ಬರೋಬ್ಬರಿ ನಲವತ್ತು ಲಕ್ಷ ಜನರಿಂದ ಚಾರ್ಲೀ ಚಿತ್ರದ ಟೀಸರ್ ವೀಕ್ಷಣೆ.

og:image

ನಾಯಕನು ತನ್ನ ನೆಗೆಟಿವ್ ಲೈಫ್ ಸ್ಟೈಲ್ ಮತ್ತು ಏಕಾಂಗಿ ಜೀವನಶೈಲಿರಲ್ಲಿ ಸಿಲುಕಿಕೊಂಡಿರುತ್ತಾನೆ. ಅವನಿಗೆ ಅವನದೇ  ಒಂಟಿತನದ ಜೀವನ ನೆಮ್ಮದಿ ಎಂದೆನಿಸಿ ಅದರಲ್ಲೇ ಜೀವನ ಕಳೆಯುತ್ತಾನೆ. ಇದೇ ಸಮಯದಲ್ಲಿ  ಚಾರ್ಲಿ ಎಂಬ ನಾಯಿ ಮರಿ ಅವನ ಜೀವನದಲ್ಲಿ ಎಂಟ್ರಿಯಾಗುತ್ತದೆ.  ಇದರಿಂದ ಅವನ ಜೀವನದಲ್ಲಿ ಹೊಸ ಬದಲಾವಣೆ ಉಂಟಾಗುತ್ತದೆ. 

ಇಂತಹ ಅದ್ಭುತವಾದ ಕಥಾ ಹಂದರ ಹೊಂದಿರುವ ಚಾರ್ಲಿ ಚಿತ್ರದ ಟೀಸರ್ ವಿಭಿನ್ನ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ  ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಒಂದೇ ದಿನದಲ್ಲಿ ಬರೋಬ್ಬರಿ ನಲವತ್ತು ಲಕ್ಷಗಳಿಗಿಂತಲೂ ಅಧಿಕ ಜನರು ಈ ಟೀಸರ್ ನೋಡಿ, ರಕ್ಷಿತ್ ಶೆಟ್ಟಿಯವರ ಈ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ. 

Previous Post Next Post