ಮಲಯಾಳಂಗೆ ಹಾರಿದ ರಾಜ್ ಬಿ ಶೆಟ್ಟಿ - ನಾಯಕಿ ಯಾರು ಗೊತ್ತಾ?

Admin
og:image

ಕನ್ನಡದಲ್ಲಿ ಸುಪರ್ ಹಿಟ್ "ಗರುಡ ಗಮನ ವ್ರಿಷಭ ವಾಹನ" ಚಿತ್ರ ನೀಡಿ ಗೆಲುವಿನ ನಗೆ ಬೀರುತ್ತಿರುವ ಬೆನ್ನಲ್ಲೇ, ರಾಜ್ ಬಿ ಶೆಟ್ಟಿ ಮಲಯಾಳಂನಲ್ಲಿ ಅಪರ್ಣಾ ಬಾಲಮುರಳಿ ಜೊತೆ "ರುಧಿರಂ" ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. 

ನಟ ನಿರ್ದೇಶಕರು ಇನ್‌ಸ್ಟಾಗ್ರಾಮ್‌ನಲ್ಲಿ 'ದಿ ಆಕ್ಸ್ ಫರ್ಗೆಟ್ಸ್, ಆದರೆ ದ ಟ್ರೀ ರಿಮೆಂಬರ್ಸ್' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ, ಇದು ಇದು ಸೇಡು ತೀರಿಸಿಕೊಳ್ಳುವ ಥ್ರಿಲ್ಲರ್ ಚಿತ್ರವಾಗಬಹುದು ಎಂದು ಸುಳಿವು ನೀಡುತ್ತದೆ. 

ಅಪರ್ಣಾ ಬಾಲಮುರಳಿ ಈಗಾಗಲೇ ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿದ್ದು, ಸೂರರೈ ಪೊಟ್ರು, ಸುಂದರಿ ಗಾರ್ಡನ್ಸ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಇನ್ನೂ ಬಿಡುಗಡೆಯಾಗದ ಧೂಮಮ್ ಚಿತ್ರದಲ್ಲೂ ಅಪರ್ಣಾ ನಾಯಕಿ. 

ಇನ್ನು 2023 ರಿಂದ  "ರುಧಿರಂ" ಚಿತ್ರದ  ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

Rudhiram, Raj B Shetty Aprana Balamurali Malayalam movie

#buttons=(Accept !) #days=(20)

Our website uses cookies to enhance your experience. Learn More
Accept !