"ಕರ್ನಾಟಕಕ್ಕೆ ಸೇವೆ ಸಲ್ಲಿಸಲು ಸಿಕ್ಕಿರೋದೇ ಒಂದು ಗೌರವ" ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ.

og:image

ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಬಿ.ಎಸ್.ಯಡಿಯುರಪ್ಪ, ರಾಜ್ಯಕ್ಕೆ ಸೇವೆ ಸಲ್ಲಿಸಲು ನನಗೆ ಸಿಕ್ಕಿರಿವ ಅವಕಾಶವೇ ಗೌರವ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಹೇಳಿದರು.

"ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದು ಗೌರವವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಅವರಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ರಾಜ್ಯದ ಜನರಿಗೆ ನಾನು ವಿನಮ್ರ ಮತ್ತು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ" ಎಂದು ಹೇಳಿದರು. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಎಪ್ಪತ್ತೆಂಟು ವರ್ಷದ ಯಡಿಯುರಪ್ಪ ಸೋಮವಾರ ಬೆಂಗಳೂರಿನಲ್ಲಿ ತಮ್ಮ ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುವ ಸಮಾರಂಭದಲ್ಲಿ ರಾಜೀನಾಮೆ ಘೋಷಿಸಿದರು. ನಂತರ ಅವರು ರಾಜ್ಯಪಾಲ ತವಾರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ರಾಜ್ ಭವನಕ್ಕೆ ಹೋದರು. 

ರಾಜೀನಾಮೆ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಮಾನ್ಯ ಯಡಿಯೂರಪ್ಪನವರು ತನಗೆ ರಾಜೀನಾಮೆ ಸಲ್ಲಿಸಲು ಯಾವುದೇ ಒತ್ತಡವಿಲ್ಲ. ತಾನು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾಗಿ ಎಂದು ಸ್ಪಷ್ಟ ಪಡಿಸಿದರು. ೭೫ ವರ್ಷದ ನಂತರ ಅಧಿಕಾರದಲ್ಲಿರಲು ಕೇಂದ್ರದ ನಿಯಮದಲ್ಲಿಲ್ಲದಿದ್ದರು ತನಗೆ ೨ ವರ್ಷ ಹೆಚ್ಚಿನ ಅವಕಾಶ ನೀಡಿದ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.
Previous Post Next Post