ಅಗರ್ತಲಾ: ವಿವಾಹೇತರ ಸಂಬಂಧದ ಆರೋಪದಲ್ಲಿ 23 ವರ್ಷದ ಯುವತಿಯೊಬ್ಬಳಿಗೆ ಚಿತ್ರಹಿಂಸೆ ನೀಡಿ ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಕ್ಷಿಣ ತ್ರಿಪುರದ ಸಬ್ರೂಮ್‌ನ ಬೆಟಗಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಈ ಘಟನೆಯ ಮಾಧ್ಯಮ ವರದಿಗಳನ್ನು ತ್ರಿಪುರ ಹೈಕೋರ್ಟ್ ಕೈಗೆತ್ತಿಕೊಂಡ ನಂತರ, ಆತ್ಮಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಶುಕ್ರವಾರ ನಾಲ್ಕು ಮಹಿಳೆಯರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಎಸ್‌ಪಿ (ದಕ್ಷಿಣ ತ್ರಿಪುರ) ಡಾ.ಕುಲ್ವಂತ್ ಸಿಂಗ್ ಮಾತನಾಡಿ, ಪೊಲೀಸರು ಈಗಾಗಲೇ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೆಲವು ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿದ್ದಾರೆ, ಅದರ ಆಧಾರದ ಮೇಲೆ ಬಂಧನಗಳನ್ನು ಮಾಡಲಾಗಿದೆ.
ವರದಿಗಳ ಪ್ರಕಾರ, ಭಾನುವಾರ ಸ್ಥಳೀಯ ಮಾರುಕಟ್ಟೆಯಲ್ಲಿ ನಡೆದ ಪಂಚಾಯ್ತಿ ಸಭೆಯಲ್ಲಿ ಮಹಿಳೆಯ ವಿವಾಹೇತರ ಸಂಬಂಧದ ಅಶ್ಲೀಲ ವಿಡಿಯೋವನ್ನು ದೊಡ್ಡ ಪರದೆಯಲ್ಲಿ ಪ್ರದರ್ಶಿಸಿಲಾಗಿತ್ತು, ವಿಡಿಯೋ ನೋಡಿದ ನಂತರ ಸ್ಥಳೀಯ ಜನರು ಮಂಗಳವಾರ ಆಕೆಯ ಮನೆಯ ಮುಂದೆ ಜಮಾಯಿಸಿ, ಶೂಗಳಿಂದ ಹೂಮಾಲೆ ಹಾಕಿ, ಕೂದಲನ್ನು ಟ್ರಿಮ್ ಮಾಡಿ ಹಗ್ಗದಿಂದ ಕಟ್ಟಿ ಹಳ್ಳಿಗೆ ಅಡ್ಡಲಾಗಿ ಬೆತ್ತಲೆ ಮೆರವಣಿಗೆ ನಡೆಸಿದರು. ಇದರಿಂದ ನೊಂದ ಮಹಿಳೆ ನಂತರ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು.
ಮನೆಗೆ ಮರಳಿದ ನಂತರ ಮಹಿಳೇ ವಿಷ ಸೇವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಹಿಳೆಯ ಕುಟುಂಬವು ತನ್ನ ನೆರೆಹೊರೆಯವರ ವಿರುದ್ಧ ದೂರು ನೀಡಿದ್ದು, ಆಕೆಯ ಆತ್ಮಹತ್ಯೆಗೆ ನೆರೆಯೊರೆಯವರೇ ಕಾರಣ ಎಂದು ಆರೋಪಿಸಿದರು.
ಮಾಧ್ಯಮ ವರದಿಗಳ ಆಧಾರದ ಮೇಲೆ, ಮುಖ್ಯ ನ್ಯಾಯಮೂರ್ತಿ ಎ.ಎ.ಕುರೇಶಿ ಮತ್ತು ನ್ಯಾಯಮೂರ್ತಿ ಎಸ್.ತಲಪಾತ್ರರ ವಿಭಾಗೀಯ ಪೀಠವು ಈ ಘಟನೆಯ ಬಗ್ಗೆ ಸುಮೊ ಮೋಟು ವಿಚಾರಣೆಯನ್ನು ಸ್ಥಾಪಿಸಿತು ಮತ್ತು ಘಟನೆಯ ಕುರಿತು ಪೂರ್ಣ ವರದಿಯನ್ನು ಕೋರಿ ರಾಜ್ಯ ಮುಖ್ಯ ಕಾರ್ಯದರ್ಶಿ ಡಿಜಿಪಿ, ಎಸ್ಪಿ (ದಕ್ಷಿಣ ತ್ರಿಪುರ) ಮತ್ತು ಎಸ್‌ಡಿಪಿಒ (ಸಬ್ರೂಮ್) ಗೆ ನೋಟಿಸ್ ನೀಡಿತು.
ಮೃತ ವ್ಯಕ್ತಿಯ ಕುಟುಂಬ ಸದಸ್ಯರ ಹೇಳಿಕೆಗಳೊಂದಿಗೆ ಸುದ್ದಿ ಲೇಖನಗಳಲ್ಲಿ ಉಲ್ಲೇಖಿಸಿರುವ ವಿಡಿಯೋ ತುಣುಕನ್ನು ಸಲ್ಲಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. "ಆಪಾದಿತ ಘಟನೆಯ ಯಾವುದೇ ಛಾಯಾಚಿತ್ರಗಳು ಅಥವಾ ವೀಡಿಯೊ ತುಣುಕನ್ನು ಲಭ್ಯವಿದ್ದರೆ, ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು" ಎಂದು ಅದು ಹೇಳಿದೆ.
Tags:
India