ವಯಸ್ಕರ ಚಿತ್ರ ವೀಕ್ಷಿಸಿದಕ್ಕಾಗಿ ಕೋಟಿಗಟ್ಟಲೆ ದಂಡ ವಿಧಿಸಿದ ನ್ಯಾಯಾಲಯ - ಯಾಕೆ ಗೊತ್ತಾ?

og:image

ವಯಸ್ಕರ ಚಿತ್ರ ವೀಕ್ಷಿಸಿದಕ್ಕಾಗಿ ಕೋಟಿಗಟ್ಟಲೆ ದಂಡ ವಿಧಿಸಿರುವ ಘಟನೆ ನಡೆದಿದೆ. ವಿಚಿತ್ರ ಅನಿಸಿದರೂ ಇದು ನಿಜ. 

ಲಂಡನ್ ಕ್ರೌನ್ ನ್ಯಾಯಾಲಯದಲ್ಲಿ ಒಂದು ಪ್ರಕರಣವನ್ನು ಅಕ್ಟೋಬರ್ 2019 ಮತ್ತು ನವೆಂಬರ್ 2020 ರ ನಡುವೆ ದಾಖಲಾಗಿತ್ತು ಮತ್ತು ಇತ್ತೀಚೆಗೆ  ವಿಚಾರಣೆ ನಡೆಸಲಾಯಿತು. ಈ ಕೇಸು ಏನೆಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರ. 

ಸ್ಥಳೀಯ ದಿನಪತ್ರಿಕೆಯೊಂದರ ವರದಿಗಳ ಪ್ರಕಾರ, ಡಾಕ್ಯುಮೆಂಟರಿ ಕಂಪನಿಯೊಂದರ ನಿರ್ಮಾಪಕ ಮಾರ್ಕ್ ಜೋಹಾನ್ ತನ್ನ ವ್ಯಸನಕ್ಕಾಗಿ ನ್ಯಾಯಾಲಯದಲ್ಲಿ 1 ಕೋಟಿ ರೂ. ದಂಡ ನೀಡಬೇಕಾಯಿತು. ಅವರ ವ್ಯಸನ ಏನು ಗೊತ್ತಾ?  ವಯಸ್ಕರ ಚಲನಚಿತ್ರಗಳನ್ನು ವೀಕ್ಷಿಸುವುದು.

ಇನ್ನು ವಯಸ್ಕರ ಚಲನಚಿತ್ರಗಳನ್ನು ವೀಕ್ಷಿಸುವುದಕ್ಕೆ ದಂಡ ಯಾಕೆ ನೀಡಬೇಕೆಂದು ಯೋಚಿಸಿತ್ತಿದ್ದೀರ?   ಮಾರ್ಕ್ ವಿವಿಧ ವಯಸ್ಕರ ವೆಬ್ಸೈಟ್ಗಳಲ್ಲಿ  ಕ್ರೆಡಿಟ್ ಕಾರ್ಡ್ ಬಳಸಿ ಮೆಂಬರ್ಸಿಪ್ ಪಡೆದಿದ್ದರು. ಆದರೆ ಅವರು ಕ್ರೆಡಿಟ್ ಕಾರ್ಡ್ ಬಳಸಿದ್ದು ಅವರು ಕೆಲಸ ಮಾಡುತ್ತಿದ್ದ ಕಂಪನಿಯದ್ದು.  ಹೇಗೋ ಕಂಪನಿಗೆ ಈ ವಿಷಯ ತಿಳಿದ ನಂತರ, ಕಂಪನಿಯು ಮಾರ್ಕ್ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿತು ನಂತರ ಪ್ರಕರಣವು ನ್ಯಾಯಾಲಯಕ್ಕೆ ಹೋಯಿತು. 

ಅನೇಕ ವಿಷಯಗಳು ಚಟಕ್ಕೆ ಕಾರಣವಾಗಬಹುದು - ಆಟಗಳು, ಆಹಾರ, ಪಾನೀಯಗಳು, ವೆಬ್ ಸಿರೀಸ್ ನೋಡುವುದು, ಇತ್ಯಾದಿ. ವ್ಯಸನವು ಜನರಿಗೆ ಕೆಟ್ಟದ್ದಾಗಿರಬಹುದು ಮತ್ತು ಕೆಲವೊಮ್ಮೆ ಇದು ಒಂದು ನಿರ್ದಿಷ್ಟ ವೆಚ್ಚದೊಂದಿಗೆ ಬರುತ್ತದೆ. ಆದರಿಂದ ನಮ್ಮ ವ್ಯಸನಗಳು ಯಾವಗ ನಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಎಂದು ಹೇಳೋದು ಕಷ್ಟ.  


Previous Post Next Post