತೇಜಸ್ವಿ ಸೂರ್ಯ, ಬಿಬಿಎಂಪಿ ಬೆಡ್ ಸ್ಕ್ಯಾಮ್ ಬಯಲಿಗೆಳೆದ ನಂತರ ನೇತ್ರ ಎಂಬವರನ್ನು ಅರೆಸ್ಟ್ ಮಾಡಲಾಗಿದೆ.
ಅರೆಸ್ಟ್ ಆದ ಕೂಡಲೇ ನೇತ್ರ ಈ ಹಿಂದೆ ಕಾಂಗ್ರೆಸ್ ಮುಖಂಡರ ಜೊತೆ ನಿಂತು ತೆಗೆಸಿಕೊಂಡಿರುವ ಹಲವಾರು ಚಿತ್ರಗಳು ಬಯಲಿಗೆ ಬಂದಿವೆ. ಕಾಂಗ್ರೆಸ್ ಹಮ್ಮಿಕೊಳ್ಳುತ್ತಿದ್ದ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದ ನೇತ್ರಾ, ಪ್ರಥಮ ಸಾಲಿನಲ್ಲಿ ನಿಲ್ಲುತ್ತಿದ್ದರು. ಕಾಂಗ್ರೆಸ್ ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ಜೊತೆ ನೇತ್ರಾ ಗುರುತಿಸಿಕೊಂಡಿದ್ದು, ಇದೀಗ ಈ ಹಗರಣದ ಬಗ್ಗೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿರುಅ ಏಜೆಂಟರ ಹೆಡೆಮುರಿ ಕಟ್ಟಿರುವ ಪೊಲೀಸರು, ಈ ಹಗರಣದ ಅಸಲಿ ಕಿಂಗ್ ಪಿನ್ ಗಳ ಮಾಹಿತಿ ಕಲೆಹಾಕುತ್ತಿದ್ದಾರೆ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |