ಜಿಯೋ ಟಿವಿ ವರದಿಗಳ ಪ್ರಕಾರ ಗುರುವಾರ (ಅಕ್ಟೋಬರ್ 3) ಗುಜ್ರಾನ್‌ವಾಲಾದ ಅಲ್ಲಾವಾಲಾ ಚೌಕ್‌ನಲ್ಲಿರುವ ಇಮ್ರಾನ್ ಖಾನ್ ಅವರ ಸ್ವಾಗತ ಶಿಬಿರದ ಬಳಿ ಗುಂಡಿನ ಘಟನೆ ನಡೆದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ ಕಡೆಗೆ ಸರ್ಕಾರ ವಿರೋಧಿ ಲಾಂಗ್ ಮಾರ್ಚ್ ನಡೆಸುತ್ತಿದ್ದಾರೆ.
ಇಬ್ಬರು ದಾಳಿಕೋರರು ಇದ್ದರು ಎಂದು ವರದಿಗಳು ಸೂಚಿಸುತ್ತವೆ. ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಇಮ್ರಾನ್ ಖಾನ್ ಈಗ ಸುರಕ್ಷಿತವಾಗಿದ್ದು, ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಸಿಂಧ್‌ನ ಮಾಜಿ ಗವರ್ನರ್ ಫೈಸಲ್ ಜಾವೇದ್ ಮತ್ತು ಉಮರ್ ಚಟ್ಟಾ ಕೂಡ ಗಾಯಗೊಂಡಿದ್ದಾರೆ.
ಅವರ ಬಲಗಾಲಿಗೆ ಬ್ಯಾಂಡೇಜ್ ಹಾಕಿದ್ದು, ಎಸ್‌ಯುವಿ ವಾಹನದ ಮೂಲಕ ರವಾನೆಮಾಡಿರುವುದು ಎಂದು ವೀಡಿಯೊದಲ್ಲಿ ಕಂಡುಬಂದಿದೆ. ಇಬ್ಬರು ದಾಳಿಕೋರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಇಸ್ಲಾಮಾಬಾದ್‌ಗೆ ನಡೆಯುತ್ತಿರುವ ಲಾಂಗ್ ಮಾರ್ಚ್ ಅನ್ನು ಉದ್ದೇಶಿಸಿ ಮಾತನಾಡುತ್ತಿದ ವೇಳೆ,ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ.
ಇಮ್ರಾನ್ ಅಹ್ಮದ್ ಖಾನ್ ನಿಯಾಜಿ ಅವರು ಆಗಸ್ಟ್ 2018 ರಿಂದ ಏಪ್ರಿಲ್ 2022 ರವರೆಗೆ ಪಾಕಿಸ್ತಾನದ 22 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳಿಸಲಾಯಿತು.