ರಾಹುಲ್ ಗಾಂಧಿಗೆ ಡ್ರಗ್ ಟೆಸ್ಟ್ ಮಾಡಿಸಿ ಎಂದು ನಾಯಕನ ಒತ್ತಾಯ, #RahulDrugTest ಟ್ರೆಂಡ್

og:image

ಹೈದರಾಬಾದ್: ತೆಲಂಗಾಣದಲ್ಲಿ ಡ್ರಗ್ಸ್ ರಾಕೆಟ್ ಗೆ ತನ್ನ ಹೆಸರನ್ನು ಲಿಂಕ್ ಮಾಡಿದ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್, ನಾನು ಡ್ರಗ್ ಟೆಸ್ಟ್ ಮಾಡಿಸಲು ರೆಡಿಯಾಗಿದ್ದೇನೆ ಆದರೆ ನನ್ನ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಡ್ರಗ್ ಟೆಸ್ಟ್ಗೆ ಬರಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ತೆಲಂಗಾಣದಲ್ಲಿ  ವಿವಿಧ ಸೆಲೆಬ್ರಿಟಿಗಳು ಡ್ರಗ್ ದಂಧೆಯಲ್ಲಿ ಪಾಲ್ಗೊಂಡಿದ್ದು, ಕೆಟಿ ರಾಮರಾವ್ ಅವರನ್ನು ಡ್ರಗ್ಸ್ ಮತ್ತು ಮದ್ಯ ಮಾಫಿಯಾದ ಬ್ರಾಂಡ್ ಅಂಬಾಸಿಡರ್ ಎಂದು  ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರೋಪಿಸಿದ್ದರು.  ಇದರಿಂದ ಕುಪಿತಗೊಂಡ ರಾಮರಾವ್, ರಾಹುಲ್ ಗಾಂಧಿ ಹೆಸರನ್ನು ಡ್ರಗ್ ವಿಷಯದಲ್ಲಿ ಎಳೆತಂದಿದ್ದು, ಕಾಂಗ್ರೆಸ್ಸ್ ಗೆ ಇರಿಸು ಮುರಿಸು ಉಂಟಾಗಿದೆ. 

ಸರ್ಕಾರ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮುಂದುವರಿಸುವವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಕೆಟಿ ರಾಮರಾವ್ ಉಳಿದ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು.

ಈ ಹಿಂದೆ ಬಿಜೆಪಿ ನಾಯಕ ಸುಬ್ರಮಣ್ಯಮ್ ಸ್ವಾಮಿ, ರಾಹುಲ್ ಗಾಂಧಿ ಡ್ರಗ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಟಿಆರ್ ಎಸ್ಸ್ ನಾಯಕನ ಈ ಹೇಳಿಕೆಯ ನಂತರ ಟ್ವಿಟ್ಟರ್ನಲ್ಲಿ #RahulDrugTest ರಾಹುಲ್ ಡ್ರಗ್ ಟೆಸ್ಟ್ ಎಂದು ಟ್ರೆಂಡ್ ಆಗುತ್ತಿದೆ. 
Previous Post Next Post