ಬೆಂಗಳೂರು ಕಾಮಿಕ್ ಕಾನ್ 2022 - ಅತ್ಯುತ್ತಮ ವಾರಾಂತ್ಯ ಅನುಭವಿಸಿದ ಅಭಿಮಾನಿಗಳು

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image

ಪತ್ರಿಕಾ ಪ್ರಕಟಣೆ 
ಬೆಂಗಳೂರು, 21 ನವೆಂಬರ್ 2022: ಕಾಮಿಕ್ ಕಾನ್ ಇಂಡಿಯಾ ತನ್ನ ಬಹು ನಿರೀಕ್ಷಿತ ಮಾರುತಿ ಸುಜುಕಿ ಅರೆನಾ ಬೆಂಗಳೂರು ಕಾಮಿಕ್ ಕಾನ್ ಅನ್ನು ಮೆಟಾ ಮತ್ತು ಕ್ರನ್ಸಿರೋಲ್ ಸಹಯೋಗದೊಂದಿಗೆ ಈ ವಾರಾಂತ್ಯದಲ್ಲಿ ಆಯೋಜಿಸಿತ್ತು. ಜ್ಯಾಮ್-ಪ್ಯಾಕ್ಡ್ಕಾ ಮಿಕ್ಸ್, ಕಲಾವಿದರು, ಕಾಸ್ ಪ್ಲೇಯರ್‌ಗಳು, ಸಂಗೀತಗಾರರು ಮತ್ತು ಸಂಪೂರ್ಣ ಮೋಜಿನ ಪ್ರದರ್ಶನಗಳಿಂದ ತುಂಬಿರುವ ಬೆಂಗಳೂರು ಕಾಮಿಕ್ ಕಾನ್ ನವೆಂಬರ್ 19 ಮತ್ತು 20, 2022 ರಂದು ನಡೆದಿದ್ದು, ಪಾಪ್ ಸಂಸ್ಕೃತಿಯನ್ನು ಅತ್ಯುತ್ತಮವಾಗಿ ಆಚರಿಸಲು ನಗರವು ಒಟ್ಟಾಗಿ ಸೇರಿದ್ದು ವಿಶೇಷವಾಗಿತ್ತು.

ಪಾಲ್ಗೊಂಡವರು ತಮ್ಮ ಆಂತರಿಕ ಅಭಿಮಾನವನ್ನು ಕಾಸ್ಪ್ಲೇ ಮಾಡಲು ಮತ್ತು ತಮ್ಮ ಗೀಕ್‌ಡಮ್ ಅನ್ನು ಪ್ರದರ್ಶಿಸಿದರು. ಇತರರು ಸಂವಹನ ಮತ್ತು ಪಂದ್ಯಾವಳಿಗಳು, ಚಟುವಟಿಕೆಗಳಲ್ಲಿ ಭಾಗವಹಿಸಿದರು. 2022 ರ ಆವೃತ್ತಿಯು ಅನಿಯಮಿತ ಪಾತ್ರಗಳಿಗೆ ನಿರಂತರವಾಗಿ ಹೆಚ್ಚಿದ ಅಭಿಮಾನ ಮತ್ತು ಪ್ರೀತಿಗೆ ಸಾಕ್ಷಿಯಾಯಿತು. ಹಲವರು ಕ್ಲಾಸಿಕ್‌ಗಳನ್ನು ಮರಳಿ ತಂದರು.

ಪ್ರದರ್ಶನಗಳ ಪೈಕಿ ನಮ್ಮವರೇ ಆದ ಬೆಂಗಳೂರಿನ ಜನಪ್ರಿಯ ಕಲಾವಿದೆ ಸಿರಿ ಅವರು ತಮ್ಮ ಶಕ್ತಿಯುತ ಧ್ವನಿಯಿಂದ ವೇದಿಕೆಯಲ್ಲಿ ಧೂಳೆಬ್ಬಿಸಿದರು. ನಂತರ ಬಾಂಬೆ ಲೋಕಲ್ ಮತ್ತು ಗೀಕ್ ಫ್ರುಟ್ ಎರಡೂ ದಿನಗಳಲ್ಲಿ ಹರಡಿತು. ಇಲ್ಯೂಷನಿಸ್ಟ್ ಕರಣ್ ಸಿಂಗ್ಮ್ಯಾ ಜಿಕ್ ಗೆ ಪ್ರೇಕ್ಷಕರು ಬೆರಗಾದರು. ಅಂತಿಮವಾಗಿ, ನಮ್ಮ ಪ್ರೀತಿಯ ಹಾಸ್ಯನಟರಾದ ಸಪನ್ ವರ್ಮಾ ಮತ್ತು ರೌನಕ್ ರಜನಿ ಎಲ್ಲರನ್ನು ರಂಜಿಸಿದರು.

ಕಾರ್ಯಕ್ರಮವು ಕಾಮಿಕ್ ಪುಸ್ತಕ ರಚನೆಕಾರರ ಪಟ್ಟಿಯನ್ನು ಒಳಗೊಂಡಿತ್ತು ಮತ್ತು ಭಾಗವಹಿಸುವವರಿಗಾಗಿ ವಿಶೇಷ ಸೆಷನ್‌ಗಳನ್ನು ಪ್ರಕಾಶನ ಸಂಸ್ಥೆಗಳು ಆಯೋಜಿಸಿದ್ದವು. ಜೋನಾಥನ್ ಕುಂಜ್ (ವಾರ್ ಆಂಡ್ ಪೀಸ್ ಲೇಖಕ) ರೇಮಂಡ್ ಬರ್ಮುಡೆಜ್ ಅವರೊಂದಿಗೆ ಸಂವಾದಾತ್ಮಕ ಸೆಷನ್, ಹೋಲಿ ಕೌ ಎಂಟರ್‌ಟೈನ್‌ಮೆಂಟ್‌ನ ಪುಸ್ತಕ ಬಿಡುಗಡೆಯೂ ನಡೆಯಿತು. ಬಕರ್ಮ್ಯಾಕ್ಸ್‌ನ ಸುಮಿತ್ ಅವರು ತಮ್ಮ ಲೇಖನಿಯ ಪ್ರಯಾಣದ ಮೂಲಕ ಅಭಿಮಾನಿಗಳನ್ನು ತೊಡಗಿಸಿಕೊಂಡರು. ಟಿಂಕಲ್ ಸ್ಟುಡಿಯೋಸ್ ಮತ್ತು ಅಮರ್ ಚಿತ್ರ ಕಥಾ ಆತಿಥ್ಯ ವಹಿಸಿದ ಅನೇಕ ಇತರ ಆಕರ್ಷಕ ಸೆಷನ್‌ಗಳಲ್ಲಿ ಪ್ರೇಕ್ಷಕರನ್ನು ಒಳಗೊಳ್ಳುವಂತೆ ಮಾಡಿದರು.

ನರುಟೊ, ಡೆತ್ ನೋಟ್, ಜುಜುಟ್ಸು ಕೈಸೆನ್ ಮತ್ತು ಇತರ ಜನಪ್ರಿಯ ಸರಣಿಗಳನ್ನು ಒಳಗೊಂಡ ಹಲವಾರು ಶೈಲಿಗಳನ್ನು ಪಾಪ್ಸಂಸ್ಕೃತಿಯ ಉತ್ಸಾಹಿಗಳಿಗಾಗಿ ಪ್ರದರ್ಶಿಸಲಾಯಿತು. ಮೆಟಾ ಝೋನ್, ವಾರ್ನರ್ ಬ್ರದರ್ಸ್ ಝೋನ್ ಮತ್ತು ಯುನಿವರ್ಸಲ್ ಪಿಕ್ಚರ್ಸ್ ಪಸ್ ಇನ್ ಬೂಟ್ಸ್: ದಿ ಲಾಸ್ಟ್ ವಿಶ್ ಪಾಪ್ ಗೀಕ್‌ಗಳನ್ನು ಸಂಗ್ರಹಿಸಿದವು, ಅದು ಎಸ್ಪೋರ್ಟ್ಸ್‌ನಿಂದ ದಿ ಅರೆನಾದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆದುಕೊಂಡಿತು. ಮಾರುತಿ ಸುಜುಕಿಯ ಅರೆನಾವು ಭವಿಷ್ಯದಲ್ಲಿ ಸಿಮ್ಯುಲೇಟೆಡ್ ಡ್ರೈವಿಂಗ್‌ನಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರಿಗೆ ವರ್ಚುವಲ್ ರಿಯಾಲಿಟಿ ಅನುಭವದೊಂದಿಗೆ ಅನುಭವದ ವಲಯವನ್ನು ಹೊಂದಿತ್ತು.

ಹಾಸ್ಯನಟ ಮತ್ತು ಬರಹಗಾರ ಸಪನ್ ವರ್ಮಾ, "ಕಾಮಿಕ್ ಕಾನ್ ಇಂಡಿಯಾ 10 ವರ್ಷಗಳನ್ನು ಪೂರೈಸಿದ ರೀತಿ ಆಶ್ಚರ್ಯಕರವಾಗಿದೆ. ನಾನೇ 4 ವರ್ಷಗಳಿಂದ ಅದರೊಂದಿಗೆ ಸಂಬಂಧ ಹೊಂದಿದ್ದೇನೆ. ಇದು ಬೆಂಗಳೂರು ಕಾಮಿಕ್ ಕಾನ್‌ನಲ್ಲಿ ನನ್ನ ಎರಡನೇ ವರ್ಷ. ಈ ಬಾರಿ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಇದು ನನ್ನ ಮೆಚ್ಚಿನವುಗಳಲ್ಲಿ ಒಂದಾಗಿದೆ. ನಗರಗಳಲ್ಲಿ ಪ್ರದರ್ಶನ ನೀಡಲು ಮತ್ತು ಎಲ್ಲಾ ವಯಸ್ಸಿನ ಜನರು ಇಲ್ಲಿ ನನ್ನ 40 ನಿಮಿಷಗಳ ಪ್ರದರ್ಶನವನ್ನು ಆನಂದಿಸುವುದನ್ನು ನೋಡಲು ಖುಷಿಯಾಗುತ್ತಿದೆ” ಎಂದರು.

ಎಲ್ಲಾ ಟಿಕೆಟ್ ಗಳು ಮಾರಾಟವಾದ ಈ ಪ್ರದರ್ಶನದಲ್ಲಿ ಪಾಲ್ಗೊಂಡ ಕಾಮಿಕ್ ಕಾನ್ ಇಂಡಿಯಾದ ಸಂಸ್ಥಾಪಕ ಜತಿನ್ ವರ್ಮಾ, “ಕಾಮಿಕ್ ಕಾನ್ ಇಂಡಿಯಾದೊಂದಿಗಿನ ನಮ್ಮ ಉದ್ದೇಶವು ಭಾರತೀಯ ಪಾಪ್ ಸಂಸ್ಕೃತಿ ಸಮುದಾಯವನ್ನು ಒಟ್ಟುಗೂಡಿಸುವುದು ಮತ್ತು ಎಲ್ಲಾ ಉತ್ಸಾಹಿಗಳಿಗೆ ಅವರ ಆಸಕ್ತಿದಾಯಕ ಕಲೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವುದಾಗಿದೆ. ಈ ಪ್ರಯತ್ನದಲ್ಲಿ ನಾವು ಒಂದು ದಶಕವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಇದನ್ನು ಮುಂದುವರಿಸಲು ಸಮರ್ಥರಾಗಿದ್ದೇವೆ ಎಂಬುದು ನಮಗೆ ಹೆಮ್ಮೆ ಕೊಡುವ ಸಂಗತಿಯಾಗಿದೆ. ಬೆಂಗಳೂರು ಕಾಮಿಕ್ ಕಾನ್ 2022 ರ ಯಶಸ್ಸಿನೊಂದಿಗೆ ಎರಡೂ ದಿನಗಳಲ್ಲಿ ಸುಮಾರು 45K ಸಂಖ್ಯೆಗೂ ಹೆಚ್ಚಿನ ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಇದು ದೆಹಲಿ ಮತ್ತು ಮುಂಬೈನಲ್ಲಿ ನಮ್ಮ ಮುಂಬರುವ ಕಾನ್ಸ್‌ಗಳ ಬಗ್ಗೆ ಅಪಾರ ಭರವಸೆಯನ್ನು ನೀಡುತ್ತದೆ!”

ಮಾರುತಿ ಸುಜುಕಿ ಅರೆನಾ ಬೆಂಗಳೂರು, ಮೆಟಾ ಚಾಲಿತ ಕಾಮಿಕ್ ಕಾನ್ ನವೆಂಬರ್ 19 ಮತ್ತು 20 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಕೈಗಾರಿಕಾ ಪ್ರದೇಶವಾದ ಕೆಟಿಪಿಒ ಟ್ರೇಡ್ ಸೆಂಟರ್‌ನಲ್ಲಿ ನಡೆಯಿತು. ದೆಹಲಿಯಲ್ಲಿ ಕಾಮಿಕ್ ಕಾನ್ 2022 ರ ಡಿಸೆಂಬರ್ 9, 10 ಮತ್ತು 11 ರಂದು ನಡೆಯಲಿದೆ ಮತ್ತು ಮುಂಬೈ 11 ನೇ 12 ನೇ ಫೆಬ್ರವರಿ 2023 ರಂದು ನಡೆಯಲಿದೆ











































ವೆಬ್‌ಸೈಟ್ ಲಿಂಕ್: www.comicconindia.com

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: Bangalore Comiccon 2022 news - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News