4 ವರ್ಷಗಳ ನಂತರ ಶಾರುಖ್ ಖಾನ್ ಅಭಿನಯದ 'ಪಠಾಣ್' ನೊಂದಿಗೆ ಪುನರಾಗಮನವು ದೇಶದಾದ್ಯಂತ ಹಬ್ಬದಂತಹ ಆಚರಣೆಗಳಿಗೆ ಕಾರಣವಾಗಿದೆ! ದೇಶದಲ್ಲೆಡೆ ಅಭಿಮಾನಿಗಳು ಮುಗಿಬಿದ್ದು ಚಿತ್ರ ನೋಡುತ್ತಿದ್ದು ಎಲ್ಲೆಡೆ ದಾಖಲೆ ಬರೆಯುತ್ತಿದೆ.
ರಶ್ಮಿಕಾ, ಗಣರಾಜ್ಯೋತ್ಸವದಂದು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದರೂ, ಪಠಾಣ್' ವೀಕ್ಷಿಸಲು ರಶ್ಮಿಕಾ ತಾನು ಅಭಿನಯಿಸುತ್ತಿರುವ 'ಅನಿಮಲ್' ಚಿತ್ರತಂಡ ಮತ್ತು ಸಿಬ್ಬಂದಿಯ ಜೊತೆ ಹೋಗಿದ್ದರು. 'ಅನಿಮಲ್' ಚಿತ್ರದಲ್ಲಿ ಮೊದಲ ಬಾರಿಗೆ ರಣಬೀರ್ ಕಪೂರ್ ಜೊತೆಗೆ ಸ್ಕ್ರೀನ್‌ಸ್ಪೇಸ್ ಅನ್ನು ಹಂಚಿಕೊಂಡಿದ್ದಾರೆ. ಚಿತ್ರ ನೋಡಿದ ಬಳಿಕ ರಶ್ಮಿಕಾ, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮತ್ತು ಚಲನಚಿತ್ರ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರನ್ನು ಹೊಗಳಿ ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿದ್ದರು.
ಈ ಹಿಂದೆ ದೇಶದಲ್ಲೆಡೆ ಸಂಚಲನ ಸೃಷ್ಟಿಸಿದ್ದ "ಕಾಂತಾರ" ಚಿತ್ರವನ್ನು ನೋಡಿದ್ದೀರಾ ಎಂದು ಪತ್ರಕರ್ತರು ಕೇಳಿದ್ದಾಗ, ನನಗೆ ಸಮಯ ಸಿಗಲಿಲ್ಲ ಎಂದು ಹೇಳಿದ್ದನ್ನು ಇದೀಗ ಸ್ಮರಿಸಿರುವ ನೆಟ್ಟಿಗರು, ರಶ್ಮಿಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ರಣಬೀರ್ ಕಪೂರ್ ಅವರ ಮುಂದಿನ 'ಅನಿಮಲ್' ಚಿತ್ರದ ಚಿತ್ರೀಕರಣಕ್ಕಾಗಿ ಪ್ರಸ್ತುತ ದೆಹಲಿಯಲ್ಲಿರುವ ರಶ್ಮಿಕಾ ಮಂದಣ್ಣ, ಪ್ರಸ್ತುತ 'ವರಿಸು' ಮತ್ತು 'ಮಿಷನ್ ಮಜ್ನು' ಯಶಸ್ಸಿನ ಅಲೆಯಲ್ಲಿದ್ದಾರೆ.