‘ಮೋದಿ ಹೆಸರು ಕೆಡಿಸಲು’ ಟೂಲ್ ಕಿಟ್ - ಬಯಲಾಯ್ತು ಕಾಂಗ್ರೆಸ್ ಹುನ್ನಾರ ಎಂದ ಬಿಜೆಪಿ

og:image
ಕಾಂಗ್ರೆಸ್ ಪಕ್ಷವು ಕರೋನವೈರಸ್ ಬಿಕ್ಕಟ್ಟನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಮಂಗಳವಾರ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ಕಮ್ಮಿ ಮಾಡಲು ಮತ್ತು  ಕೋವಿಡ್ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸುವ ಬಗ್ಗೆ ಜನರಲ್ಲಿ ಆಕ್ರೋಶ ಸ್ರಷ್ಟಿ ಮಾಡಲೆಂದೇ ವಿನ್ಯಾಸಗೊಳಿಸಲಾದ "ಕಾಂಗ್ರೆಸ್ ಟೂಲ್ ಕಿಟ್" ಬಿಜೆಪಿ ಬಳಿ ಇದೆ ಎಂದು ಹೇಳಿಕೊಂಡಿದೆ. 

ಹಲವಾರು ಬಿಜೆಪಿ ಮುಖಂಡರು ಟ್ವೀಟ್ ಮಾಡಿರುವ "ಕಾಂಗ್ರೆಸ್ ಟೂಲ್ ಕಿಟ್" ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಈ ವೈರಲ್ ಆದ  "ಟೂಲ್ ಕಿಟ್" ಕಾಂಗ್ರೆಸ್ ಕಾರ್ಯಕರ್ತರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕೆ ಮಾಡಲು ವಿವರಗಳನ್ನೊಂದಿದೆ. 

ಭಾರತದ ಎರಡನೇ ಅಲೆಯನ್ನು,  "ಇಂಡಿಯನ್ ಸ್ಟ್ರೈನ್" ಮತ್ತು "ಮೋದಿ ಸ್ಟ್ರೈನ್" ನಂತಹ 
ಪದಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಬಳಸುವಂತೆ ಮತ್ತು "ಸೂಪರ್ ಸ್ಪ್ರೆಡರ್ ಕುಂಭ" ಎಂಬ ಪದವನ್ನು ಬಳಸುವಂತೆ ಪ್ರೇರೇಪಿಸುತ್ತದೆ. 

ಕಾಂಗ್ರೆಸ್ ಚಿಹ್ನೆಯನ್ನು ಹೊಂದಿರುವ ವೈರಲ್ ಟೂಲ್ ಕಿಟ್, ಪಕ್ಷದ ಕಾರ್ಯಕರ್ತರನ್ನು "ಅಂತ್ಯಕ್ರಿಯೆಗಳು ಮತ್ತು ಮೃತ ದೇಹಗಳ ನಾಟಕೀಯ ಚಿತ್ರಗಳನ್ನು" ಬಳಸುವಂತೆ ಕೇಳಿಕೊಳ್ಳುತ್ತದೆ,  "ವಿದೇಶಿ ಪತ್ರಕರ್ತರು ಮತ್ತು ಭಾರತ ಮೂಲದ ವಿದೇಶಿ  ಬರಹಗಾರರೊಂದಿಗೆ ಸಂಪರ್ಕ ಸಾಧಿಸಿ  ಅಂತ್ಯಕ್ರಿಯೆಗಳು ಮತ್ತು ಮೃತ ದೇಹಗಳ ನಾಟಕೀಯ ಚಿತ್ರಗಳನ್ನು ಬಳಸಿ, ವಿದೇಶಿ ಪತ್ರಿಕೆಗಳಲ್ಲಿ ನರೇಂದ್ರ ಮೋದಿಯ ವಿರುದ್ದ ಬರಹಗಳು ಬರುವಂತೆ  ಮಾಡಲು ಟೂಲ್ ಕಿಟ್ ನಿರ್ದೇಶಿಸಿದೆ.  


"ಬಿಜೆಪಿಯ ಹಿಂದೂ ರಾಜಕಾರಣವೇ ಇಷ್ಟು ಸಂಕಟವನ್ನು ಉಂಟುಮಾಡುತ್ತಿದ್ದಾರೆ" ಎಂದು ಜನರಿಗೆ ನೆನಪಿಸುವುದನ್ನು ಮುಂದುವರೆಸಲು 'ಸೂಪರ್ ಸ್ಪ್ರೆಡರ್ ಕುಂಭ' ಎಂಬ ಪದವನ್ನು ಬಳಸುವುದು ಬಹಳ ಮುಖ್ಯ ಎಂದು ಟೂಲ್ ಕಿಟ್ ನಿರ್ದೇಶಿಸಿದೆ.  ಬಿಜೆಪಿಯವರು ಈದ್ ಮತ್ತು ಕುಂಭಮೇಳವನ್ನು ತುಲನೆ ಮಾಡುವ ಸಾಧ್ಯತೆಯಿರುವುದರಿಂದ, ಯಾವುದೇ ಕಾರಣಕ್ಕೆ ಈದ್ ಹಬ್ಬಕ್ಕಾಗಿ ಜನರು ಸೇರುತ್ತಿರುವುದನ್ನು ಎಲ್ಲೂ ಉಲ್ಲೇಖಮಾಡದಂತೆ ಕೂಡಾ ನಿರ್ದೇಶನ ನೀಡಿದೆ. 

‘ಮೋದಿ ಹೆಸರು ಕೆಡಿಸಲು’ ಟೂಲ್ ಕಿಟ್ - ಬಯಲಾಯ್ತು ಕಾಂಗ್ರೆಸ್ ಹುನ್ನಾರ ಎಂದ ಬಿಜೆಪಿ

ಟೂಲ್ ಕಿಟ್, ಕಾಂಗ್ರೆಸ್ ಸಂಸ್ಥೆಗಳ ಕೆಲಸವನ್ನು ಎಲ್ಲಾ ಕಡೆ ಪಸರಿಸುವ ಮತ್ತು ಸಹಾಯವನ್ನು ಕೋರಿದ ವ್ಯಕ್ತಿಯು "ಭಾರತೀಯ ಯುವ ಕಾಂಗ್ರೆಸ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದಾಗ" ಮಾತ್ರ ಸಹಾಯವನ್ನು ಮಾಡುವ ಬಗ್ಗೆ ಕೂಡಾ ನಿರ್ದೇಶನ ನೀಡಿದೆ.  ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಗ್ರಹಣೆ ಮತ್ತು ಇತರ ಸೌಲಭ್ಯಗಳ ಬಗ್ಗೆಯೂ ಟೂಲ್‌ಕಿಟ್‌ನಲ್ಲಿ ಮಾತನಾಡಲಾಗಿದೆ.

ಟೂಲ್ ಕಿಟ್ ಪ್ರಕಾರ: "ಸ್ನೇಹಪರ ಆಸ್ಪತ್ರೆಗಳಲ್ಲಿ, ಕೆಲವು ಹಾಸಿಗೆಗಳು ಮತ್ತು ಇತರ ಸೌಲಭ್ಯಗಳನ್ನು ಬ್ಲಾಕ್ ಮಾಡಿಟ್ಟು, ನಮ್ಮ ಕೋರಿಕೆಯ ಮೇರೆಗೆ ಮಾತ್ರ ಬಿಡುಗಡೆ ಮಾಡಿ. ಪ್ರತಿ ವಿನಂತಿಯನ್ನು ಟ್ರ್ಯಾಕ್ ಮಾಡಿ ... ಮತ್ತೆ ಸಾಮಾಜಿಕ ಮಾಧ್ಯಮ ಪೋಸ್ಟ್ ಕಳುಹಿಸುವಂತೆ ವಿನಂತಿಸಿ, ಈ ಬಾರಿ ಕಾಂಗ್ರೆಸ್ ಹ್ಯಾಂಡಲ್ ಮತ್ತು ಅದರ ಪದಾಧಿಕಾರಿಗಳನ್ನು ಟ್ಯಾಗ್ ಮಾಡುವ ಮೂಲಕ. ಒಬ್ಬ ವ್ಯಕ್ತಿಯು ಐವೈಸಿ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದರೆ ಮಾತ್ರ ಸಹಾಯ ಮಾಡಲು ಪ್ರತಿಕ್ರಿಯಿಸಿ [sic]. "

ಆದರೆ, ಪಕ್ಷವು ತನ್ನ ಕಾರ್ಯಕರ್ತರಿಗೆ ಅಂತಹ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂದು ಕಾಂಗ್ರೆಸ್ ನಿರಾಕರಿಸಿದೆ. ಬಿಜೆಪಿ ನಕಲಿ ಟೂಲ್ಕಿಟ್ ಪ್ರಸಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಾಜೀವ್ ಗೌಡ ಟ್ವೀಟ್ ಮಾಡಿದ್ದಾರೆ. ಪಕ್ಷವು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಸಂಬಿತ್ ಪತ್ರಾ ವಿರುದ್ಧ ಖೋಟಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುತ್ತಿದೆ ಎಂದು ಅವರು ಹೇಳಿದರು.

English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post