ಆಮ್ ಅದ್ಮಿ ಸಚಿವ ಸತ್ಯೇಂದ್ರ ಜೈನ್ ಸುಲಿಗೆ ದಂಧೆ ನಡೆಸುತ್ತಿದ್ದಾರೆ - ಸುಖೇಶ್ ಚಂದ್ರಶೇಖರ್

og:image

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಸುಲಿಗೆ ದಂಧೆ ನಡೆಸುತ್ತಿದೆ ಎಂದು ಹವಾಲ ಕೇಸಿನಲ್ಲಿ ಸಿಲುಕಿರುವ ಸುಕೇಶ್ ಚಂದ್ರಶೇಖರ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಸ್ಫೋಟಕ ಪತ್ರ ಬರೆದು ಆರೋಪಿಸಿದ್ದಾರೆ, ಇದು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಮತ್ತು ಆಪ್ ಮಧ್ಯೆ ಕೋಲಾಹಲಕ್ಕೆ ಕಾರಣವಾಗಿದೆ.

ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ದೆಹಲಿಯಲ್ಲಿ ಸುಲಿಗೆ ದಂಧೆ ನಡೆಸುತ್ತಿದೆ ಎಂದು ಸುಕೇಶ್ ಚಂದ್ರಶೇಖರ್ ಮಾಡಿದ ಆರೋಪದ ಬೆನ್ನಿಗೇ, ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಆಪ್ ವಿರುದ್ಧ ವಾಗ್ದಾಳಿ ನಡೆಸಿದರು, ಆಮ್ ಆದ್ಮಿ ಪಕ್ಷವು  ಭ್ರಷ್ಟ ಮತ್ತು ಆಡಳಿತವಿಲ್ಲದ ಪಕ್ಷ ಎಂದು ಬಣ್ಣಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಲ್ಲಿದ್ದಾಗ  ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರಿಗೆ ರಕ್ಷಣೆಯ ಹಣವಾಗಿ 10 ಕೋಟಿ ರೂ.ಗಳನ್ನು ನೀಡಿದ್ದರು ಎಂದು ಜೈಲಿನಲ್ಲಿರುವ ಬಂಧಿತ  ತಮ್ಮ ಪತ್ರದಲ್ಲಿ ಆರೋಪಿಸಿದ್ದರು. ದಕ್ಷಿಣ ಭಾರತದಲ್ಲಿ ಪಕ್ಷದ ಹುದ್ದೆ ನೀಡುವ ಭರವಸೆ ನೀಡಿದ ನಂತರ ಜೈನ್‌ಗೆ ಇನ್ನೂ 50 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ಸುಕೇಶ್ ಅವರು ಆಮ್ ಆದ್ಮಿಯ 'ವಸೂಲಿ ಭಾಯ್'ಗೆ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಸುಕೇಶ್‌ನಿಂದ ಹಣ ಸ್ವೀಕರಿಸಿದ್ದಾರೆ. "ಎಎಪಿ ಮಾಡಬಾರದ್ದನ್ನು ಮಾಡುತ್ತಿದೆ" ಎಂದು ಅವರು ಹೇಳಿದರು.

ಎಎಪಿ ಮತ್ತು ಕೇಜ್ರಿವಾಲ್ ವಿರುದ್ಧ ದಾಳಿ ಆರಂಭಿಸಿದ ಕೇಂದ್ರ ಸಚಿವರು, “ಕೇಜ್ರಿವಾಲ್ ದೆಹಲಿಯಲ್ಲಿ ಏನು ಮಾಡಿದ್ದಾರೆ? ನೀವು ಹಗರಣಗಳಲ್ಲಿ ತೊಡಗಿದ್ದೀರಿ. ನೀವು ದೆಹಲಿಯಲ್ಲಿ ಸುಲಿಗೆ ದಂಧೆ ನಡೆಸುತ್ತಿದ್ದೀರಿ. ನೀವು ದೆಹಲಿಯಲ್ಲಿ ಮಾಡಿದ್ದು ಇದನ್ನೇ. ದೆಹಲಿಯಲ್ಲಿ ಯಮುನಾ ಕಲುಷಿತಗೊಂಡಿದೆ. ನಿಮ್ಮ ಪಕ್ಷ ದೆಹಲಿಯಲ್ಲಿ ಹಗರಣಗಳನ್ನು ಮಾಡುತ್ತಿದೆ. ನಿಮ್ಮ ಸಚಿವರು ಜೈಲಿನಲ್ಲಿ ಸುಲಿಗೆ ದಂಧೆ ನಡೆಸುತ್ತಿದ್ದಾರೆ.

200 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ಜೈಲಿನಲ್ಲಿದ್ದಾಗ ಆಮ್ ಆದ್ಮಿ ಪಕ್ಷ 20 ಜನರನ್ನು ಒಟ್ಟು ಸೇರಿಸಿ ಪಕ್ಷಕ್ಕೆ 500 ಕೋಟಿ ರೂ.ಗೂ ಹೆಚ್ಚು ಕೊಡುಗೆ ನೀಡುವಂತೆ ಒತ್ತಾಯಿಸಿದೆ ಎಂದು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
Previous Post Next Post