ಭಾರತೀಯ ವೀಸಾ ಹೊಂದಿರುವ ಪಾಸ್‌ಪೋರ್ಟ್‌ಗಳನ್ನು ಕದಿಯುತ್ತಿರುವ ಪಾಕಿಸ್ತಾನದ ಐಎಸ್‌ಐ

og:image

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಂತರ, ಅದರ ನಾಗರಿಕರು ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಅದರ ಜೊತೆಗೆ ಕಾಬೂಲ್‌ನಿಂದ ಭಾರತೀಯ ವೀಸಾ ಹೊಂದಿರುವ ಹಲವು ಅಫ್ಘಾನ್ ಪಾಸ್‌ಪೋರ್ಟ್‌ಗಳು ಕಳ್ಳತನವಾಗಿರುವ ಮಾಹಿತಿ  ಬಂದಿದೆ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ  ಇದರ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ.

ಕಾಬೂಲ್ ನಲ್ಲಿ, ಪಾಕಿಸ್ತಾನದ ಆದೇಶದ ಮೇರೆಗೆ, ಐಎಸ್ಐ ಟ್ರಾವೆಲ್ ಏಜೆಂಟ್ ಮೇಲೆ ದಾಳಿ ಮಾಡಿ ಭಾರತೀಯ ವೀಸಾಗಳಿರುವ ಹಲವಾರು ಪಾಸ್ ಪೋರ್ಟ್ ಗಳನ್ನು ಕದ್ದಿದೆ. ಕದ್ದ ಭಾರತೀಯ ವೀಸಾಗಳೊಂದಿಗೆ ಪಾಸ್‌ಪೋರ್ಟ್‌ಗಳ ಮೂಲಕ ದೇಶದ ಭದ್ರತೆಗೆ ಧಕ್ಕೆ ಉಂಟಾಗಬಹುದು ಮತ್ತು ಅಫ್ಘಾನಿಸ್ತಾನದಲ್ಲಿರುವ ಭಯೋತ್ಪಾದಕರು ಇಂತಹ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ಭಾರತಕ್ಕೆ ಪ್ರವೇಶಿಸಬಹುದು ಎಂದು ಭದ್ರತಾ ಏಜೆನ್ಸಿಗಳು ಆತಂಕ ವ್ಯಕ್ತಪಡಿಸಿವೆ.

ಕಾಬೂಲ್ ನಲ್ಲಿ ತಾಲಿಬಾನ್ ಆಕ್ರಮಣದ ನಂತರ, ಅನೇಕ ಖಾಸಗಿ ಟ್ರಾವೆಲ್ ಏಜೆಂಟರು ಅಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಐಎಸ್‌ಐಯ ಉರ್ದು ಮಾತನಾಡುವ ಭದ್ರತಾ ಪಡೆ  ಏಜೆಂಟ್ಗಳ ಮೇಲೆ ದಾಳಿ ಮಾಡಿತು, ಇದರಲ್ಲಿ ಅನೇಕ ಪಾಸ್‌ಪೋರ್ಟ್‌ಗಳ ಕಳ್ಳತನದ ವಿಷಯ ಬಹಿರಂಗವಾಗಿದೆ. ಈ ಟ್ರಾವೆಲ್ ಏಜೆಂಟ್ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಅಫಘಾನ್ ಪ್ರಜೆಗಳಿಗೆ ಕಾಬೂಲ್‌ನಲ್ಲಿ ಭಾರತೀಯ ವೀಸಾಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದರು.

ಆದರೂ, ಭಾರತ್ ಈಗಾಗಲೇ ಇದರ ಬಗ್ಗೆ ಎಚ್ಚರವಾಗಿದ್ದು, ಈಗ ಭಾರತ ಸರ್ಕಾರವು ಅಫ್ಘಾನಿಸ್ತಾನದ ಜನರು ಭಾರತಕ್ಕೆ ಇ-ವೀಸಾ ಮೂಲಕ ಮಾತ್ರ ಬರಲು ಅನುಮತಿ ನೀಡಿದೆ ಮತ್ತು ಎಲ್ಲಾ ಹಳೆಯ ಭಾರತೀಯ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಈಗ ಭಾರತಕ್ಕೆ ಬರಲು ಬಯಸುವ ಯಾವುದೇ ಆಫ್ಘನ್ ಪ್ರಜೆಗಳು ಇ-ವೀಸಾ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಸರ್ಕಾರವು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಮಾಹಿತಿ ಮುನ್ನೆಲೆಗೆ ಬಂದ ನಂತರ, ಭದ್ರತಾ ವ್ಯವಸ್ಥೆಗಳನ್ನು ಸಹ ಬಲಪಡಿಸಲಾಗಿದೆ.

ಭಾರತವು ತನ್ನ ಸ್ವಂತ ಮತ್ತು ಅಫಘಾನ್ ನಾಗರಿಕರನ್ನು ಕಾಬೂಲ್ ಮೂಲಕ ದೊಡ್ಡ ಪ್ರಮಾಣದಲ್ಲಿ ದೇಶದಿಂದ ಸ್ಥಳಾಂತರಿಸುವಲ್ಲಿ ನಿರತವಾಗಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಭಾರತೀಯ ವಾಯುಪಡೆಯ ವಿಮಾನ ಮತ್ತು ಏರ್ ಇಂಡಿಯಾ ನಿರಂತರವಾಗಿ ಕಾಬೂಲ್‌ನಿಂದ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಏತನ್ಮಧ್ಯೆ, ಭಯೋತ್ಪಾದಕ ತನ್ನ ಕೈಯಲ್ಲಿ ಭಾರತೀಯ ವೀಸಾ ಹೊಂದಿರುವ ಅಫ್ಘಾನ್ ಪಾಸ್‌ಪೋರ್ಟ್ ಪಡೆದರೆ, ಆತ ಭಾರತಕ್ಕೆ ತೊಂದರೆ ಸೃಷ್ಟಿಸಬಹುದು.
Previous Post Next Post