ಚೀನಾದ ಪೂರ್ವ ಜಿಯಾಂಗ್ಸು ಪ್ರಾಂತ್ಯದಿಂದ ಎಚ್ 10 ಎನ್ 3 ಹಕ್ಕಿ ಜ್ವರದ ಮಾನವ ಸೋಂಕಿನ ಮೊದಲ ಪ್ರಕರಣವನ್ನು ಚೀನಾ ವರದಿ ಮಾಡಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಮಂಗಳವಾರ ತಿಳಿಸಿದೆ.
41 ವರ್ಷದ ರೋಗಿಯು ಏಪ್ರಿಲ್ 23 ರಂದು ಜ್ವರ ಮತ್ತು ಇತರ ರೋಗಲಕ್ಷಣಗಳನ್ನು ತೋರಿಸಲಾರಂಭಿಸಿದ್ದು ಮತ್ತು ಏಪ್ರಿಲ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದನು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಎನ್‌ಎಚ್‌ಸಿಯನ್ನು ಉಲ್ಲೇಖಿಸಿದೆ.
ಮೇ 28 ರಂದು ಆತನಿಗೆ ಎಚ್ 10 ಎನ್ 3 ಏವಿಯನ್ ಇನ್ಫ್ಲುಯೆನ್ಸ ವೈರಸ್ ಇರುವುದು ಪತ್ತೆಯಾಗಿದೆ, ಆದರೆ ಆ ವ್ಯಕ್ತಿ ಹೇಗೆ ವೈರಸ್ ಸೋಂಕಿಗೆ ಒಳಗಾಗಿದ್ದಾನೆ ಎಂಬ ಬಗ್ಗೆ ವಿವರಗಳನ್ನು ನೀಡಿಲ್ಲ.