ಜನಸೇವೆಯಲ್ಲಿ ಸೂಪರ್ ಸ್ಟಾರ್ ನಮ್ಮ ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

Admin
og:image

ಬಾಲಿವುಡ್ ನಟ ಸೋನು ಸೂದ್ ಹಿಂದಿ, ತಮಿಳು ತೆಲುಗು ಚಿತ್ರಗಳಲ್ಲಿ ಖಡಕ್ ವಿಲನ್ ಆಗಿ ಫೇಮಸ್ ಆಗಿದ್ದರು. ಅಷ್ಟೇ ಅಲ್ಲ.. ಎಲ್ಲಾ ಹೀರೋಗಳು ಸೋನು ಸೂದ್ ನನ್ನ ಬಡಿಯುವಾಗ ಸೀಟಿ  ಹೊಡೆದು ಆನಂದಿಸಿದ್ದೆವು. 

ಆದರೆ, ಕಳೆದ ವರ್ಷ ಭಾರತಕ್ಕೆ ಕೊರೋನಾ ಕಾಲಿಟ್ಟ ಸ್ವಲ್ಪ ಸಮಯದಲ್ಲೇ ಈ ವಿಲನ್ ಭಾರತದ ಪಾಲಿಗೆ ಹೀರೊ ಆಗಿಬಿಟ್ಟರು. ಕೊರೋನಾದಿಂದ ದಿಕ್ಕು ತಪ್ಪಿದ್ದ ಜನರ ಬದುಕಿನಲ್ಲಿ ಈ ವಿಲನ್ ಸಹಾಯ ಮಾಡುವ ಹೀರೊ ಆಗಿಯೇ ಬಿಟ್ಟರು. 

ಇದು ಬಾಲಿವುಡ್ ಕತೆಯಾದರೆ, ಇನ್ನು ನಮ್ಮ ಕರ್ನಾಟಕದ ತುಳುನಾಡಿನಲ್ಲೇ ತೆರೆಯ ಮೇಲೆ ಹೀರೊ ಆಗಿ ಮಿಂಚುತ್ತಿರುವ ನಟನೊಬ್ಬ, ನಿಜ ಜೀವನದಲ್ಲೂ ಹೀರೊ ಆಗೋ ಮೂಲಕ, ಜನರಲ್ಲಿ ತಾವು ದುಡ್ಡು ಕೊಟ್ಟು ಚಿತ್ರ ನೋಡಿ ಇವರನ್ನು ಹೀರೊ ಮಾಡಿದ್ದು ಸಾರ್ಥಕವಾಯಿತು ಎಂದು ಹೆಮ್ಮೆ ಪಡುವಂತೆ ಮಾಡಿದ್ದಾರೆ. 

ಅವರೇ.. ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ. ಅಂದ ಹಾಗೆ, ರೂಪೇಶ್ ಶೆಟ್ಟಿ ಇದನ್ನೆಲ್ಲಾ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಎಂದು ಅನಿಸಿದರೆ ನಿಮ್ಮ ಊಹೆ ತಪ್ಪು.  ಯಾಕೆಂದರೆ ಪ್ರಚಾರ ಪಡೆದು ಹೆಸರು ಮಾಡುವ ಹಂತ ಬಿಟ್ಟು ಈಗ ತುಳುನಾಡಿನ ಸೂಪರ್ ಸ್ಟಾರ್ ಆಗಿಬಿಟ್ಟಿರುವ ರೂಪೇಶ್, ಜನರ ಸೇವೆ ನಿಸ್ವಾರ್ಥ ಮನಸ್ಸಿನಿಂದ ಮಾಡ್ತಾ ಇದ್ದಾರೆ. 

ಗಿರ್ಗಿಟ್ ಚಿತ್ರದ ಸೂಪರ್ ಡ್ಯೂಪರ್ ಸಕ್ಸೆಸ್ ನಂತರ ರೂಪೇಶ್ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಅವರ ಮುಂದಿನ ಚಿತ್ರ ಗಮ್ಜಾಲ್ ಕೂಡಾ ಸೂಪರ್ ಹಿಟ್ ಆಗಿತ್ತು. ಯಶಸ್ಸಿನ ಅಲೆಯಲ್ಲಿ ಮೈಮರೆತು ತಮ್ಮದೇ ಲೋಕದಲ್ಲಿ ಇರಬೇಕಾದ ರೂಪೇಶ್, ತಮ್ಮನ್ನು ಸ್ಟಾರ್ ಮಾಡಿರುವ ಜನರ ಸೇವೆ ಮಾಡುತ್ತಿರುವುದು ತುಂಬಾ ಖುಷಿಯ ವಿಷಯ. 

ಬಾಲಿವುಡ್ ನಟ ಸೋನು ಸೂದ್ ಹೇಗೆ ಜನರ ಸೇವೆ ಮಾಡಿ ಅವರ ಮನಸಲ್ಲಿ ಒಂದು ಪರ್ಮನೆಂಟ್ ಸ್ಥಾನ ಪಡೆದಿದ್ದಾರೋ ಹಾಗೆ ರೂಪೇಶ್ ಕೂಡಾ ಜನರ ಮನಸಲ್ಲಿ ಯಾವತ್ತೂ ನೆನಪಲ್ಲಿ ಇದ್ದು, ಅವರ ಎಲ್ಲಾ ಚಿತ್ರಗಳಿಗೆ ಬೆಂಬಲಿಸಿ ಅವರನ್ನು ಇಂತಹ ಹಲವಾರು ಸೇವೆ ಮಾಡಲು ಅವರಿಗೂ ಸ್ಫೂರ್ತಿಯಾಗಲಿ. 

ಈ ನ್ಯೂಸ್ ಬಗ್ಗೆ ನಮ್ಮ ವರದಿ ಈ ವಿಡಿಯೋದಲ್ಲಿ ನೋಡಿ. ನಮ್ಮ ಯುಟ್ಯೂಬ್ ಪೇಜ್ ಈಗಲೇ ಲೈಕ್ ಮಾಡಿ. 

#buttons=(Accept !) #days=(20)

Our website uses cookies to enhance your experience. Learn More
Accept !